27.3 C
Bengaluru
Monday, July 1, 2024

ಅತ್ಯುತ್ತಮ ಆರ್.ಆರ್.ಆರ್ ನಗರವಾಗಿ ಬಿಬಿಎಂಪಿ

ಬೆಂಗಳೂರು ಜುಲೈ 28: ;ನಗಾರಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದಿಂದ ನಡೆಸಿದ ನನ್ನ ಜೀವನ,ನನ್ನ ಸ್ವಚ್ಛನಗರ ಅಭಿಯಾನದಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಆರ್.ಆರ್.ಆರ್ (ರೆಡ್ಯೂಸ್, ರಿ ಯೂಸ್ ಮತ್ತು ರಿಸೈಕಲ್ ) ನಗರವಾಗಿ ಬಿಬಿಎಂಪಿ ಆಯ್ಕೆಯಾಗಿದೆ.ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನನ್ನ ಜೀವನ, ನನ್ನ ಸ್ವಚ್ಛನಗರ ಎಂಬ ಧೈಯದೊಂದಿಗೆ ಮೇ 15ರಿಂದ ಪರಿಸರ ದಿನವಾದ ಜೂ. 5ರವರೆಗೆ ದೊಡ್ಡ ಪ್ರಮಾಣದ ಮತ್ತು ಉನ್ನತ ಪ್ರಭಾವದ ರಾಷ್ಟ್ರೀಯ ಅಭಿಯಾನ ನಡೆಸಿತ್ತು.ಅದರಂತೆ ಬಿಬಿಎಂಪಿ ವ್ಯಾಪ್ತಿಯ 49 ವಾರ್ಡ್ ಗಳಲ್ಲಿ ಆರ್.ಆರ್. ಆ‌ ಕೇಂದ್ರಗಳನ್ನು ತೆರೆದು ಮನೆಗಳಲ್ಲಿ ಬಳಕೆಯಾಗದ ಪುಸ್ತಕಗಳು ಆಟಿಕೆಗಳು, ಕಬ್ಬಿಣದ ಉತ್ತರ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಕೇಂದ್ರಗಳಲ್ಲಿ ನೀಡಿದರೆ ಅದನ್ನು ಪುನರ್ ಬಳಕ ಮಾಡುವ ಜೊತೆಗೆ ನಗರವನ್ನು ಸ್ವಚ್ಛ ನಗರವನ್ನಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಪೌರಾಡಳಿತ ಸಚಿವ ರಹೀಂ ಖಾನ್ ಗುರುವಾರ ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿ ಬಸವರಾಜ್ ಕಬಾಡೆಗೆ ಪ್ರಶಸ್ತಿ ವಿತರಿಸಿದರು. ನಿರ್ದೇಶನಾಲಯ ನಿರ್ದೇಶಕಿ ಮಂಜುಶ್ರೀ, ಘನತ್ಯಾಜ್ಯ ನಿರ್ವಹಣೆ ವಿಭಾಗದ ಮುಖ್ಯ ಅಭಿಯಂತರ ಪ್ರವೀಣ್ ಲಿಂಗಯ್ಯ, ಚೀಫ್ ಮಾರ್ಷಲ್ ರಾಜಬೀರ್ ಸಿಂಗ್ ಮತ್ತಿತರರಿದ್ದರು. ಅತ್ಯುತ್ತಮ ನಗರವಾಗಿ ಬಿಬಿಎಂಪಿ ಆಯ್ಕೆಯಾಗಿದ್ದಕ್ಕೆ ಘನತ್ಯಾಜ್ಯ ವಿಭಾಗದಸಿಬ್ಬಂದಿಯನ್ನು ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಭಿನಂದಿಸಿದ್ದಾರೆ.

Related News

spot_img

Revenue Alerts

spot_img

News

spot_img