25.9 C
Bengaluru
Friday, November 22, 2024

ಹಿರಿಯ ನಾಗರೀಕರಿಗೆ fd ಮೇಲೆ ಅಧಿಕ ಬಡ್ಡಿ ನೀಡುವ ಬ್ಯಾಂಕ್ಗಳು

ಬೆಂಗಳೂರು, ಡಿ. 23:ಭವಿಷ್ಯದ (Future) ಅಗತ್ಯಗಳಿಗಾಗಿ ಜನರು ವಿವಿಧ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಭಾರತೀಯರು ತಮ್ಮ ಆದಾಯದ (Income) ಹೆಚ್ಚಿನ ಭಾಗವನ್ನು ಉಳಿತಾಯ (Saving) ಮಾಡಲು ಯೋಚಿಸುತ್ತಾರೆ.ಬಹುತೇಕರು ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ. ಕಾರಣ ಮಾರುಕಟ್ಟೆ ಅಪಾಯದ ಭಯ. ಇನ್ನೂ ವಿಶೇಷವಾಗಿ ಹಿರಿಯ ನಾಯಕರು ತಮ್ಮ ಉಳಿತಾಯವನ್ನು ಸ್ಥಿರ ಠೇವಣಿ (Fixed Deposit)ಯಲ್ಲಿ .ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ

ಬ್ಯಾಂಕ್ ಅ೦ಕಿ ಸ೦ಖ್ಯೆ ಮಾಹಿತಿ ಪ್ರಕಾರ, ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರಗಳನ್ನು ನೀಡುವ ಈ ಖಾಸಗಿ ಬ್ಯಾಂಕ್ ಗಳ ಮಾಹಿತಿ ಇಲ್ಲಿದೆ.

1.IDFC ಫಸ್ಟ್ ಬ್ಯಾಂಕ್ ಮತ್ತು IndusInd ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷ ಅವಧಿಯ FD ಠೇವಣಿಗೆ ಶೇ.6.50 ಬಡ್ಡಿದರ ನೀಡುತ್ತಿವೆ. ಒಂದು ಲಕ್ಷ ರೂಪಾಯಿ ಮೂರು ವರ್ಷಗಳಲ್ಲಿ 1.21 ಲಕ್ಷ ರೂ. ಆಗಲಿದೆ.

2.RBL ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷದ FD ಗಳ ಮೇಲೆ ಶೇಕಡಾ 6.80 ಬಡ್ಡಿಯನ್ನು ನೀಡುತ್ತಿದೆ. ಒಂದು ಲಕ್ಷ ರೂಪಾಯಿ ಮೂರು ವರ್ಷಗಳಲ್ಲಿ 1.22 ಲಕ್ಷ ರೂ. ಆಗಲಿದೆ.

3.ಆಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ
6 ತಿಂಗಳು ಮತ್ತು 9 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 5.75ರಷ್ಟು ಬಡ್ಡಿದರವನ್ನು ನೀಡುತ್ತದೆ. 9 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 6ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 7ದಿನದಿಂದ 10 ವರ್ಷದ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಬ್ಯಾಂಕ್ ಶೇಕಡ 3.5ರಿಂದ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡುತ್ತದೆ.

4.FD ಮೇಲೆ ಶೇ.7 ರವರೆಗೆ ಬಡ್ಡಿ ..
ಬಂಧನ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ.7 ಬಡ್ಡಿಯನ್ನು ನೀಡುತ್ತವೆ. ಉದಾಹರಣೆಗೆ 1 ಲಕ್ಷ ರೂ, ಹೂಡಿಕೆ ಮಾಡಿದ್ರೆ ಮೂರು ವರ್ಷಗಳಲ್ಲಿ 1.23 ಲಕ್ಷ ರೂ. ಆಗಲಿದೆ.

Related News

spot_img

Revenue Alerts

spot_img

News

spot_img