24.3 C
Bengaluru
Saturday, December 21, 2024

ಬಿಡಿಎ ಕಣಿಮಿಣಿಕೆ ಅಪಾರ್ಟ್‌ಮೆಂಟ್: ಬೆಲೆ ಎಷ್ಟು? ಅರ್ಜಿ ಸಲ್ಲಿಕೆ ಹೇಗೆ?

ಬೆಂಗಳೂರು: ನಗರದ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರಿಗೂ ಒಂದು ಸೂರು ಒದಗಿಸಬೇಕು ಎಂಬ ದೃಷ್ಟಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ವಿವಿಧೆಡೆ ವಸತಿ ಯೋಜನೆಗಳನ್ನು ರೂಪಿಸಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ತಾಲ್ಲೂಕು ಕಣಿಮಿಣಿಕೆ ಗ್ರಾಮದಲ್ಲಿ ನಿರ್ಮಿಸಿದ ಅಪಾರ್ಟ್‌ಮೆಂಟ್‌ನ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಬೆಂಗಳೂರು ಹೊರವಲಯ ಅಂದರೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಗ್ರಾಮದ ಸರ್ವೆ ನಂಬರ್ 95ರಲ್ಲಿ 2,3,4ನೇ ಹಂತದ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ್ದು, ಸದ್ಯ ಫ್ಲಾಟ್‌ಗಳು ಇಲ್ಲಿ ಮಾರಾಟಕ್ಕಿವೆ.

2015ರ ಆಸುಪಾಸಿನಲ್ಲಿಯೇ ಇಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಒಟ್ಟಾರೆ 1.05 ಲಕ್ಷ ಚ.ಮೀಟರ್ ಜಾಗದಲ್ಲಿ 2 ಮತ್ತು 3ನೇ ಹಂತದಲ್ಲಿ ಎರಡು ಬೆಡ್‌ರೂಮ್‌ನ ಮನೆಗಳು ಹಾಗೂ 4ನೇ ಹಂತದಲ್ಲಿ ಮೂರು ಬೆಡ್‌ರೂಮ್‌ನ ಮನೆಗಳನ್ನು ನಿರ್ಮಿಸಲಾಗಿದೆ. ಹೊಂಬಾಳೆ ಕನ್ಸ್‌ಸ್ಟ್ರಕ್ಷನ್ ಮತ್ತು ಗೌಡ ಅಂಡ್ ಕಂಪೆನಿಗೆ ಇದರ ಗುತ್ತಿಗೆ ನೀಡಲಾಗಿತ್ತು.

ಸೌಲಭ್ಯಗಳು:
* ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 2.5 ಕಿ.ಮೀ. ದೂರದಲ್ಲಿದೆ
* ಹೆಜ್ಜಾಲ ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲಿದೆ
* ನಾರಾಯಣ ಗುರುಕುಲ ಹಾಗೂ ಕ್ರೈಸ್ಟ್ ವಿಶ್ವವಿದ್ಯಾಲಯ ಸಮೀಪದಲ್ಲಿದೆ
* ಬೆಂಗಳೂರು-ಮೈಸೂರು ರಸ್ತೆಯಿಂದ ಕೇವಲ ಅರ್ಧ ಕಿ.ಮೀ. ಅಂತರದಲ್ಲಿದೆ
* ರಸ್ತೆ, ನೀರು, ವಿದ್ಯುತ್, ಸಾರಿಗೆ ಸೌಕರ್ಯ ಹೊಂದಿದೆ
* ಎತ್ತರವಾದ ಹಸಿರು ಪ್ರದೇಶದಲ್ಲಿದೆ
* ಮೈಸೂರು- ಬೆಂಗಳೂರು ರಸ್ತೆಯಿಂದ ನೇರವಾಗಿ 80 ಅಡಿ ಅಗಲದ ರಸ್ತೆಯ ನಿರ್ಮಾಣದ ಪ್ರಸ್ತಾವನೆಯಲ್ಲಿದೆ

ಕಣಿಮಿಣಿಕೆ 2ನೇ ಹಂತ:
ಮನೆ: 2 BHK
ವಿಸ್ತೀರ್ಣ: 870 ಚದರ ಅಡಿ
ಪ್ರಸ್ತಾವಿತ ಹಂಚಿಕೆ ದರ: 25 ಲಕ್ಷ ರೂ.ಗಳು.
ಅರ್ಜಿಯೊಂದಿಗೆ ಆರಂಭಿಕ ಹಂತದಲ್ಲಿ ಪಾವತಿಸ ಬೇಕಾದ ಠೇವಣಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1ರಲ್ಲಿ ಬರುವವರು 2.25 ಲಕ್ಷ ರೂ. ಹಾಗೂ ಇತರರು 3,12,500 ರೂ. ಇದೆ.

ಕಣಿಮಿಣಿಕೆ 3ನೇ ಹಂತ:
ಮನೆ: 2 BHK
ವಿಸ್ತೀರ್ಣ: 1060 ಚದರ ಅಡಿ
ಪ್ರಸ್ತಾವಿತ ಹಂಚಿಕೆ ದರ: 30 ಲಕ್ಷ ರೂ.ಗಳು.
ಅರ್ಜಿಯೊಂದಿಗೆ ಆರಂಭಿಕ ಹಂತದಲ್ಲಿ ಪಾವತಿಸ ಬೇಕಾದ ಠೇವಣಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1ರಲ್ಲಿ ಬರುವವರು 1.50 ಲಕ್ಷ ರೂ. ಹಾಗೂ ಇತರರು 3.75 ಲಕ್ಷ ರೂ. ಇದೆ.

ಕಣಿಮಿಣಿಕೆ 4ನೇ ಹಂತ:
ಮನೆ: 3 BHK
ವಿಸ್ತೀರ್ಣ: 1430 ಚದರ ಅಡಿ
ಪ್ರಸ್ತಾವಿತ ಹಂಚಿಕೆ ದರ: 40 ಲಕ್ಷ ರೂ.ಗಳು.
ಅರ್ಜಿಯೊಂದಿಗೆ ಆರಂಭಿಕ ಹಂತದಲ್ಲಿ ಪಾವತಿಸಬೇಕಾದ ಠೇವಣಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1ರಲ್ಲಿ ಬರುವವರು 2.35 ಲಕ್ಷ ರೂ. ಹಾಗೂ ಇತರರು 5 ಲಕ್ಷ ರೂ. ಇದೆ.

ಅರ್ಜಿ ಸಲ್ಲಿಸುವುದು ಹೇಗೆ:
ಕಣಿಮಿಣಿಕೆ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್ ಬೇಕು ಎಂದರೆ ಬಿಡಿಎ ವೆಬ್‌ಸೈಟ್ https://www.bdabangalore.org/ಗೆ ಬೇಟಿ ನೀಡಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಸೈಟ್ ಭೇಟಿ ಮತ್ತು ಹೆಚ್ಚಿನ ಮಾಹಿತಿಗಾಗಿ: 8884086555, 8884128555, 8884138555, 8884273555

Related News

spot_img

Revenue Alerts

spot_img

News

spot_img