22.9 C
Bengaluru
Saturday, July 6, 2024

ಬಿಬಿಎಂಪಿಯಲ್ಲಿ ಸಾವಿರಾರು ಅಕ್ರಮ ಎ ಖಾತಾ ವರ್ಗಾವಣೆ ಪತ್ತೆ

ಬೆಂಗಳೂರು, ಜು. 05: ಬಿಬಿಎಂಪಿಯಲ್ಲಿ ಅಕ್ರಮವಾಗಿ ಬಿ ಖಾತಾ ನಿವೇಶನಗಳನ್ನು ಎ ಖಾತಾಗರ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಹಿಂದೆ ಬಿ ಖಾತಾ ಜಾಗಗಳನ್ನು ಎ ಖಾತಾಗೆ ಅಕ್ರಮವಾಗಿ ಬದಲಾಯಿಸಿಕೊಂಡಿರುವುದು ಪತ್ತೆಯಾಗಿತ್ತು. ಆಗ ಬಿಬಿಎಂಪಿ ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿತ್ತು. ಈ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗಿದೆ. ಇದೀಗ ಬೆಂಗಳೂರಿನ ಬಿಬಿಎಂಪಿಯ 243 ವಾರ್ಡ್ ಗಳಲ್ಲಿ ಅಂದಾಜು ಒಂದು ಲಕ್ಷ ಎ ಖಾತಾಗಳು ಅಕ್ರಮವಾಗಿ ನೋಂದಣಿಯಾಗಿರುವುದು ಪತ್ತೆಯಾಗಿದೆ.

ಈ ಬಗ್ಗೆ ಪರಿಶೀಲನಾ ಸಮಿತಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಆರ್ ಆರ್ ನಗರ, ದಾಸರಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ವಲಯಗಳಲ್ಲಿ ಅಕ್ರಮ ಎ ಖಾತೆಗಳನ್ನು ಮಾಡಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲೇ ಅತಿಹೆಚ್ಚು ಅಕ್ರಮ ನಡೆದಿದ್ದು, 4,008 ‘ಎ’- ಖಾತಾ ರಿಜಿಸ್ಟರ್ ಆಗಿವೆ.

ರಾಜರಾಜೇಶ್ವರಿ ನಗರದಲ್ಲಿ ಬರೋಬ್ಬರಿ 3,666, ಮಹದೇವಪುರದಲ್ಲಿ 925, ಯಲಹಂಕದಲ್ಲಿ 540, ಬೆಂಗಳೂರು ಪೂರ್ವದಲ್ಲಿ 453, ಪಶ್ಚಿಮ ವಲಯದಲ್ಲಿ 139, ದಾಸರಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ 4 ಮತ್ತು 1 ಬೋಗಸ್ ಎ ಖಾತಾಗಳಿವೆ ಎಂದು ಪರಿಶೀಲನಾ ಸಮಿತಿಗೆ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ರಮವಾಗಿ ಆಗಿರುವ ಎ ಖಾತಾಗಳ ಬಗ್ಗೆ ಮಾಹಿತಿಯನ್ನು ಆಧರಿಸಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರ ನೀಡಿದ್ದಾರೆ.

ಇನ್ನು ನಗರದಲ್ಲಿ ಅಕ್ರಮವಾಗಿ ಎ ಖಾತೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಸಂಬಂಧ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ಖಾತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ್ದರು.

Related News

spot_img

Revenue Alerts

spot_img

News

spot_img