26.7 C
Bengaluru
Sunday, December 22, 2024

ಬಿಡಿಎ ಫ್ಲಾಟ್‌ ಖರೀದಿಸಲು ಯೋಚಿಸಿದ್ದೀರಾ..? ಮಿಸ್‌ ಮಾಡ್ಬೇಡಿ, ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್‌ ಗಳ ಮಾರಾಟ

ಬೆಂಗಳೂರು, ಮಾ. 31 : ಹೊಸ ಮನೆಯನ್ನು ಖರೀದಿಸಬೇಕು. ಸ್ವಂತಕ್ಕೊಂದು ಫ್ಲಾಟ್‌ ಇದ್ದರೂ ಸಾಕು ಎನ್ನುವವರಿಗೆ ಬಿಡಿಎ ಗುಡ್ ನ್ಯೂಸ್‌ ಕೊಟ್ಟಿದೆ. ಹೊಸ ಮನೆ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಬಿಡಿಎ ಆಫರ್‌ ನೀಡಿದೆ. ಮೊದಲ ಬಾರಿಗೆ ಬಿಡಿಎ ರಿಯಾಯಿತಿ ದರದಲ್ಲಿ ಫ್ಲಾಟ್‌ ಗಳನ್ನು ಮಾರಾಟ ಮಾಡಲು ಮುಂದಾಗಿದೆ. ನೀವೇನಾದರೂ ಈಗ ಫ್ಲಾಟ್‌ ಖರೀದಿಸುವುದಾದರೆ, ಬಿಡಿಎ ಫ್ಲಾಟ್‌ ಗಳನ್ನು ಶೇ.10 ರಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ. ಹಾಗಾದರೆ ಎಲ್ಲೆಲ್ಲಿ, ಹಾಗೂ ಈ ಆಫರ್‌ ಎಷ್ಟು ದಿನ ಇರಲಿದೆ ಎಂದು ತಿಳಿಯಿರಿ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಣಿಮಿಣಿಕೆಯಲ್ಲಿ ಸಾರ್ವಜನಿಕರಿಗೆ ಶೇ. 10ರಷ್ಟು ಆಫರ್‌ ನೀಡಿ ಪ್ಲಾಟ್ಗುಳನ್ನು ಹಂಚಿಕೆ ಮಾಡಲು ಮುಂದಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ವಿಶ್ವನಾಥ್ ತಿಳಿಸಿದ್ದಾರೆ. ಬಿಡಿಎ ನಿರ್ಮಿಸಿರುವ 2 ಬಿಎಚ್ಕೆಠ ಪ್ಲಾಟ್ನ್ನುವ ಶೇ. 10 ಹಾಗೂ 3 ಬಿಎಚ್ಕೆವ ಪ್ಲಾಟ್ನ್ನುತ ಶೇ. 5ರ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಯುಗಾದಿ ಉಡುಗೊರೆಯಾಗಿ ಸಾರ್ವಜನಿಕರಿಗೆ ನೀಡಲು ಮುಂದಾಗಿದ್ದೇವೆ. ಈ ರಿಯಾಯಿತಿ ಜೂನ್‌ ತಿಂಗಳ 30 ರ ವರೆಗೂ ಇರಲಿದೆ ಎಂದು ಬಿಡಿಎ ತಿಳಿಸಿದೆ.

ಇನ್ನು ಬಿಡಿಎ ಬೆಂಗಳೂರಿನ ವಿವಿದೆಡೆ ಫ್ಲಾಟ್ ಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಒಟ್ಟು 1,500 ಫ್ಲಾಟ್ಗಳನ್ನು ನಿರ್ಮಿಸಿದೆ. ದೊಡ್ಡಬನಹಳ್ಳಿ, ಆಲೂರು, ಮಾಳಗಾಳ, ಕಣಮಿಣಿಕೆ ಸೇರಿದಂತೆ ಹಲವೆಡೆ ಫ್ಲಾಟ್ಗಳು ಖರೀದಿಗೆ ಲಭ್ಯ ಇವೆ. ಕೊಮ್ಮಘಟ್ಟ, ಕಣಮಿಣಿಕೆ ಹಾಗೂ ದೊಡ್ಡಬನಹಳ್ಳಿಯಲ್ಲಿ ಫ್ಲಾಟ್ ಗಳು ಮಾರಾಟವಾಗಿದ್ದು, ಕೆಲವೇ ಫ್ಲಾಟ್ಗಳು ಖರೀದಿಗೆ ಲಭ್ಯ ಇವೆ. ಇನ್ನು ಬಿಡಿಎ ವಿಲ್ಲಾಗಳನ್ನು ನಿರ್ಮಾಣವಾಗುತ್ತಿದೆ. ಹುಣ್ಣಿಗೆರೆ, ತುಮಕೂರು ರಸ್ತೆಗಳಲ್ಲಿ ನಡೆಯುತ್ತಿರುವ ವಿಲ್ಲಾಗಳ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ.

ಬಿಡಿಎ ವತಿಯಿಂದ ಅಂಜನಾಪುರ, ಬನಶಂಕರಿ 6ನೇ ಹಂತ, ವಿಶ್ವೇಶ್ವರ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ. ರಿಂಗ್ ರಸ್ತೆ ಚಂದ್ರಾಲೇಔಟ್ ಬಳಿ ನಿರ್ಮಿಸಿರುವ 3 ಬಿಎಚ್ಕೆಯ 120 ಪ್ಲಾಟ್ಗಳನ್ನು ನಿರ್ಮಿಸಲಾಗಿದೆ. ಕೋನದಾಸಪುರದಲ್ಲೂ 672 ಪ್ಲಾಟ್ಗಳ ಅಪಾರ್ಟ್ಮೆಂಟ್ ನಿರ್ಮಾಣವಾಗಿದೆ. ಇವೆಲ್ಲವೂ ಸಾರ್ವಜನಿಕರಿಗೆ ಲಭ್ಯವಿದೆ. ಫ್ಲಾಟ್ ಖರೀದಿಸಲು ಯೋಚಿಸುತ್ತಿರುವವರು ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ.

Related News

spot_img

Revenue Alerts

spot_img

News

spot_img