20.5 C
Bengaluru
Tuesday, July 9, 2024

ಇನ್ಮುಂದೆ ಬಿ ಖಾತಾ ಹೊಂದಿರುವವರಿಗೆ ತೆರಿಗೆ ಹೊರೆಯಲ್ಲಿ ಕಡಿತ

ಬೆಂಗಳೂರು, ಫೆ. 24 : ಇನ್ಮುಂದೆ ಬಿ ಖಾತಾ ಹೊಂದಿರುವವರು ಕೂಡ ಎ ಖಾತಾ ಸ್ವತ್ತುಗಳಿಗೆ ಸಮಾನವಾಗಿ ತೆರಿಗೆಯನ್ನು ನೀಡಬಹುದು. ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ ದೊರಕಿದೆ. ನಿನ್ನೆ ವಿಧಾನಸಭೆ ಕಲಾಪದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆಯನ್ನು ಮಂಡಿಸಿದರು. ಕಾನೂನು ಬಾಹಿರ ಅಥವಾ ನಿಯಮ ಉಲ್ಲಂಘಿಸಿರುವ ಸ್ಥಳ ಇಲ್ಲವೇ ಕಟ್ಟಡಗಳಿಗೆ ಬಿ ಖಾತಾ ಏಂದು ಹೇಳಲಾಗುತ್ತದೆ. ಬಿ ಖಾತಾ ಹೊಂದಿರುವ ಮಾಲೀಕರು ದುಪ್ಪಟ್ಟು ತೆರಿಗೆಯನ್ನು ನೀಡಬೇಕು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕಂದಾಯ ನಿವೇಶನಗಳು ಮತ್ತು ಅನಧಿಕೃತ ಬಡಾವಣೆಗಳಲ್ಲಿರುವ ಕಟ್ಟಡಗಳಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಈ ಕಟ್ಟಡಗಳಿಗೂ ಎ ಖಾತಾ ಸ್ವತ್ತುಗಳಿಗೆ ನೀಡುವಷ್ಟೇ ಸಮಾನವಾದ ತೆರಿಗೆಯನ್ನು ಸಂಗ್ರಹಿಸಲು ಅವಲಕಾಶ ನೀಡಲಾಗಿದೆ. ಈದರೊಂದಿಗೆ ಮಾನ್ಯತೆ ಪಡೆದಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ಪಾವತಿಯಿಂದ ವಿನಾಯಿತಿಯನ್ನು ನೀಡುವ ಅಂಶವನ್ನೂ ಈ ಮಸೂದೆಯಲ್ಲಿ ಸೇರಿಸಲಾಗಿದೆ.

ಇದಕ್ಕೂ ಮುನ್ನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ್ದ ಕಟ್ಟಡವನ್ನು ಹೊರತುಪಡಿಸಿ, ಕಟ್ಟಡ ಉಪವಿಧಿಗಳು ಉಪಬಂಧಗಳನ್ನು ಉಲ್ಲಂಘಿಸಿ ಕಟ್ಟಿರುವ ಅಥವಾ ಅನಧಿಕೃತ ಬಡಾವಣೆ ಅಥವಾ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಕಟ್ಟಡವು ಸೇರಿದಂತೆ ಪ್ರತಿಯೊಂದು ಕಟ್ಟಡಕ್ಕೆ, ಖಾಲಿ ಭೂಮಿಗೆ ಅಥವಾ ಅವೆರಡನ್ನೂ ಒಳಗೊಂಡು ಅಥವಾ ಅಧಿಭೋಗ ಪ್ರಮಾಣ ಪತ್ರ ಅಥವಾ ಕಟ್ಟಡ ನಿರ್ಮಾಣ ಮುಕ್ತಾಯ ಪ್ರಮಾಣಪತ್ರವನ್ನು ನೀಡದೇ ವಾಸಕ್ಕೆ ಬಳಸುತ್ತಿದ್ದ ಕಟ್ಟಡಗಳಿಗೆ ಎರಡು ಪಟ್ಟು ಸ್ವತ್ತು ತೆರಿಗೆ ವಿಧಿಸಲಾಗುತ್ತಿತ್ತು.‌ ಆದರೆ ಇನ್ನು ಮುಂದೆ ಹೀಗಿರುವುದಿಲ್ಲ ಎಂದು ಮಾಧು ಸ್ವಾಮಿ ಅವರು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img