ಬೆಂಗಳೂರು, ಜೂ. 27 : ವಾರ್ಷಿಕವಾಕವಾಗಿ ಏಳು ಲಕ್ಷಕ್ಕೂ ಅಧಿಕ ಆದಾಯ ಗಳಿಸುವ ಪ್ರತಿಯೊಬ್ಬ ವ್ಯಕ್ತಿಯು ತೆರಿಗೆಯನ್ನು ಕಟ್ಟಬೇಕು. ಆದರೆ, ಭಾರತದಲ್ಲಿ ಕೆಲ ಆದಾಯಗಳಿಗೆ ಯಾವುದೇ ಕಾರಣಕ್ಕೂ ತೆರಿಗೆಯನ್ನು ಕಟ್ಟುವಂತಿಲ್ಲ. ಅದು ಯಾವ ಆದಾಯಕ್ಕೆ.? ಯಾವ ಸೆಕ್ಷನ್ ಅಡಿಯಲ್ಲಿ ಅನ್ವಯಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.
ಮೊದಲನೇಯದಲ್ಲಿ ಭಾರತದಲ್ಲಿ ಕೃಷಿ ಮಾಡಿ ಗಳಿಸಿದ ಆದಾಯಕ್ಕೆ ತೆರಿಗೆಯನ್ನು ಪಾವತಿಸುವಂತಿಲ್ಲ. ಅಂದರೆ, ವ್ಯವಸಾಯ ಮಾಡುವವರು ತೆರಿಗೆಯಿಂದ ಹೊರಗುಳಿಯಬಹುದು. ಆದಾಯ ತೆರಿಗೆ ಕಾಯಿದೆ 1961 ಕೃಷಿಯಿಂದ ಬರುವ ಆದಾಯವನ್ನು ತೆರಿಗೆಯನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ಎರಡನೇಯದಾಗಿ ಹಿಂದೂ ಅವಿಭಜಿತ ಕುಟುಂಬದಿಂದ ಪಡೆದ ಮೊತ್ತಕ್ಕೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(2) ಅಡಿಯಲ್ಲಿ ಅವಿಭಾಜಿತ ಕುಟುಂಬದಿಂದ ಪಡೆದ ಆದಾಯಕ್ಕೆ ತೆರಿಗೆ ಇಲ್ಲ.
ಇನ್ನು ಉಳಿತಾಯ ಖಾತೆಯ ಮೂಲಕ ನಿಮಗೆ ಬರುವ ಬಡ್ಡಿಯ ಹಣಕ್ಕೆ ಯಾವುದೇ ತೆರಿಗೆಯನ್ನು ಪಾವತಿ ಮಾಡುವಂತಿಲ್ಲ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80TTA ಅಡಿಯಲ್ಲಿ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿದ್ದ ಮೊತ್ತಕ್ಕೆ ಬರುವ ಬಡ್ಡಿಗೆ ತೆರಿಗೆ ಪಾವತಿಸುವಂತಿಲ್ಲ. ಇನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುವಾತ ಪಡೆಯುವ ಗ್ರಾಚ್ಯುಟಿಗೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಸಿಗುತ್ತದೆ. ವಿಆರ್ ಎಸ್ ಪಡೆಯುವ ವ್ಯಕ್ತಿ ತೆಗೆದುಕೊಳ್ಳುವ ಹಣಕ್ಕೂ ತೆರಿಗೆ ಇರುವುದಿಲ್ಲ.
ಅಂದರೆ, ವಿಆರ್ ಎಸ್ ಸಮಯದಲ್ಲಿ ಪಡೆಯುವ ಹಣಕ್ಕೆ ಸೆಕ್ಷನ್ 2ಬಿಎ ಅಡಿಯಲ್ಲಿ, ಐದು ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯ್ತಿ ಇದೆ. ಇನ್ನು ಕೊನೆಯದಾಗಿ ವಿದ್ಯಾರ್ಥಿಗಳು ಪಡೆಯುವ ಸ್ಕಾಲರ್ ಶಿಪ್ ಗೂ ತೆರಿಗೆ ವಿನಾಯ್ತಿ ಇದೆ. ತೆರಿಗೆ ಕಾಯಿದೆಯ ಸೆಕ್ಷನ್ 10 (16) ಅಡಿಯಲ್ಲಿ ವಿದ್ಯಾರ್ಥಿ ವೇತನ ಹಾಗೂ ಪ್ರಶಸ್ತಿಗಳಲ್ಲಿ ಬಂದ ಮೊತ್ತಕ್ಕೆ ವಿನಾಯ್ತಿ ಸಿಗುತ್ತದೆ. ಹಾಗಾಗಿ ನೀವು ತೆರಿಗೆ ಪಾವತಿಸುವಾಗ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪಾವತಿ ಮಾಡಿ.