24.6 C
Bengaluru
Wednesday, December 18, 2024

Bank Holiday February 2024:ಮುಂದಿನ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 11 ದಿನ ರಜೆ

#Bank Holiday #February 2024# Banks # 11 days holiday # next month

ನವದೆಹಲಿ;2024ರ ಫೆಬ್ರವರಿ ತಿಂಗಳಲ್ಲಿ ದೇಶದ ವಿವಿಧೆಡೆ ಒಟ್ಟು 11 ದಿನಗಳು ಬ್ಯಾಂಕ್‌ಗೆ ರಜೆ ಇರಲಿದೆ. ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ಫೆಬ್ರವರಿಯಲ್ಲಿ 6 ದಿನ ಮಾತ್ರ ರಜೆ ಇವೆ. ವಿವಿಧ ಪ್ರಾದೇಶಿಕ ರಜೆಗಳು ಸೇರಿದಂತೆ 11 ರಜೆಗಳಿವೆ. ಈ ಪೈಕಿ 6 ಭಾನುವಾರ ಹಾಗೂ ಶನಿವಾರದ ರಜೆಗಳು ಸೇರಿವೆ.ಹೆಚ್ಚಿನ ಸ್ಥಳಗಳಲ್ಲಿ ಬ್ಯಾಂಕ್‌ಗಳು ಭಾನುವಾರ ಹಾಗೂ ಶನಿವಾರ ರಜೆಗಳನ್ನು ಮಾತ್ರವೇ ಹೊಂದಿವೆ. ಬ್ಯಾಂಕ್ ರಜೆ ಇದ್ದರೂ ಎಟಿಎಂ, ನೆಟ್‌ ಬ್ಯಾಂಕಿಂಗ್ ಇತ್ಯಾದಿ ಡಿಜಿಟಲ್ ಸೇವೆಗಳು ಲಭ್ಯವಿರಲಿವೆ.ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಮೂರನೇ ಶನಿವಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಫೆಬ್ರವರಿ ತಿಂಗಳ ಆರ್ ಬಿಐ(RBI) ರಜಾಪಟ್ಟಿ ಹೀಗಿದೆ:
ಫೆ. 4: ಭಾನುವಾರ
ಫೆ. 10: ಎರಡನೇ ಶನಿವಾರ
ಫೆ. 11: ಭಾನುವಾರ
ಫೆ. 14: ಸರಸ್ವತಿ ಪೂಜೆ / ಬಸಂತ ಪಂಚಮಿ (ಅಗಾರ್ತಲ, ಭುಬನೇಶ್ವರ್, ಕೋಲ್ಕತಾದಲ್ಲಿ ರಜೆ)
ಫೆ. 15: ಲುಯ್ ಎನ್​ಗೈ ನಿ ಹಬ್ಬ (ಇಂಫಾಲ್​ನಲ್ಲಿ ರಜೆ)
ಫೆ. 18: ಭಾನುವಾರ
ಫೆ. 19: ಶಿವಾಜಿ ಜಯಂತಿ (ಬೇಲಾಪುರ್, ಮುಂಬೈ ಮತ್ತು ನಾಗಪುರ್​ನಲ್ಲಿ ರಜೆ)
ಫೆ. 20: ರಾಜ್ಯೋತ್ಸವ ಹಬ್ಬದ ಪ್ರಯುಕ್ತ ಐಜ್ವಾಲ್ ಮತ್ತು ಇಟಾನಗರ್​ನಲ್ಲಿ ರಜೆ
ಫೆ. 24: ನಾಲ್ಕನೇ ಶನಿವಾರ
ಫೆ. 25: ಭಾನುವಾರ
ಫೆ. 26: ನ್ಯೋಕುಮ್ ಆಚರಣೆ (ಇಟಾನಗರ್​ನಲ್ಲಿ ರಜೆ)

Related News

spot_img

Revenue Alerts

spot_img

News

spot_img