ಬೆಂಗಳೂರು ;ಬೆಂಗಳೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಆರೋಗ್ಯಾಧಿಕಾರಿ(BBMP Health Officer) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಸಿಲಿಕಾನ್ ಸಿಟಿ ಬೆಂಗಳೂರಿನ ಸಿ.ವಿ ರಾಮನ್ ನಗರದ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬಿಬಿಎಂಪಿ ಆರೋಗ್ಯಾಧಿಕಾರಿ ವಿ.ಶಿವೇಗೌಡ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ,ಶ್ರೀನಿವಾಸ್ ಎಂಬುವರು ಸೊಳ್ಳೆ ನಿಯಂತ್ರಕ್ಕಾಗಿ ಗುತ್ತಿಗೆ ಪಡೆದಿದ್ದರು,ಬಿಬಿಎಂಪಿ ಆರೋಗ್ಯಾಧಿಕಾರಿ 80 ಸಾವಿರ ಲಂಚ ಕೇಳಿದ್ದರು,ಮುಂಗಡವಾಗಿ ವಿ.ಶಿವೇಗೌಡ 30 ಸಾವಿರ ಲಂಚವನ್ನು ಪಡೆದುಕೊಂಡಿದ್ದರು ಬಾಕಿ ಇರುವ 50 ಸಾವಿರ ರೂಪಾಯಿ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ,