ಬೆಂಗಳೂರು, ಡಿ. 21: ಮನೆಯಲ್ಲಿ ಎಷ್ಟೇ ಜೋಪಾನವಾಗಿಟ್ಟರು ಕೆಲ ಬೆಲೆ ಬಾಳುವ ಚಿನ್ನ-ಬೆಳ್ಳಿ ಅಥವಾ ಆಸ್ತಿ ಪತ್ರಗಳು ಕಳೆದು ಹೋಗುವ ಸಾಧ್ಯತೆಗಳಿರುತ್ತದೆ. ಇನ್ನು ಸಿರಿವಂತರ ಮನೆಯಲ್ಲಿ ಯಾವಾಗ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಒಂದು ದಿನ ಮರೆತರೂ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿ ಬಿಡುತ್ತಾರೆ. ಕಷ್ಟ ಪಟ್ಟು ಸಂಪಾದಿಸಿದ ಒಡವೆಗಳನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗುತ್ತದೆ ಎಂಬ ಗ್ಯಾರೆಂಟಿ ಇರುವುದಿಲ್ಲ. ಮನೆಯಲ್ಲಿ ಲ್ಕಷಾಂತರ ರೂಪಾಯಿ ಬೆಲೆ ಬಾಳುವ ಒಡವೆಯನ್ನು ಇಟ್ಟುಕೊಂಡು ನೆಮ್ಮದಿಯಾಗಿರಲು ಕೂಡ ಸಾಧ್ಯವಿಲ್ಲ. ಅದರ ಬದಲು ಬ್ಯಾಂಕ್ ಲಾಕರ್ ನಲ್ಲಿ ಇಟ್ಟರೆ ಒಳ್ಳೆಯದಲ್ಲವೇ..?
ಈಗಂತೂ ಬಹುತೇಕ ಬ್ಯಾಂಕ್ ಗಳು ಲಾಕರ್ ವ್ಯವಸ್ಥೆಯನ್ನು ಗ್ರಾಹಕರಿಗೆ ಕಲ್ಪಿಸಿಕೊಟ್ಟಿದೆ. ಮನೆಯಲ್ಲಿ ದೊಡ್ಡ ಮಟ್ಟದ ಹಣ, ಒಡವೆಗಳನ್ನು ಇಡುವುದಕ್ಕಿಂತಲೂ ಬ್ಯಾಂಕ್ ನಲ್ಲಿ ಇಡುವುದೇ ಕ್ಷೇಮ. ನೀವೇನಾದರೂ ಬ್ಯಾಂಕ್ ಲಾಕರ್ ನಲ್ಲಿ ನಿಮ್ಮ ಬೆಲೆ ಬಾಳುವ ವಸ್ತುವನ್ನು ಇಡಬೇಕೆಂದಿದ್ದರೆ, ಯಾವ ಬ್ಯಾಂಕ್ ಎಷ್ಟು ಚಾರ್ಜ್ ಮಾಡುತ್ತದೆ ಎಂಬುದನ್ನು ತಿಳಿಯಿರಿ..
ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಂಜಾಬ್ ಬ್ಯಾಂಕ್ ನಲ್ಲಿ ಪಟ್ಟಣದಂತಹ ಪ್ರದೇಶಲ್ಲಿ ಲಾಕರ್ ಗೆ ವಾರ್ಷಿಕ 2000 ದಿಂದ 10000 ರೂ. ವರೆಗೆ ಚಾರ್ಜ್ ಮಾಡುತ್ತದೆ. ಅದೇ, ಗ್ರಾಮೀಣ ಪ್ರದೇಶದಲ್ಲಾದರೆ, 1250 ರೂಪಾಯಿಗಳನ್ನು ಚಾರ್ಜ್ ಮಾಡುತ್ತದೆ.
ಎಚ್.ಡಿ.ಎಫ್.ಸಿ ಬ್ಯಾಂಕ್: ಎಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಗ್ರಾಮೀಣ ಪ್ರದೇಸಲ್ಲಿ ಸಣ್ಣ ಗಾತ್ರದ ಲಾಕರ್ ಗೆ ವಾರ್ಷಿಕ 550ರೂ.ಗಳನ್ನು ಚಾರ್ಜ್ ಮಾಡುತ್ತದೆ. ಅದೇ ಮೆಟ್ರೋ ಪ್ರದೇಶದಲ್ಲಾದರೆ 20,000 ರೂ.ವರೆಗೂ ವಾರ್ಷಿಕ ಶುಲ್ಕವನ್ನು ತೆಗೆದುಕೊಳ್ಳುತ್ತದೆ.
ಎಸ್.ಬಿಐ ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಲಾಕರ್ ಗೆ 500ರೂ.ನಿಂದ 3,000ರೂ ವರೆಗೆ ಚಾರ್ಜ್ ಮಾಡಲಾಗುತ್ತದೆ. ಇನ್ನು ಪಟ್ಟಣದಲ್ಲಿ ಸಣ್ಣ ಗಾತ್ರದ ಲಾಕರ್ ಗೆ 2000 ರೂಗಳನ್ನು ಚಾರ್ಜ್ ಮಾಡುತ್ತದೆ. ಅದರಂತೆ, ಮದ್ಯ ಗಾತ್ರದ ಲಾಕರ್ ಗೆ ರೂ.4000 ಗಳ ಶುಲ್ಕವನ್ನು ವಿಧಿಸುತ್ತದೆ. ದೊಡ್ಡ ಲಾಕರ್ ಗೆ 8000 ರೂಪಾಯಿ ಒದ್ದರೆ, ಅದಕ್ಕಿಂತಲೂ ದೊಡ್ಡ ಲಾಕರ್ ಗೆ 12000 ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳುತ್ತದೆ.