ಬೆಂಗಳೂರು;ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಜಿ. ಕುಮಾರ್‌ನಾಯಕ್ ಸೂಚನೆ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಮತ್ತು ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ಜೆ.ಪಿ.ನಗರ 9ನೇ ಹಂತ 4ನೇ ಬ್ಲಾಕ್‌ನ ತಿಪ್ಪಸಂದ್ರದ ಸರ್ವೆ ನಂ.10ರಲ್ಲಿ 1512.50 ಚದರ ಅಡಿ ಒತ್ತುವರಿ ಪ್ರದೇಶವನ್ನು ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಜೆ ಪಿ ನಗರದ ತಿಪ್ಪಸಂದ್ರದಲ್ಲಿ ಭೂಕಬಳಿಕೆದಾರರಿಂದ ಒತ್ತುವರಿಯಾಗಿದ್ದ, ₹65 ಕೋಟಿ ಮೌಲ್ಯದ ಆಸ್ತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ,ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.
ಪ್ರತಿಷ್ಠಿತ ಬಡಾವಣೆ ಎನಿಸಿರುವ ಜೆಪಿ ನಗರದ 9 ನೇ ಹಂತದ 4 ನೇ ಬ್ಲಾಕ್ ನ ತಿಪ್ಪಸಂದ್ರದ ಸರ್ವೇ ನಂಬರ್ 10 ರಲ್ಲಿ ಬಿಡಿಎಗೆ ಸೇರಿದ್ದ ಸುಮಾರು ಒಂದೂವರೆ ಎಕರೆ ಪ್ರದೇಶವನ್ನು ಕೆಲವು ಭೂಗಳ್ಳರು ಕಬಳಿಸಿ ಕಾಂಪೌಂಡ್ ಹಾಕಿದ್ದರು. ಅಲ್ಲದೇ, ವಾಹನ ತೂಕ ಹಾಕುವ ಯಂತ್ರ ಸೇರಿದಂತೆ ಕಟ್ಟಡ ಬಳಕೆಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು.ಅತಿಕ್ರಮಿಸಿದ ಜಾಗವನ್ನು ತೆರವು ಮಾಡುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸದರಿ ಜಾಗವನ್ನು ತೆರುವುಗೊಳಿಸದ ಕಾರಣ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾಂಪೌಂಡ್ ಅನ್ನು ನೆಲಸಮ ಮಾಡಿ, ಒತ್ತುವರಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬಿಡಿಎ ಹೇಳಿದೆ.ಬಿಡಿಎ ಎಸ್ಪಿ ನಂಜುಂಡೇಗೌಡ, ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.