21.1 C
Bengaluru
Monday, December 23, 2024

ಬೆಂಗಳೂರು-ಮೈಸೂರು ಹೆದ್ದಾರಿ: ಉದ್ಘಾಟನೆಗೂ ಮುನ್ನವೇ ಟೋಲ್ ಸಂಗ್ರಹ ಶುರು:

ಬೆಂಗಳೂರು: ಫೆ: 27;ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ರವರು ಉಧ್ಘಾಟಿಸಲಿರುವ ಹತ್ತು ಪಥಗಳ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಇಂದಿನಿಂದ (ಮಂಗಳವಾರ)ದಿಂದ ಟೋಲ್ ಸಂಗ್ರಹ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಪೂರ್ಣ ಪ್ರಮಾಣದ ರಸ್ತೆ ಕಾಮಗಾರಿ ಮುಗಿಯುವ ಮುನ್ನವೇ ಟೋಲ್ ಬಾರಿ ಹೊರೆಯಾಗಲಿದೆ.

ಬೆಂಗಳೂರು -ಮೈಸೂರು ನಡುವೆ ಸುಗಮ ಸಂಚಾರಕ್ಕೆಂದು ನಿರ್ಮಿಸಿರುವ ಈ ರಸ್ತೆಯು ಬೆಂಗಳೂರಿನ ನೈಸ್ ರಸ್ತೆಯಿಂದ ಇಡಿದು ಮೈಸೂರಿನ ಮಣಿಪಾಲ್ ಸಿಗ್ನಲ್ ವರೆಗೆ 117 ಕಿ.ಮೀ ಉದ್ದದ ಹೆದ್ದಾರಿಯಾಗಿದ್ದು ಬೆಂಗಳೂರು–ನಿಡಘಟ್ಟವರೆಗಿನ 56 ಕಿ.ಮೀ. ಉದ್ದದ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಹತ್ತು ಪಥಗಳ ಹೆದ್ದಾರಿಯಲ್ಲಿ ಆರು ಪಥಗಳ Express way ನಲ್ಲಿ ಸಂಚರಿಸುವವರಿಗೆ ಈ ಟೋಲ್ ಅನ್ವಯ ಆಗಲಿದೆ. ರಸ್ತೆಯ ಎಡ ಮತ್ತು ಬಲವಾಗದಲ್ಲಿರುವ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿನ ಸಂಚಾರಕ್ಕೆ ಯಾವುದೇ ಟೋಲ್ ಇರುವುದಿಲ್ಲ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಲಭ್ಯವಿದೆ.

ಬೆಂಗಳೂರಿನಿಂದ ಮೈಸೂರು ನಗರದ ಕಡೆ ಪ್ರಯಾಣ ಮಾಡುವವರು ಕಣಮಿಣಕಿ ಗ್ರಾಮದ ಬಳಿ ಟೋಲ್ ನಿರ್ಮಿಸಲಾಗಿರುವ ಟೋಲ್ ನಲ್ಲಿ ಟೋಲ್ ಶುಲ್ಕ ಪಾವತಿಸಿ ಪ್ರಯಾಣಿಸಬೇಕು. ಮೈಸುರು ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವವರು ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್ ನಲ್ಲಿ ಟೋಲ್ ಕಟ್ಟಿ ಬೆಂಗಳೂರಿನತ್ತ ಬರಬಹುದು. ಈ ಕೇಂದ್ರಗಳು ತಲಾ 11 ಗೇಟುಗಳನ್ನು ಒಳಗೊಂಡಿದ್ದು, ಫ್ಯಾಶ್ ಟ್ಯಾಗ್ ಸಹಿತ ವಿವಿಧ ಸೌಲಭ್ಯಗಳನ್ನು ಒಳಗೊಳ್ಳಲಿವೆ.
ಮಂಡ್ಯ ದಿಂದ ಮೈಸೂರು ನಗರದ ವರೆಗಿನ ಹೆದ್ದಾರಿಯಲ್ಲಿ ಇನ್ನೂ ಮೂರ್ನಾಲ್ಕು ಕಡೆ ಕಾಮಗಾರಿ ಕೆಲಸ ನಡೆಯುತ್ತಿರುವುದರಿಂದ ಈ ರಸ್ತೆಯಲ್ಲಿ ಟೋಲ್ ವಿನಾಯಿತಿ ಇರಲಿದೆ. ಟೋಲ್ ಸಂಗ್ರಹವಾಗುವ ರಸ್ತೆಯಲ್ಲಿ ದ್ವೀಚಕ್ರವಾಹನ, ಆಟೋ ಟ್ರಾಕ್ಟರ್ ಸಂಚಾರಕ್ಕೆ ನಿರ್ಭಂದ ಬಿಳುವ ಸಾಧ್ಯತೆಗಳಿವೆ.

Related News

spot_img

Revenue Alerts

spot_img

News

spot_img