ಬೆಂಗಳೂರು, ಜು. 17 : ನೀವೂ ಮನೆಯನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ, ಮೊದಲು ಆ ಮನೆಯನ್ನು ಖರೀದಿ ಮಾಡುವುದರಿಂದ ನಿಮಗೆ ಯಾವೆಲ್ಲಾ ರೀತಿಯ ಲಾಭಗಳಿವೆ ಎಂಬುದನ್ನು ತಿಳಿಯಿರಿ. ಈಗ ಯಾರಿಗೂ ಹೆಚ್ಚಾಗಿ ನಿವೇಶನವನ್ನು ಖರೀದಿ ಮಾಡಿ, ಜಾಗ್ರತೆ ವಹಿಸಿ ಮನೆ ನಿರ್ಮಾಣ ಮಾಡುವ ತಾಳ್ಮೆ ಇಲ್ಲ. ಹಾಗಾಗಿಯೇ ಹೆಚ್ಚು ಮಂದಿ ಅಪಾರ್ಟ್ ಮೆಂಟ್ ಗಳ ಮೊರೆ ಹೋಗುತ್ತಾರೆ. ಇನ್ನು ಕೆಲವರು ಮನೆಯನ್ನು ಖರೀದಿ ಮಾಡುತ್ತಾರೆ. ಆದರೆ, ಇದನ್ನು ನಿರ್ಮಾಣ ಮಾಡಿ ಎಷ್ಟು ವರ್ಷಗಳಾಗಿವೆ ಎಂಬುದನ್ನು ತಿಳಿಯುವುದು ಹೇಗೆ..?
ಒಂದು ಮನೆಯನ್ನು ಕಾಂಕ್ರೀಟ್ ನಿಂದ ನಿರ್ಮಾಣ ಮಾಡಿದ್ದರೆ ಅದಕ್ಕೆ, 75-100 ವರ್ಷ ಆಯಸ್ಸು ಎಂದು ಹೇಳಲಾಗುತ್ತದೆ. ಇನ್ನು ಅಪಾರ್ಟ್ ಮೆಂಟ್ ಗಳಿಗೆ ಆಯಸ್ಸು 50-60 ವರ್ಷ ಎಂದು ಹೇಳಬಹುದು. ಆದರೆ, ಹಳೆ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸುತ್ತಿದ್ದ ಮನೆಗಳು ಹೆಚ್ಚು ಕಾಲ ಬಾಳಿಕೆ ಬರುತ್ತಿತ್ತು ಎಂದು ಹೇಳಲಾಗಿದೆ. ಆದರೆ, ನೀವು ಖರೀದಿಸಬೇಕು ಎಂದಿರುವ ಮನೆ ಅಥವಾ ಫ್ಲಾಟ್ ನಿರ್ಮಾಣ ಮಾಡಿರುವುದು ಎಂಬುದನ್ನು ತಿಳಿಯಲು ತಜ್ಞರನ್ನು ಸಂಒರ್ಕಿಸಿ. ಅವರಿಂದ ಮಾಹಿತಿಯನ್ನು ಪಡೆಯಿರಿ.
ಯಾಕೆಂದರೆ, ಅಕಸ್ಮಾತ್ 45-50 ವರ್ಷ ಹಳೆಯ ಮನೆಯನ್ನು ನೀವು ಖರೀದಿಸಿದಲ್ಲಿ ಮನೆಯ ರಿಪೇರಿ ಕೆಲಗಳೇ ಹೆಚ್ಚಿರುತ್ತವೆ. ಆಗ ಮನೆಯ ರಿಪೇರಿಗಾಗಿ ನೀವು ಮತ್ತೆ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಅದರಿಂದ ನಮಗೆ ಅನಾನುಕೂಲಗಳ ಜೊತೆಗೆ ಖರ್ಚು ಕೂಡ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಮೊದಲು ನೀವು ಖರೀದಿಸುತ್ತಿರುವ ಮನೆಯ ಆಯಸ್ಸು ಹಾಗೂ ನಿರ್ಮಾಣ ಮಾಡಿ ಎಷ್ಟು ಕಾಲವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಇದು ನಿಮಗೆ ಮುಂದೆ ಬರಬಹುದಾದಂತಹ ಕೆಲ ಖರ್ಚುಗಳನ್ನು ಹಾಗೂ ಶ್ರಮವನ್ನು ಕಡಿಮೆ ಮಾಡುತ್ತದೆ.