20.4 C
Bengaluru
Saturday, November 23, 2024

ಇ ಹರಾಜು ಮೂಲಕ ಬಿಡಿಎ ನಿವೇಶನ ಪಡೆಯುವ ವಿಧಾನ: 308 ಬಿಡಿಎ ನಿವೇಶನ ಮಾರಾಟಕ್ಕೆ ಇ ಹರಾಜು ಪ್ರಕ್ರಿಯೆ ಆರಂಭ

ಬೆಂಗಳೂರು,ಫೆ. 21: ಬಿಡಿಎ ನಿವೇಶನಗಳು ಯಾವುದೇ ವಿವಾದಕ್ಕೆ ಒಳಗಾಗುವುದಿಲ್ಲ. ಹೀಗಾಗಿ ಬಹುತೇಕರು ಬಿಡಿಎ ನಿವೇಶನ ಖರೀದಿ ಮಾಡಲು ಆಸಕ್ತಿ ತೋರುತ್ತಾರೆ. ಬಿಡಿಎ ನಿವೇಶನ ಖರೀದಿ ಮಾಡುವ ಆಸಕ್ತಿಯುಳ್ಳವರಿಗೆ ಬಿಡಿಎ ಸುವರ್ಣ ಅವಕಾಶ ನೀಡಿದೆ. ಇ – ಹರಾಜು ಮೂಲಕ 308 ಮೂಲೆ ನಿವೇಶನ, ಮಧ್ಯಂತರ ನಿವೇಶನ ಹಾಗೂ ವಾಣಿಜ್ಯ ನಿವೇಶನಗಳನ್ನು ಖರೀದಿಸಲು ಅವಕಾಶ ನೀಡಿದೆ.

ಈ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಯಾರು ಬೇಕಾದರೂ ಮುಕ್ತವಾಗಿ ಪಾಲ್ಗೊಂಡು ಬಿಡಿಎ ನಿವೇಶನ ತಮ್ಮದಾಗಿಸಿಕೊಳ್ಳಬಹುದು. ಆದ್ರೆ ಹೆಚ್ಚು ಬಿಡ್ ಹಾಕಿದವರಿಗೆ ಮಾತ್ರ ನಿವೇಶನ ದೊರೆಯಲಿದೆ !

ಬಿಡಿಎ ಅಧಿಸೂಚನೆಯಂತೆ ಫೆ. 21 ಯಿಂದ ಇ ಬಿಡ್ ನಲ್ಲಿ ಲಾಗಿನ್ ಹಾಗಿ ನಿವೇಶನ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಸಾರ್ವಜನಿಕರು ಈ ಹರಾಜಿನಲ್ಲಿ ಪಾಲ್ಗೊಳ್ಳಲು ಮೊದಲು ಲಾಗಿನ್ ಅಗಬೇಕು. ಈ ಕೆಳಗೆ ನಮೂದಿಸಿರುವ ಬಡಾವಣೆಗಳಲ್ಲಿನ ನಿವೇಶನ ಸಂಖ್ಯೆ ಉಲ್ಲೇಖಿಸಿ ಸೂಚಿತ ದರದಂತೆ ಬಿಡ್ ದಾಖಲಿಸಬಹುದು. ಯಾರು ಹೆಚ್ಚು ಬಿಡ್ ಮಾಡುತ್ತಾರೊ ಅವರಿಗೆ ಬಿಡಿಎ ನಿವೇಶನ ಮಂಜೂರು ಮಾಡಲಾಗುತ್ತದೆ. ಇಂದಿನಿಂದ ಬಿಡಿಎ ನಿವೇಶನಗಳ ಇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು www.eproc.karnataka.gov.in ನಲ್ಲಿ ಮೊದಲು ಲಾಗಿನ್ ಆಗಬೇಕು. ಆನಂತರ ಈ ಕೆಳಗೆ ಸೂಚಿರುವ ಬಡಾವಣೆ ಆಯ್ಕೆ ಮಾಡಿಕೊಳ್ಳಬೇಕು. ಅನಂತರ ಸಮಗ್ರ ವಿವರಗಳನ್ನು ಉಲ್ಲೇಖಿಸಿ ಇಷ್ಟವಾದ ನಿವೇಶನ ಅಯ್ಕೆ ಮಾಡಿಕೊಂಡು ಬಿಡ್ ಮೊತ್ತವನ್ನು ದಾಖಲಿಸಬೇಕು. ಈ ಬಿಡ್ ನಲ್ಲಿ ದಾಖಲಿಸುವ ಮುನ್ನ ಈ ಕೆಳಕಂಡ ಷರತ್ತುಗಳನ್ನು ಮೊದಲೇ ಪೂರೈಸಿರಬೇಕು.

ಇ ಹರಾಜಿನಲ್ಲಿ ಪಾಲ್ಗೊಳ್ಳುವರು ಭಾರತೀಯ ನಾಗರಿಕ ಅಗಿರಬೇಕು.

ಪ್ರತಿ ನಿವೇಶನಕ್ಕೆ ಇಎಂಡಿ ಮೊತ್ತ ನಾಲ್ಕು ಲಕ್ಷ ರೂ. ನಿಗದಿ ಗೊಳಿಸಿದ್ದು, ಇಎಂಡಿ ಮೊತ್ತ ಹಾಗೂ ಇ ರಾಜು ಶುಲ್ಕವನ್ನು ಈ ಪ್ರೊಕ್ರೂಟ್ ಮೆಂಟ್ ಪೋರ್ಟಲ್ ನಲ್ಲಿರುವಂತೆ ಪಾವತಿ ಮಾಡಬೇಕು. ಸದರಿ ಮೊತ್ತವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಖಾತೆಗೆ ಜಮೆ ಮಾಡಬಾರದು.

ಯಶಸ್ವಿ ಬಿಡ್ಡುದಾರರಿಗೆ ( ಅತಿ ಹೆಚ್ಚು ಬಿಡ್ ದಾಖಲಿಸಿದವರಿಗೆ ) ನಿವೇಶನ ಒಟ್ಟು ಮೌಲ್ಯದ ಪೈಕಿ ಶೇ. 25 ರಷ್ಟು ಮೌಲ್ಯದಲ್ಲಿ ಇಎಂಡಿ ಮೊತ್ತ ರೂ. ನಾಲ್ಕು ಲಕ್ಷ ಕಡಿತಗೊಳಿಸಿ ಅಕಿ ಮೌಲ್ಯ ಇ ಹರಾಜು ಮುಕ್ತಾಯಗೊಂಡ 72 ಗಂಟೆ ಒಳಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಈ ಕೆಳಕಂಡ ಖಾತೆಗೆ ಪಾವತಿ ಮಾಡಿ ಚಲನ್ ನ್ನು ಅರ್ಥಿಕ ಶಾಲೆಯ ಲೆಕ್ಕಾಧಿಕಾರಿಯವರ ವಿಭಾಗಕ್ಕೆ ಇ ಮೇಲ್ ಮೂಲಕ ಸೂಚನ ಪತ್ರವನ್ನು ರವಾನಿಸಲಾಗುತ್ತದೆ. ಸೂಚಿತ ಸಮಯದಲ್ಲಿ ಸಲಹಾ ಪತ್ರ ತಲುಪದಿದ್ದರೆ, ನಿವೇಶನದಾರರೆ ಶೇ. 25 ರಷ್ಟು ಇಎಂಡಿ ಮೊತ್ತ ನಿಗದಿತ ಅವಧಿಯೊಳಗೆ ಪಾವತಿ ಮಾಡಬೇಕು.

ಬ್ಯಾಂಕ್ ವಿವರ: ಕೆನರಾಬ್ಯಾಂಕ್, ಬಿಡಿಎ ಸಂಕೀರ್ಣ ಶಾಖೆ, ಕುಮಾರಕೃಪಾ ಪಶ್ಚಿಮ, ಬೆಂಗಳೂರು, 560020 ಉಳಿತಾಯ ಖಾತೆ ಸಂಖ್ಯೆ – 2828101053014 ಐಎಫ್‌ಎಸ್‌ಸಿ ಕೋಡ್ CNRB0002828 ಗೆ ಪಾವತಿಸಬೇಕು. ಅರ್‌ಟಿಜಿಎಸ್ ಇಲ್ಲವೇ ಎನ್‌ಇಫ್ ಟಿ ಮೂಲಕ ಪಾವತಿ ಮಾಡಬೇಕು. ಪಾನ್ ಕಾರ್ಡ್ ನ್ನು ಇ ಪೋಟ್ರಲ್ ನಲ್ಲಿನೋಟರಿ ಮಾಡಿಸಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು.

 

ಯಶಸ್ವಿ ಬಿಡ್ಡುದಾರರು ಶೇ. 25 ರಷ್ಟು ಬಿಡ್ ಹಣ ಪಾವತಿಸಿದ ಬಳಿಕ ಉಳಿದ ಶೇ. 75 ರಷ್ಟು ಮೊತ್ತವನ್ನು ಬಿಡಿಎ ಪತ್ರ ತಲುಪಿದ 45 ದಿನಗಳ ಒಳಗೆ ಪಾವತಿಸಬೇಕು. ಯಶಸ್ವಿಯಾಗದ ಬಿಡ್ ದಾರರಿಗೆ ಒಂದು ತಿಂಗಳ ಒಳಗೆ ಮರುಪಾವತಿ ಮಾಡಲಾಗುತ್ತದೆ. ನಿವೇಶನಗಳಿಗೆ ಕನಿಷ್ಠ ಇಬ್ಬರು ಬಿಡ್ ದಾರರು ಇದ್ದರೆ ಅಂಗೀಕರಿಸಲಾಗುತ್ತದೆ. ಒಬ್ಬರೇ ಬಿಡ್ ಮಾಡಿದಲ್ಲಿ ಅದನ್ನು ತಿರಸ್ಕರಿಸಲಾಗುತ್ತದೆ.

ನಿವೇಶನಗಳ ವಿವರ, ಕನಿಷ್ಠ ಮೊತ್ತ :

ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ ನಾಲ್ಕನೇ ಬ್ಲಾಕ್ :

ನಿವೇಶನಗಳ ಸಂಖ್ಯೆ – 69

ವಿಸ್ತೀರ್ಣ: ಸರಾಸರಿ 108 ಚದರ ಮಿಟರ್ ಇತರೆ.

ಅರಂಭಿಕ ಬಿಡ್ ದರ ಚದರ ಮೀಟರ್ ಗೆ 42,250 ರೂ.

ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ 2 ನೇ ಬ್ಲಾಕ್

ನಿವೇಶನಗಳ ಸಂಖ್ಯೆ: 9

ವಿಸ್ತೀರ್ಣ : 108 ಚದರ ಮೀಟರ್

ಅರಂಭಿಕ ಬಿಡ್ ದರ : 42,250 ರೂ.

 

ಎಚ್‌ಬಿಆರ್ ಬಡಾವಣೆ 2 ನೇ ಹಂತ

ನಿವೇಶನ : 1

ವಿಸ್ತೀರ್ಣ : 406 ಚದರ ಮೀಟರ್

ಆರಂಭಿಕ ಬಿಡ್ ಮೊತ್ತ 1.46,445 ರೂ.

ಎಚ್‌ಆರ್‌ ಬಿಆರ್ ೨ ನೇ ಸೆಕ್ಟರ್

ನಿವೇಶನ ಸಂಖ್ಯೆ: 6

ವಿಸ್ತೀರ್ಣ: ನಿವೇಶನವಾರು

ಆರಂಭಿಕ ಬಿಡ್ ದರ : 1.50,000 ರೂ.

ಎಚ್‌ಅರ್‌ ಬಿಅರ್ ನಾಲ್ಕನೇ ಸೆಕ್ಟರ್

ಮತ್ತು ಅರನೇ ಸೆಕ್ಟರ್ :

ನಿವೇಶನ ಸಂಖ್ಯೆ: 7

ವಿಸ್ತೀರ್ಣ : ನಿವೇಶನವಾರು

ಅರಂಭಿಕ ಬಿಡ್ ಮೊತ್ತ : 1.50,000

ಬನಶಂಕರಿ 6 ನೇ ಹಂತ, ನಾಲ್ಕನೇ ಬಿ ಬ್ಲಾಕ್ ಮತ್ತು

ಬನಶಂಕರಿ ಅರನೇ ಹಂತ 5 ನೇ ಬ್ಲಾಕ್

ಉಳಿದಂತೆ ಅಂಜನಾಪುರ ಟೌನ್‌ಶಿಪ್, ಜೆಪಿನಗರ 8 ನೇ ಫೇಸ್ 2 ನೇ ಬ್ಲಾಕ್, ಸರ್‌.ಎಂ. ವಿಶ್ವೇಶ್ವರಯ್ಯ ಬಡಾವಣೆ, 8 ನೇ ಬ್ಲಾಕ್ ಮತ್ತಿತರ ಬಡಾವಣೆಗಳಲ್ಲಿ ಒಟ್ಟು 308 ನಿವೇಶನಗಳ ಇ ಹರಾಜು ನಡೆಯಲಿದ್ದು, ನಿವೇಶನವಾರು ವಿವರವನ್ನು ವೆಬ್ ತಾಣದಲ್ಲಿ ನೀಡಲಾಗಿದೆ. ಬಿಡ್ ನ್ನು ಚದರ ಮೀಟರ್ ಗೆ ಗರಿಷ್ಠ 500 ರೂ. ಹೆಚ್ಚಿಸಿ ಬಿಡ್ ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 080-23368435 /36 ಸಂಪರ್ಕಿಸಬಹುದು.

Related News

spot_img

Revenue Alerts

spot_img

News

spot_img