ಬೆಂಗಳೂರು, ಮಾ. 11 : ಬಾಡಿಗೆ ಕಟ್ಟಿ ಕಟ್ಟಿ ಸಾಕಾದವರೆಲ್ಲಾ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂದು ಆಸೆ ಪಡುವುದು ತಪ್ಪೇನಲ್ಲ. ಆದರೆ, ಸ್ವಂತ ಮನೆಯನ್ನು ಖರೀದಿಸುವುದು ಸುಲಭದ ಮಾತೂ ಅಲ್ಲ. ಕೊನೆಗಾಲದಲ್ಲಾದರೂ ಸ್ವಂತ ಮನೆಯಲ್ಲಿ ನೆಲೆಸಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಈಗ ಭಾರತದಲ್ಲಿ ಬಹುತೇಕರು ಸ್ವಂತ ಮನೆಯನ್ನು ಖರೀದಿಸಲು ಹವಣಿಸುತ್ತಿದ್ದಾರೆ. ಹೀಗಾಗಿಯೇ ಭಾತದ ರಿಯಲ್ ಎಸ್ಟೇಟ್ ಬಹು ವೇಗವಾಗಿ ಬೆಳೆಯುತ್ತಿದೆ. ಸ್ವಂತ ಮನೆಯಲ್ಲಿ ಜೀವನ ನಡೆಸುವುದು ಬಹುತೇಕರಿಗೆ ನೆಮ್ಮದಿಯನ್ನು ತಂದು ಕೊಡುತ್ತದೆ. ಆದರೆ, ಬೆಮಗಳೂರಿನಂತಹ ಮಹಾನಗರಗಳಲ್ಲಿ ಮನೆ ಖರೀದಿ ಮಾಡುವುದು ತುಂಬಾನೇ ಕಷ್ಟ.
ಆದರೆ, ಫ್ಲ್ಯಾಟ್ ಖರೀದಿಸಲು ಕೋಟಿಗಟ್ಟಲೆ ಹಣ ಬೇಕು. ಬ್ಯಾಂಕ್ ಲೋನ್ ಮಾಡಿ ಖರೀದಿಸಿದರೆ, ತಿಂಗಳಿಗೆ ಸಾವಿರಾರು ರೂಪಾಯಿಯ ಇಎಂಐ ಕಟ್ಟಬೇಕು. ಕನಿಷ್ಠ ಎಂದರೂ 50 ಸಾವಿರ ಇಎಂಐ ಅನ್ನಾದರೂ ಕಟ್ಟಲೇಬೇಕು. ಬಾಡಿಗೆ ಉಳಿಸಿ, ಸ್ವಂತ ಮನೆ ಮಾಡಿಕೋಳ್ಳಲು ಒಂದೇ ಸಲಕ್ಕೆ ಸಾವಿರಾರು ರೂಪಾಯಿ ತಿಂಗಳೀಗೆ ಇಎಂಐ ಕಟ್ಟುವುದು ಅಷ್ಟು ಸುಲಭ ಎಂದು ಕೊಳ್ಲೂವುದಕ್ಕಿಂತ ಮನೆ ಕಟ್ಟುವ ಮುನ್ನ ಕೊಂಚ ಪ್ಲ್ಯಾನ್ ಇರುವುದು ಒಳ್ಳೆಯದು ಎಂದು ಅನಿಸುತ್ತದೆ.
ಮನೆಯನ್ನು ಖರೀದಿಸುವ ಮುನ್ನ ನೀವು ಸದ್ಯ ಎಷ್ಟು ಬಾಡಿಗೆ ಕಟ್ಟುತ್ತಿದ್ದೀರಾ..? ಹಾಗೇನಾದರೂ ಮನೆಯನ್ನು ಖರೀದಿಸಿದರೆ, ಇಎಂಐ ಎಷ್ಟು ಕಟ್ಟಬೇಕಾಗುತ್ತದೆ ಎಂಬುದನ್ನು ಮೊದಲು ಗಮನಿಸಿ. ಬಾಡಿಗೆ ಹಣಕ್ಕಿಂತಲೂ ಸ್ವಂತ ಮನೆಯ ಇಎಂಐ 3-4 ಪಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಎಷ್ಟು ವೆಚ್ಚದ ಫ್ಲ್ಯಾಟ್ ಅನ್ನು ಖರೀದಿಸುತ್ತಿದ್ದೀರಾ..? ನಿಮ್ಮ ಮನೆಯ ಬಾಡಿಗೆ ಎಷ್ಟು.? ಸದ್ಯ ನಿಮ್ಮ ಸಂಬಳ ಎಷ್ಟು ಬರುತ್ತಿದೆ. ಮನೆಯನ್ನು ಖರೀದಿಸಿದರೆ, ಸಮಸ್ಯೆ ಆಗುವುದಿಲ್ಲವೇ ಎಂಬುದನ್ನು ಯೋಚಿಸಿ.
ಇನ್ನು ಮನೆ ಮನೆಯನ್ನು ಖರೀದಿಸಲು ಡೌನ್ ಪೇಮೆಂಟ್ ಗೆ ಹಣವಿದೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ನೀವು ಖರೀದಿಸುತ್ತಿರುವ ಮನೆಯ ಬೆಲೆಯಲ್ಲಿ ಶೇ.20ರಷ್ಟು ಡೌನ್ ಪೇಮೆಮಟ್ ನೀವೇ ಮಾಡಬೇಕು. ಬ್ಯಾಂಕ್ ಕೇವಲ ಶೇ.80 ರಷ್ಟು ಹಣವನ್ನು ಮಾತ್ರವೇ ಲೋನ್ ರೂಪದಲ್ಲಿ ನೀಡುತ್ತದೆ. ಡೌನ್ ಪೇಮೆಂಟ್ ಕೂಡ ಸಾಲ ಮಾಡಿ ಖರೀದಿಸುವುದಾದರೆ, ನೀವು ಮನೆಯನ್ನು ಖರೀದಿಸುವುದು ಸೂಕ್ತವಲ್ಲ. ನಿಮ್ಮ ಆದಾಯ ಹೆಚ್ಚಿದ್ದು, ಎರಡೂ ಸಾಲಗಳನ್ನು ನಿಭಾಯಿಸಬಹುದು ಎಂದಿದ್ದರೆ ಮಾತ್ರವೇ ಮನೆಯನ್ನು ಖರೀದಿಸುವ ಯೋಚನೆಯನ್ನು ಮಾಡಿ. ಪ್ಲಾನ್ ಇಲ್ಲದೇ, ಕೈ ಹಾಕಿದರೆ, ಸುಟ್ಟುಕೊಳ್ಳುವುದು ಗ್ಯಾರೆಂಟಿ.
ಇನ್ನು ಮನೆ ಖರೀದಿ ಮಾಡಿದರೆ, ಮುಂದಿನ ನಿಮ್ಮ ತುರ್ತು ವೆಚ್ಚಗಳ ಬಗ್ಗೆ ಯೋಚಿಸಿ. ಬರುವ ಸಂಬಳವನ್ನು ಮನೆ ನಿಭಾಯಿಸಲು, ಇಎಂಐಗೆ ಎಂದು ಖರ್ಚು ಮಾಡಿದರೆ, ಆಕಸ್ಮಿಕವಾಗಿ ಬರುವ ಖರ್ಚುಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಹೀಗಾಗಿ ದೊಡ್ಡ ಮೊತ್ತದ ಕೆಲಸಕ್ಕೆ ಕೈ ಹಾಕುವ ಮುನ್ನ ನಿಮ್ಮ ಭವಿಷ್ಯದ ಇತರೆ ಖರ್ಚುಗಳ ಬಗ್ಗೆಯೂ ಗಮನ ಹರಿಸಿ. ಆರೋಗ್ಯ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸ, ವೃದ್ಧಾಪ್ಯ ಎಲ್ಲದರ ಬಗ್ಗೆಯೂ ಗಮನವಿರಬೇಕು. ಇನ್ನು ತೆರಿಗೆ ವಿನಾಯಿತಿ ಪಡೆಯುವ ಆಲೋಚನೆ ಇದ್ದಲ್ಲಿ ದೀರ್ಘಾವಧಿಗೆ ಸಾಲವನ್ನು ಪಡೆಯಿರಿ.