20.5 C
Bengaluru
Tuesday, July 9, 2024

ನಿಮ್ಮ ಹಣವನ್ನು ಎಫ್ʼಡಿ ಮಾಡುವ ಆಲೋಚನೆ ಇದ್ದರೆ, ತಪ್ಪದೇ ಈ ವಿಚಾರಗಳನ್ನು ತಿಳಿಯಿರಿ..

ಬೆಂಗಳೂರು, ಡಿ. 21: ಪ್ರತಿಯೊಬ್ಬರಿಗೂ ಹಣ ಉಳಿತಾಯ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ, ಎಲ್ಲಾ ಸಮಯದಲ್ಲೂ ಹಣ ಉಳಿತಾಯ ಮಾಡುವುದು ಕಷ್ಟದ ಕೆಲಸವೇ ಸರಿ. ಆದರೂ ಹೇಗಾದರೂ ಮಾಡಿ ಹಣವನ್ನು ಉಳಿತಾಯವನ್ನು ಮಾಡಿ ಅದನ್ನು ಎಫ್ʼಡಿ ಮಾಡಬೇಕು ಎಂದು ಆಲೋಚಿಸುತ್ತೀರಾ. ಇನ್ನೂ ಕೆಲವರಿಗೆ ಯಾವುದಾದರೂ ಬಾಕಿ ಹಣವೋ ಇಲ್ಲವೇ, ಬೋನಸ್ ಹಣವೋ ಬಂದಾಗ ಅದನ್ನು ಎಫ್ʼಡಿ ಮನಸ್ಸು ಮಾಡಿದ್ದರೆ, ಅದಕ್ಕೂ ಮುನ್ನ ಈ ಸುದ್ದಿಯನ್ನು ಓದಿ.

ಎಫ್ʼಡಿ ಮಾಡುವ ಮೊದಲು ನೀವು ಎಫ್ʼಡಿ ಮೇಲೆ ಸಾಲವನ್ನು ಪಡೆಯಬಹುದಾ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಸಾಲ ತೆಗೆದುಕೊಳ್ಳುವುದಾದರೆ ಹೇಗೆ.? ಆ ಸಾಲಕ್ಕೆ ಬ್ಯಾಮಕ್ ವಿಧಿಸುವ ಬಡ್ಡಿ ದರವೆಷ್ಟು ಎಂಬುದನ್ನು ತಿಳಿದುಕೊಳ್ಳಿ. ತುರ್ತು ಸಂದರ್ಭದಲ್ಲಿ ಮೆಚ್ಯುರಿಟಿಗೂ ಮುನ್ನವೇ ಎಫ್ʼಡಿ ಹಣವನ್ನು ಪಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಗಮನವಿಡಿ. ಯಾವ ಬ್ಯಾಂಕಿನಲ್ಲಿ ಎಫ್ʼಡಿ ಇಟ್ಟರೆ ಬಟ್ಟಿದರ ಹೆಚ್ಚಿದೆ ಎಂಬುದನ್ನು ಕಂಪೇರ್ ಮಾಡಿ. ಇನ್ನು ಎಫʼಡಿ ಇಡಲು ಯಅವ ಬ್ಯಾಂಖ ಃಏಛಛೂ ಶೇಫ್ ಎಂಬುದನ್ನು ತಪ್ಪದೇ, ತಿಳಿದುಕೊಳ್ಳಿ.

ಎಫ್ʼಡಿ ಎಂದರೇನು..?
ಎಫ್ʼಡಿ ಎಂದರೆ ಸ್ಥಿರ ಠೇವಣಿ/ ಫಿಕ್ಸೆಡ್ ಡೆಪಾಸಿಟ್. ನಿಗದಿತ ಅವಧಿಗೆ ಬ್ಯಾಂಕಿನಲ್ಲಿ ಠೇವಣಿ ಮಾಡುವುದನ್ನೇ ಎಫ್ʼಡಿ ಎಂದು ಹೇಳಲಾಗಿದೆ. ಹೀಗೆ ಠೇವಣಿ ಮಾಡಿದ ಹಣಕ್ಕೆ ಬ್ಯಾಂಕ್ ನಿಂದ ಬಡ್ಡಿ ಕೂಡ ಸಿಗುತ್ತದೆ. ಹಣಕಾಸಿನ ಸಮಸ್ಯೆಗೆ ಈ ಎಫ್ʼಡಿ ಹಣದ ಮೂಲಕ ಸಹಾಯ ಪಡೆಯಬಹುದು. ಆದರೆ, ಬೇಕೆಂದಾಗ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಮೆಚ್ಯುರಿಟಿಯ ನಂತರವೇ ಎಫ್ʼಡಿ ಹಣ ಬಡ್ಡಿ ಸಮೇತ ನಿಮ್ಮ ಕೈ ಸೇರುತ್ತದೆ. ಅದಕ್ಕೂ ಮುನ್ನವೇ ಹಣ ಪಡೆಯಲು ಬ್ಯಾಂಕ್ ನಲ್ಲಿ ಅವಕಾಶವಿದೆ. ಆದರೆ, ನೀವು ಫೈನ್ ಕಟ್ಟಿ ನಿಮ್ಮ ಹಣವನ್ನು ಹಿಂಪಡೆಯಬೇಕಾಗುತ್ತದೆ.

ಎಫ್‌ʼಡಿ ಮೂಲಕ ಸಾಲ:
ನೀವು ಎಫ್ ಡಿ ಮಾಡಿಟ್ಟಿರುವ ಹಣದ ಮೂಲಕ ಸಾಲವನ್ನು ಕೂಡ ತೆಗೆದುಕೊಲ್ಳುವ ಅವಕಾಶವಿದೆ. ಸಾಲದ ಅವಧಿಗೂ ಎಫ್ʼಡಿ ಅವಧಿಯೂ ಒಂದೇ ಆಗಿರುತ್ತದೆ. ಎಫ್ʼಡಿಯ ಒಟ್ಟು ಮೊತ್ತದ ಮೇಲೆ ಸುಮಾರು ಶೇ.70 ರಷ್ಟನ್ನು ಸಾಲ ಪಡೆಯಲು ಅವಕಾಶವಿರುತ್ತದೆ. ಇನ್ನು ಎಫ್ʼಡಿ ಇಟ್ಟ ಹಣಕ್ಕೆ ಬರುವ ಬಡ್ಡಿಗಿಂತಲೂ ಶೇ.2 ರಷ್ಟು ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಎಫ್‌ʼಡಿ ಮಾಡುವ ಮುನ್ನ ಈ ವಿಚಾರದ ಬಗ್ಗೆಯೂ ತಿಳಿದುಕೊಂಡು ಮಾಡಿದರೆ ಸೂಕ್ತ.

ಎಫ್ ಡಿಯಲ್ಲಿ ಎರಡು ವಿಧ:
ಮೊಲನೇಯದು ಕ್ಯುಮಿಲೇಟಿವ್ ಎಫ್ʼಡಿ. ಕ್ಯುಮಿಲೇಟಿವ್‌ ಎಫ್‌ʼಡಿಯಲ್ಲಿ ನಿಮ್ಮ ಹಣದ ಮೇಲಿನ ಬಡ್ಡಿಹಣವೂ ಅದರ ಜೊತೆಗೆ ಸೇರಿಕೊಂಡು ಒಟ್ಟಿಗೆ ಕೊನೆಯಲ್ಲಿ ನಿಮ್ಮ ಕೈಸೇರುತ್ತದೆ. ಂತ್ತೊಂದು ನಾನ್ ಕ್ಯುಮಿಲೇಟಿವ್ ಎಫ್ʼಡಿ. ಇದರಲ್ಲಿ ನಿಮ್ಮ ಎಫ್‌ʼಡಿ ಹಣದ ಮೇಲಿನ ಬಡ್ಡಿಯೂ ಪ್ರತೀ ತಿಂಗಳು ಅಥವಾ ಮೂರು ತಿಂಗಳಿಗೆ ಒಮ್ಮೆ ನಿಮ್ಮ ಸೇವಿಂಗ್ಸ್‌ ಖಾತೆಗೆ ಜಮಾ ಆಗುತ್ತದೆ.

ಎಫʼಡಿ ಮೇಲಿನ ತೆರಿಗೆ:
ಇನ್ನು ಎಫ್‌ʼಡಿಯಲ್ಲಿ ಹಣವನ್ನು ಹೂಡಿದರೆ ಅದು ಸುರಕ್ಷಿತವಾಗಿರುತ್ತದೆ. ಆದಾಯ ತೆರಿಗೆಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ಸರ್ಕಾರ ತೆರಿಗೆಯನ್ನು ವಿಧಿಸುತ್ತದೆ. ಆದರೆ, 1.5 ಲಕ್ಷಕ್ಕಿಂತಲೂ ಹೆಚ್ಚಿನ ಹಣವನ್ನು ಎಫ್‌ʼಡಿ ಮಾಡಿದರೆ ಮಾತ್ರವೇ ತೆರಿಗೆ ಕಟ್ಟಬೇಕು. ಒಂದೂವರೆ ಲಕ್ಷಕ್ಕೂ ಕಡಿಮೆ ಹಣವನ್ನು ಠೇವಣಿ ಮಾಡಿದರೆ, ಅದಕ್ಕೆ ಸರ್ಕಾರ ತೆರಿಗೆ ವಿಧಿಸುವುದಿಲ್ಲ. ತೆರಿಗೆಯಿಂದ ತಪ್ಪಿಸಿಕೊಳ್ಳಬೇಖೆಂದರೆ ಬ್ಯಾಂಕ್‌ ಫಾರ್ಮ್‌ ಅನ್ನು ಭರ್ತಿ ಮಾಡಬೇಕು. 15ಎ ಫಾರ್ಮ್‌ ಅನ್ನು ಭರ್ತಿ ಮಾಡಿ ಬ್ಯಾಂಕ್‌ ಗೆ ನೀಡಬೇಕು. ಹಿರಿಯ ನಾಗರಿಕರು 15ಎಚ್‌ ಫಾರ್ಮ್‌ ಅನ್ನು ತುಂಬಬೇಕು.

Related News

spot_img

Revenue Alerts

spot_img

News

spot_img