#BBMP #ARO #lokayukta #Trap #accepting #bribe
ಬೆಂಗಳೂರು;ಆಸ್ತಿಯ ಖಾತೆ ಬದಲಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ₹ 10,000 ಲಂಚ ಪಡೆದ ಬಿಬಿಎಂಪಿ(BBMP) ಹೆಗ್ಗನಹಳ್ಳಿ ವಿಭಾಗದ ಸಹಾಯಕ ಕಂದಾಯ ಅಧಿಕಾರಿ (ARO) ಚಂದ್ರಪ್ಪ ಬೀರಜ್ಜನವರ್ ಅವರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ,ಹೆಗ್ಗನಹಳ್ಳಿಯ ವಿ.ಸೋಮಶೇಖರ್ ಎಂಬುವರ ಬಳಿ ಖಾತೆ ಬದಲಾವಣೆಗಾಗಿ 60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದರು. ಈ ಬಗ್ಗೆ ಲೋಕಾಯುಕ್ತಾಕ್ಕೆ ವಿ.ಸೋಮಶೇಖರ್ ಎಂಬುವವರು ದೂರು ನೀಡಿದ್ದರು.₹ 10,000ವನ್ನು ಶುಕ್ರವಾರ ತಲುಪಿಸುವಂತೆ ಆರೋಪಿ ಸೂಚಿಸಿದ್ದರು.ಆ ಪ್ರಕಾರವಾಗಿ ಸೋಮಶೇಖರ್ ಹಣ ತಲುಪಿಸಿದರು.10 ಸಾವಿರ ರೂ. ಮುಗಂಡವಾಗಿ ಹಣ ಪಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸಾಕ್ಷಿ ಸಮೇತ ಇಬ್ಬರನ್ನು ಬಂಧಿಸಿದ್ದಾರೆ.ARO ಜೊತೆ ಗೋಪಾಲ್ ನಾಯ್ಕ್ ಎಂಬಾತನೂ ಬಲೆಗೆ ಬಿದ್ದಿದ್ದು, ARO ಬಂಧಿಸಿ ದಾಖಲೆಗಳನ್ನು ವಶಕ್ಕೆ ಪಡೆದ ಲೋಕಾಯುಕ್ತಾ ಪೊಲೀಸರು ಪರಿಶೀಲನೆ ಮಾಡಿದ್ದಾರೆ,ನಂತರ ಚಂದ್ರಪ್ಪ ಬೀರಜ್ಜನವರ್ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 5 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ರಾಣಿಬೆನ್ನೂರಿನಲ್ಲಿ ಇರುವ 6 ಎಕರೆ ಜಮೀನಿನ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. 3೦*4೦ ವಿಸ್ತೀರ್ಣದ ನಿವೇಶನ ಮತ್ತು ಬೆಂಗಳೂರಿನ ಕೆ.ಆರ್.ಪುರದಲ್ಲಿ ಮೂರು ಹಂತಸ್ತಿನ ಕಟ್ಟಡ ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಶೀಲನೆ ಕಾರ್ಯ ಮುಂದುವರಿದಿದೆ.