ಬೆಂಗಳೂರು, ಮಾ. 15 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗ ಎರಡು ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. 446 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ. ಬೆಂಗಳೂರಿನ ಪೂರ್ವ ಹಾಗೂ ಪಶ್ಚಿಮದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಬಿಡಿಎ ನಿರ್ಮಾಣ ಮಾಡಲಿದೆ. ಈಗಾಗಲೇ ಪಾಲಿಕೆ ಸಭೆಯಲ್ಲಿ ಈ ಯೋಜನೆಗೆ ಅನುಮತಿಯೂ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆಯೂ ಬಹುತೇಕ ಪೂರ್ಣಗೊಂಡಿದೆ. ಇದಕ್ಕೆ ಬಿಡಿಎ ಆಂತರಿಕ ಸಂಪನ್ಮೂಲಗಳಿಂದ ಹಣ ವ್ಯಯಿಸಲಿದೆ. ಈ ಬಗ್ಗೆ ಬಿಡಿಎ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಈ ಎರಡೂ ಅಪಾರ್ಟ್ ಮೆಂಟ್ ಗಳಿಗಾಗಿ ಬಿಡಿಎ ಜಾಗವನ್ನೂ ನಿಗಧಿ ಪಡಿಸಿದೆ. ಹಳೆಯ ಮದ್ರಾಸ್ ರಸ್ತೆ ಕೋನದಾಸಪುರದ 10ಎಕರೆ ಜಾಗದಲ್ಲಿ ಒಂದು ಅಪಾರ್ಟ್ ಮೆಂಟ್ ಅನ್ನು ನಿರ್ಮಾಣ ಮಾಡಲಿದೆ. ಒಟ್ಟು 400 ಫ್ಲಾಟ್ ಗಳನ್ನು ನಿರ್ಮಾಣ ಮಾಡಲು ಬಿಡಿಎ ಯೋಜಿಸಿದೆ. ಈ ಯೋಜನೆಗೆ ಸುಮಾರು 346.51 ಕೋಟಿ ರೂಪಾಯಿ ಕರ್ಚಾಗಲಿದೆ. ಮತ್ತೊಂದು ಅಪಾರ್ಟ್ ಮೆಂಟ್ ಅನ್ನು ಮೈಸೂರು ರಸ್ತೆಯಲ್ಲಿರುವ ವಳಗೇರಹಳ್ಳಿಯಲ್ಲಿ 2 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ. ಇಲ್ಲಿ ಸುಮಾರು 100 ಫ್ಲಾಟ್ ಗಳನ್ನು ನಿರ್ಮಾಣ ಮಾಡಲಿದ್ದು, ಇದಕ್ಕೆ ಅಂದಾಜು 99.87 ಕೋಟಿ ವೆಚ್ಚವಾಗಲಿದೆ.
ಈಗಾಗಲೇ ಬಿಡಿಎ 14,000 ಫ್ಯಾಟ್ಗಳಿರುವ 32 ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ನಿರ್ಮಾಣ ಮಾಡಿದೆ. ಈ ಅಪಾರ್ಟ್ ಮೆಂಟ್ ಗಳಲ್ಲಿ ಬಹುತೇಕ ಫ್ಲಾಟ್‌ಗಳು ಮಾರಾಟಗೊಂಡಿವೆ. ಈ ನಡುವೆ ಕೊಮ್ಮಘಟ್ಟ ಮತ್ತು ಕಣಿಮಿಣಿಕೆಯಲ್ಲಿ ನೆಲೆಸಿರುವ ಫ್ಲಾಟ್‌ಗಳನ್ನು ಮಾರಾಟ ಮಾಡುವುದು ಕಷ್ಟವಾಗುತ್ತಿದೆ. ಇದೆರಡೂ ಕಡೆ ಸಮಸ್ಯೆ ಎದುರಾಗಿದ್ದು, ಅದರ ಪರಿಹಾರಕ್ಕೆ ಬಿಡಿಎ ಮುಂದಾಗಿದೆ. ಈ ಎರಡೂ ಕಟ್ಟಡಗಳಿಗೆ ಸಂಪರ್ಕವನ್ನು ಸುಧಾರಿಸುವುದರಿಂದ ಸಮಸ್ಯೆ ಬಗೆಹರಿಸಲು ಬಿಡಿಎ ತೀರ್ಮಾನಿಸಿದೆ.
ಸದ್ಯ ಬಿಡಿಎ ನಿರ್ಮಾಣ ಮಾಡಿರುವ ಫ್ಲಾಟ್ ಗಳಲ್ಲಿ ಸರಿ ಸುಮಾರು ಒಂದು ಸಾವಿರ ಫ್ಲಾಟ್ ಗಳು ಮಾರಾಟವಾಗಿಲ್ಲ. ಇದಕ್ಕೆ ಪ್ರಮುಖವಾದ ಕಾರಣಗಳು ಎಂದರೆ, ಮೂಲ ಸೌಕರ್ಯದ ಕೊರತೆ, ಕಳಪೆ ನಿರ್ಮಾಣ, ಈಗಿನ ಕಾಲಕ್ಕೆ ತಕ್ಕಂತೆ ಆಕರ್ಷಕವಲ್ಲದ ವಿನ್ಯಾಸಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುವ ಅಪಾರ್ಟ್ ಮೆಂಟ್ ಗಳಲ್ಲಿ ಈ ಸಮಸ್ಯೆ ಎದುರಾಗುವುದಿಲ್ಲ. ಇನ್ನು 2 ಬಿಎಚ್ ಕೆ ಮನೆಗಳ ಬೆಲೆಯನ್ನು 40ಲಕ್ಷಕ್ಕಿಂತ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.