20.8 C
Bengaluru
Thursday, December 5, 2024

ಬಿಬಿಎಂಪಿ ಬಜೆಟ್‌ ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಹಣ ಮೀಸಲಿಟ್ಟಿದ್ದು, ಎಲ್ಲೆಲ್ಲಿ ಫ್ಲೈ-ಓವರ್‌ ನಿರ್ಮಾಣವಾಗಲಿದೆ ಗೊತ್ತಾ..?

ಬೆಂಗಳೂರು, ಮಾ. 02 : ರಾಜ್ಯ ಈಗ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದೆ. ಈ ಹೊತ್ತಲ್ಲಿ ಬಿಬಿಎಂಪಿ ಬಜೆಟ್‌ ಇಂದು ಮಂಡನೆಯಾಗಿದ್ದು, 11,157.83 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಲಾಗಿದೆ. ಇಂದು ಬಿಬಿಎಂಪಿಯ ವಿಶೇಷ ಆಯುಕ್ತ ಜತರಾಮ ರಾಯಪುರ ಅವರು ಬಜೆಟ್‌ ಅನ್ನು ಮಂಡಿಸಿದರು. ಒಟ್ಟು ಆದಾಯ 11,163.97 ಕೋಟಿ ರೂ. ಆಗಿದ್ದರೆ, ಒಟ್ಟು ವೆಚ್ಚವು 11,157.83 ಕೋಟಿ ರೂ. ಆಗಿರುತ್ತದೆ. ಹೀಗಾಗಿ 6.14 ಕೋಟಿ ರೂಪಾಯಿಗಳು ಹೆಚ್ಚುವರಿ ಬಜೆಟ್‌ಗೆ ಕಾರಣವಾಗಿರುವುದರ ಬಗ್ಗೆ ಮಾಹಿತಿಯನ್ನೂ ನೀಡಿದರು. ಇನ್ನು ಇಂದಿನ ಬಜೆಟ್‌ ನಲ್ಲಿ ಹಲವು ಯೋಜನೆಗಳಿಗೆ ಅನುದಾನ ಮೀಸಲಿಡಲಾಯ್ತುದೆ. ಇದೇ ವೇಳೆ ಸಂಚಾರ ದಟ್ಟೆಣೆ ತಗ್ಗಿಸಲು ಸಾಕಷ್ಟು ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಫ್ಲೈ-ಓವರ್‌ ಗಳನ್ನು ಕೂಡ ನಿರ್ಮಿಸಲಿದ್ದು, ಎಲ್ಲೆಲ್ಲಿ ಎಂದು ನೋಡೋಣ ಬನ್ನಿ.

 

ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್‌ ಇದ್ದು, ಇದನ್ನು ತಗ್ಗಿಸಲು ಬಿಬಿಎಂಪಿ ಸಾಕಷ್ಟು ನಿಯಮಗಳು, ಯೋಜನೆಗಳನ್ನು ರೂಪಿಸುತ್ತಲೇ ಇದೆ. ಆದರೂ ಬೆಂಗಳೂರಿನಲ್ಲಿ ಜನ ದಟ್ಟಣೆ ಹೆಚ್ಚಾದಂತೆ ಟ್ರಾಫಿಕ್‌ ಸಮಸ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಈ ಬಾರಿಯ ಬಿಬಿಎಂಪಿ ಬಜೆಟ್‌ ನಲ್ಲಿ ಹೊಸ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈ ಮೇಲ್ಸೇತುವೆಗಳಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಬಿಬಿಎಂಪಿಯಿಂದ ಬೆಂಗಳೂರಿನಲ್ಲಿ ಹೊಸ ಮೇಲ್ಸೇತುವೆಗಳನ್ನು ಪ್ರಸ್ತಾಪಿಸಲಾಗಿದೆ. ಎಲ್ಲೆಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ ಎಂಬುದನ್ನು ನೋಡೋಣ ಬನ್ನಿ..

ಮತ್ತಿಕೆರೆ ತಿರುವಿನ ಬಳಿ ಟ್ರಾಫಿಕ್‌ ಜಾಮ್‌ ಆಗುತ್ತಿರುತ್ತದೆ. ಹಾಗಾಗಿ ಗೋಕುಲ ರಸ್ತೆಯಲ್ಲಿ ಫ್ಲೈಓವರ್ ಬರಲಿದ್ದು, 40 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇನ್ನು ಜಾಲಹಳ್ಳಿಯಲ್ಲಿ ORR-ಪೈಪ್‌ಲೈನ್ ಜಂಕ್ಷನ್‌ನಲ್ಲಿ ಕೂಡ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತದೆ. ಇಲ್ಲೂ ಮೇಲ್ಸೇತುವೆ ನಿರ್ಮಾಣಕ್ಕೆ 40 ಕೋಟಿ ರೂಪಾಯಿ ವೆಚ್ಚವಾಗಲಿದೆ. 3. 65 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಯಮಹಲ್ ರಸ್ತೆಯಲ್ಲಿ ಮೇಖ್ರಿ ವೃತ್ತದ ಕೆಳಸೇತುವೆಯಲ್ಲಿ ಒಂದು ಫ್ಲೈಓವರ್ ನಿರ್ಮಾಣವಾಗಲಿದೆ. ಸದಾಶಿವನಗರ ಪೊಲೀಸ್ ಠಾಣೆ ವೃತ್ತದಲ್ಲಿ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ 40 ಕೋಟಿ ರೂ.ವೆಚ್ಚ ಮಾಡಲಿದೆ ಬಿಬಿಎಂಪಿ.

Related News

spot_img

Revenue Alerts

spot_img

News

spot_img