27.3 C
Bengaluru
Monday, July 1, 2024

ಬೇಲಿಯೇ ಎದ್ದು ಹೊಲ ಮೇಯುತ್ತಿದೆ : ಬಿಡಿಎನಲ್ಲಿ ನಿಲ್ಲದ ಅಕ್ರಮ

ಬೆಂಗಳೂರು, ಜು. 06 : ಪ್ರತಿಯೊಂದು ಕ್ಷೇತ್ರಗಳಲ್ಲೂ ಅಕ್ರಮಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಕಡೆ ಅಧಿಖಾರಿಳು ಒಬ್ಬರ ಜೊತೆಗೆ ಒಬ್ಬರು ಶಾಮಿಲಾಗಿ ದೊಡ್ಡ ದೊಡ್ಡ ಹಗರಣಗಳನ್ನು ಕೂಡ ನಡೆಸುತ್ತಾರೆ. ಇಂತಹದ್ದೇ ಒಂದು ಘಟನೆ ಬಿಡಿಎನಲ್ಲಿ ನಡೆದಿದೆ. ಇತ್ತೀಚೆಗೆ ಬಿಡಿಎ ನಲ್ಲಿ ನಡೆಯುತ್ತಿರುವ ಅಕ್ರಮಗಳು ಪತ್ತೆಯಾಗುತ್ತಿವೆ. ಲೇಔಟ್ ಗಳ ಕಳಪೆ ಕಾಮಗಾರಿಗಳು, ಲೋಪದೋಷ, ಅಕ್ರಮಗಳು ನಡೆಯುತ್ತಲೇ ಇವೆ. ದೊಡ್ಡ ದೊಡ್ಡ ಅಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗುತ್ತಿರುವುದು ತಿಳಿದು ಬರುತ್ತಿದೆ.

ಕೆಎಎಸ್ ಅಧಿಕಾರಿಗಳು ಸಾಕಷ್ಟು ಹಗರಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ ಸರ್ಕಾರಿ ಗೋಮಾಳದಿಂದ ಕೋಟಿ ಕೋಟಿ ಹಣವನ್ನು ಜೇಬಿಗೆ ತುಂಬಿಸಿಕೊಂಡಿದ್ದಾರೆ. ಕೋಟಿ ಕೋಟಿ ಮೌಲ್ಯದ ಸರ್ಕಾರಿ ಗೋಮಾಳ ಜಮೀನಿಗೆ ಪರಿಹಾರವನ್ನು ನೀಡಿ ಹಣ ಕಬಳಿಸಿದ್ದಾರೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕೆಂಪೇಗೌಡ ಬಡಾವಣೆ ಚಳ್ಳಘಟ್ಟ ಗ್ರಾಮ ಸರ್ವೆ ನಂ 13 ರಲ್ಲಿ 6 ಎಕರೆ ಗೋಮಾಳ ಜಾಗಕ್ಕೆ 53,498 ಚದರ ಅಡಿ ಭೂಮಿಗೂ ಪರಿಹಾರ ನೀಡಿದೆ.

ಗೋಮಾಳ ಜಾಗಗಳು ಸರ್ಕಾರಕ್ಕೆ ಸೇರಿದ್ದು, ಇದಕ್ಕೆ ಪರಿಹಾರ ನೀಡಲು ಬರುವುದಿಲ್ಲ. ಆದರೆ, ಬಿಡಿಎನಲ್ಲಿರುವ ಕೆಲ ಅಧಿಕಾರಿಗಳು ತಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಿ ಹಣ ಲೂಟಿ ಮಾಡಿದ್ದಾರೆ. ಗೋಮಾಳಕ್ಕೆ ನಕಲಿ ರೈತರನ್ನು ಸೃಷ್ಟಿಸಿ. ಅವರ ಹೆಸರಲ್ಲಿ ಪರಿಹಾರವನ್ನು ಪಡೆದು 75 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತಿಗೆ ಭೂ ಪರಿಹಾರ ಮಾಡಿದ್ದಾರಂತೆ. ಇದರಲ್ಲಿ ಕೆಲ ಅಧಿಕಾರಿಗಳು ಕೂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಬಿಡಿಎ ಕಮೀಷನರ್ ಕುಮಾರ್ ನಾಯಕ್ ಅವರು ಬಿಡಿಎ ಜಾಗೃತ ದಳಕ್ಕೆ ತನಿಖೆ ನಡೆಸಲು ಆದೇಶಿದ್ದಾರೆ. ಇನ್ನು ಬಿಡಿಎನಲ್ಲಿ ಇದೊಂದೇ ಅಲ್ಲದೇ, ಇನ್ನೂ ಹತ್ತು ಹಲವು ಪ್ರಕರಣಗಳಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ, ಅಧಿಕಾರಿಗಳೇ ಹಣ ಕಬಳಿಸುತ್ತಿದ್ದಾರೆ.

Related News

spot_img

Revenue Alerts

spot_img

News

spot_img