22.9 C
Bengaluru
Thursday, January 23, 2025

ಬೆಂ-ಮೈ ಎಕ್ಸ್‌ಪ್ರೆಸ್‌ ವೇ – ಚಾಲಕರಿಂದ 7 ಲಕ್ಷ ರೂ. ದಂಡ ವಸೂಲಿ

ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತಗಳನ್ನು ತಡೆಗಟ್ಟಲು ಹೆದ್ದಾರಿ ಪ್ರಾಧಿಕಾರ ಹೊಸ ಕ್ರಮ ಹಾಗು ಪೊಲೀಸರು ಸ್ಪೀಡ್ ಹಂಟರ್ ಮೂಲಕ ವಾಹನಗಳ ವೇಗದ ಮೇಲೆ ಕಣ್ಣಿಟ್ಟಿದ್ದಾರೆ.ಮಂಡ್ಯ (Mandya) ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಸುಮಾರು 7 ಲಕ್ಷ ರೂ.ಗಳನ್ನು ಪೊಲೀಸರು ವಸೂಲಿ ಮಾಡಿದ್ದಾರೆ.ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಾವಿರಕ್ಕೂ ಅಧಿಕ ಅಪಘಾತಗಳು ನಡೆದಿವೆ.ಎಕ್ಸ್‌ಪ್ರೆಸ್‌ವೇ ನಲ್ಲಿ 100 ಕಿಮೀಗೂ ಅಧಿಕ ವೇಗದಲ್ಲಿ ವಾಹನಗಳು ಚಲಿಸದಂತೆ, ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದಲ್ಲದೇ ಟ್ರಕ್‍ಗಳು ಎಡಬದಿಯ ವೇನಲ್ಲಿ ಸಂಚಾರ ಮಾಡಬೇಕೆಂದು ನಿಯಮ ಜಾರಿ ಮಾಡಲಾಗಿದೆ.ಅತಿಯಾದ ವೇಗದ ಚಾಲನೆಗೆ 500 ರೂ. ಲೈನ್ ಡಿಸಿಪ್ಲೀನ್ ಉಲ್ಲಂಘನೆಗೆ 250 ರೂ. ಹೆದ್ದಾರಿ ಪ್ರಾಧಿಕಾರ ಅಳಡಿಸಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಸ್ಪೀಡ್ ಡಿಟೆಕ್ಟರ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಗಣಂಗೂರು ಟೋಲ್ ಪ್ಲಾಜಾಕ್ಕೂ ಮೊದಲ 2 ಕಿಮೀ ದೂರದಲ್ಲಿ ಪೊಲೀಸರು ಸ್ಪೀಡ್ ಹಂಟರ್ ಮೂಲಕ ವಾಹನಗಳ ವೇಗದ ಮೇಲೆ ಕಣ್ಣಿಟ್ಟಿದೆ.

Related News

spot_img

Revenue Alerts

spot_img

News

spot_img