22 C
Bengaluru
Monday, December 23, 2024

ಬಸವ ವಸತಿ ಯೋಜನೆ: ಮನೆ ಇಲ್ಲದವರು ಮನೆ ಪಡೆಯುವುದು ಹೇಗೆ?

‘ಬಸವ ವಸತಿ ಯೋಜನೆ’- ಇದು ಕರ್ನಾಟಕ ಸರ್ಕಾರದ ವಸತಿ ಯೋಜನೆಯಾಗಿದ್ದು, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಯೋಗ್ಯ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯ ಫಲಾನುಭವಿಗಳು ಯಾರು, ಸೌಲಭ್ಯ ಪಡೆಯಲು ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಜೀವ್ ಗಾಂಧಿ ವಸತಿ ನಿಗಮವು ನಿರ್ವಹಿಸುತ್ತಿರುವ ಈ ಯೋಜನೆಯ ಅನುಷ್ಠಾನಕ್ಕೆ ಸರ್ಕಾರವು 2,500 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಈ ಯೋಜನೆ ಮೂಲಕ ಅಂದಾಜು 2 ಲಕ್ಷ ಫಲಾನುಭವಿಗಳಿಗೆ ಮನೆ ಸಿಗುವ ನಿರೀಕ್ಷೆ ಹೊಂದಲಾಗಿದೆ.

ಸೌಲಭ್ಯ ಪಡೆಯಲು ಅರ್ಹತೆ ಏನು?
ಈ ಯೋಜನೆಯ ಲಾಭ ಪಡೆಯಲು ಹೊಂದಿರಬೇಕಾದ ಅರ್ಹತೆಗಳೆಂದರೆ,
* ಅಭ್ಯರ್ಥಿಯು ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು
* ಆಕಾಂಕ್ಷಿಯು ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು
* ಅರ್ಜಿದಾರರ ವಾರ್ಷಿಕ ಆದಾಯವು 32,000 ರೂಪಾಯಿಗಳನ್ನು ಮೀರಿರಬಾರದು
* ಅಭ್ಯರ್ಥಿಯು ರಾಜ್ಯ ಅಥವಾ ದೇಶದೊಳಗೆ ಯಾವುದೇ ಪಕ್ಕಾ ಮನೆಯ ಮಾಲೀಕತ್ವ ಹೊಂದಿರುವಂತಿಲ್ಲ
* ಮನೆ ಕಟ್ಟಿಕೊಳ್ಳಲು ನಿವೇಶನ ಅಥವಾ ಕಚ್ಚಾ ಮನೆಯನ್ನು ಹೊಂದಿರುವುದು ಕಡ್ಡಾಯ

ಬಸವ ವಸತಿ ಯೋಜನೆ 2022: ಅರ್ಜಿ ನಮೂನೆ
ನೀವು ಬಸವ ವಸತಿ ಯೋಜನೆ 2022ರ ಅರ್ಜಿ ನಮೂನೆಯನ್ನು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ಜಾಲತಾಣದಿಂದ ಪಡೆಯಬಹುದು.
ಬಸವ ವಸತಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ?
ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಆಕಾಂಕ್ಷಿಗಳು ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು:
ಹಂತ 1: ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ಪೋರ್ಟಲ್ ʻಆಶ್ರಯʼಕ್ಕೆ ಭೇಟಿ ನೀಡಿ
ಹಂತ 2: ವೆಬ್‌ಸೈಟ್‌ನ ಮುಖಪುಟದಲ್ಲಿ ಕಾಣುವ ʻಆನ್‌ಲೈನ್‌ ಅರ್ಜಿಗಳುʼ ಗುಂಡಿ ಒತ್ತಿರಿ
ಹಂತ 3: ಅರ್ಜಿ ತುಂಬುವ ಲಿಂಕ್‌ (ಕೊಂಡಿ) ಮೇಲೆ ಕ್ಲಿಕ್‌ ಮಾಡಿ ಮತ್ತು ನಿಮ್ಮ ಹೆಸರು, ಜನ್ಮ ದಿನಾಂಕ. ತಂದೆಯ ಹೆಸರು, ವಾರ್ಷಿಕ ಆದಾಯ ಮತ್ತಿತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿರಿ
ಹಂತ 4: ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಮತ್ತು ʻಸಬ್‌ಮಿಟ್ʼ ಗುಂಡಿ ಒತ್ತಿರಿ

ಬಸವ ವಸತಿ ಯೋಜನೆ: ಬೇಕಿರುವ ದಾಖಲೆಗಳು:
ಯೋಜನೆ ಸೌಲಭ್ಯ ಪಡೆಯಲು ಈ ಕೆಳಗೆ ತಿಳಿಸಿದ ದಾಖಲೆಗಳು ಅಗತ್ಯ;
* ಆಧಾರ್ ಕಾರ್ಡ್
* ಮತದಾರರ ಗುರುತಿನ ಚೀಟಿ
* ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ
* ಆದಾಯ ಪ್ರಮಾಣ ಪತ್ರ
* ಮೊಬೈಲ್‌ ಸಂಖ್ಯೆ

ಬಸವ ವಸತಿ ಯೋಜನೆ: ಅರ್ಜಿ ಭರ್ತಿಗೆ ಬೇಕಿರುವ ಮಾಹಿತಿ
ಬಸವ ವಸತಿ ಯೋಜನೆ ಅರ್ಜಿಯಲ್ಲಿ ಈ ಕೆಳಕಂಡ ಮಾಹಿತಿಗಳನ್ನು ಭರ್ತಿ ಮಾಡಬೇಕು
* ಅರ್ಜಿದಾರರ ಹೆಸರು
* ಜನ್ಮ ದಿನಾಂಕ
* ತಂದೆಯ ಹೆಸರು
* ಸಂಪರ್ಕ ಸಂಖ್ಯೆ
* ಲಿಂಗ
* ಆದಾಯ ವಿವರ
* ಮಂಡಲ
* ಜಿಲ್ಲೆ ಮತ್ತು ಗ್ರಾಮದ ಹೆಸರು
* ಅರ್ಜಿದಾರರ ವಿಳಾಸ
* ಆಧಾರ್ ಸಂಖ್ಯೆ
* ಭಾವಚಿತ್ರ
* ಆದಾಯ ಪ್ರಮಾಣಪತ್ರ

ಫಲಾನುಭವಿ ಸ್ಥಿತಿಗತಿ ಪರಿಶೀಲನೆ ಹೇಗೆ?
ಬಸವ ವಸತಿ ಯೋಜನೆ ಫಲಾನುಭವಿ ಸ್ಥಿತಿಗತಿಯನ್ನು ಪರಿಶೀಲಿಸಲು ಈ ಕೆಳಗಿನ ವಿಧಾನ ಅನುಸರಿಸಿ:
ಹಂತ 1: ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ಪೋರ್ಟಲ್ ʻಆಶ್ರಯʼಕ್ಕೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿನ ಮೆನು ಆಯ್ಕೆಯಲ್ಲಿ ʻಫಲಾನುಭವಿ ಮಾಹಿತಿʼ ಬಟನ್‌ ಒತ್ತಿರಿ
ಹಂತ 3: ಈಗ ಹೊಸದೊಂದು ವೆಬ್‌ಪುಟ ತೆರೆಯುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಮತ್ತು ಅರ್ಜಿ ಸಂಖ್ಯೆ ನಮೂದಿಸಬೇಕು
ಹಂತ 4: ʻಸಬ್‌ಮಿಟ್ʼ ಗುಂಡಿ ಒತ್ತಿದರೆ ನಿಮ್ಮ ಫಲಾನುಭವಿ ಸ್ಥಿತಿಗತಿಯು ಪರದೆಯ ಮೇಲೆ ತೆರೆದುಕೊಳ್ಳುತ್ತದೆ

Related News

spot_img

Revenue Alerts

spot_img

News

spot_img