ಬೆಂಗಳೂರು ಜೂನ್ 17: ರಾಜ್ಯ ಸರ್ಕಾರವು ಸಾಕಷ್ಟು ಭಾಗ್ಯಗಳನ್ನು ತಮ್ಮ ಪ್ರಣಾಳಿಕೆ ಯಲ್ಲಿ ನೀಡಿತ್ತು ಅದರಂತೆಯೇ ಇಂದು ಅವುಗಳೆಲ್ಲವನ್ನು ನೆರವೇರಿಸುತ್ತಿದೆ, ಆದರೆ ಈಗ ಬಂದಿರುವ ವಿಷಯವೇನೆಂದರೆ ಸರ್ಕಾರದ ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರ ಇದರ ಮೇಲೆ ಸೈಬರ್ ದಾಳಿಕೋರರ ಕರಿನೆರಳು ಬಿದ್ದಂತಿದೆ, ಏಕೆಂದರೆ ಅರ್ಜಿ ಸಲ್ಲಿಸುವವರ ಸಂಖ್ಯೆ ಕೂಡ ಹೆಚ್ಚಿರುವುದರಿಂದ ಇಲ್ಲಿ ದಾಳಿ ಮಾಡಿದರೆ ಅನೇಕ ಮಾಹಿತಿ ಸಿಗುವ ಸಾಧ್ಯತೆ ಇರುವುದರಿಂದ ಅರ್ಜಿ ಸಲ್ಲಿಸುವವರ ಮಾಹಿತಿ ಕದಿಯಲು ಸೈಬರ್ ಕದೀಮರು ಕಾಯುತ್ತಿದ್ದಾರೆ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಸರ್ಕಾರವು ಗೃಹಜ್ಯೋತಿ,ಗೃಹಲಕ್ಷ್ಮಿ,ಯುವನಿಧಿ, ಶಕ್ತಿ ಹೀಗೆ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇದನ್ನೇ ಬಂಡವಾಳವಾಗಿರಿಸಿಕೊಂಡು ಕೆಲ ಸೈಬರ್ ಕಳ್ಳರು ನಕಲಿ ಲಿಂಕ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ನಾವೇನಾದರು ಆ ಲಿಂಕ್ ಗಳು ತುಂಬಾ ಆರಮಾಗಿ ಸಿಗುತ್ತವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇರುವ ಫೇಕ್ ಲಿಂಕ್ ಗಳನ್ನು ಒತ್ತಿದರೆ ಅದು ನಮ್ಮ ಬ್ಯಾಂಕ್ ಖಾತೆಯನ್ನೇ ಖಾಲಿಮಾಡುವ ಸಾದ್ಯತೆ ಇದೆಯೆಂದು ಸೈಬರ್ ತಜ್ಞರು ಹೇಳಿರುವುದರಿಂದ ಎಚ್ಚರಿಕೆಯಿಂದ ಸೇವಾ ಸಿಂಧೂ ಪೋರ್ಟಲ್ ನಲ್ಲೇ ಅರ್ಜಿ ಸಲ್ಲಿಸಬೇಕಾಗಿದೆ.
ಸರ್ಕಾರವು ಈ ಕೂಡಲೇ ಇದರ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಜನರ ಮಾಹಿತಿಯನ್ನು ಕಾಪಾಡಬೇಕಿದೆ.