20.5 C
Bengaluru
Tuesday, July 9, 2024

ವಿಶ್ವದಲ್ಲೇ 3ನೇ ರ‍್ಯಾಂಕ್ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು;ಅತ್ಯುತ್ತಮ ಕಾರ್ಯಕ್ಷಮತೆ & ಸಮಯೋಚಿತ ಸೇವೆಯಲ್ಲಿ ಜಾಗತಿಕವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು(Kempegowda International Airport) 3ನೇ ದರ್ಜೆ(Rank) ಪಡೆದಿದೆ. ವಿಮಾನ ನಿಲ್ದಾಣಗಳ ಮೌಲ್ಯಮಾಪನ ಬಗ್ಗೆ ‘ಸಿರಿಯಮ್(Cerium) ವರದಿಯ ಬಿಡುಗಡೆಗೊಳಿಸಿದೆ. ಅದರಂತೆ ಕೆಂಪೇಗೌಡ ವಿಮಾನ ನಿಲ್ದಾಣದಂತೆ ಹೈದ್ರಾಬಾದ್ & ಕೊಲ್ಕತ್ತಾ ಉತ್ತಮ ರ‍್ಯಾಂಕ್ ಗಿಟ್ಟಿಸಿಕೊಂಡಿವೆ. ಈ ಮೂಲಕ ದೇಶದ ಪ್ರಮುಖ ಮೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ವಿಶ್ವದ ಅಗ್ರ 10 ಪಟ್ಟಿಯಲ್ಲಿ ಹೆಸರು ಪಡೆದಿವೆ.ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಯುನೇಸ್ಕೋದ 2023ರ ಪ್ರಿಕ್ಸ್ ವರ್ಸೇಲ್ಸ್‌ನ(Prix ​​Versailles) ಪ್ರತಿಷ್ಠಿತ ಪುರಸ್ಕಾರದೊಂದಿಗೆ ಗೌರವಿಸಲ್ಪಟ್ಟಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಜಗತ್ತಿನ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.ವಾಯುಯಾನ ಕಾರ್ಯಕ್ಷಮತೆಯನ್ನು ನಿರ್ಣಯಿಸುವಲ್ಲಿ ಅನ್ವಯಿಸಲಾದ ಕಠಿಣ ಮಾನದಂಡ ಎಂದು ಇದನ್ನ ಸಿರಿಯಮ್​ ಗುರುತಿಸಿದೆ. ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ(Airport) ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೊರೆತಿರುವ ಮೂರನೇ ಸ್ಥಾನವು ಸಿಲಿಕಾನ್​ ಸಿಟಿಯ ಗರಿಮೆಯನ್ನ ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಇದು ಉನ್ನತ-ಶ್ರೇಣಿಯ ವಾಯುಯಾನ ಕೇಂದ್ರ ಎನ್ನುವುದಕ್ಕೆ ಮಹತ್ವದ ಪುರಾವೆಯಾಗಿದೆ.ಶೇ. 84.08 ಅಂಕ ಗಳಿಸುವ ಮೂಲಕ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯುತ್ತಮವಾದವುಗಳಲ್ಲಿ ಉತ್ತಮ ಸ್ಥಾನ ಗಳಿಸಿದ್ದರೆ, ಅಮೆರಿಕದ ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್ ವಿಮಾನ ನಿಲ್ದಾಣ ಕ್ರಮವಾಗಿ ಮೊದಲು ಮತ್ತು 2ನೇ ಸ್ಥಾನ ಪಡೆದುಕೊಂಡಿವೆ. ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣವು ಶೇ 83.91 ರಷ್ಟು ಅಂಕ ಗಳಿಸಿ ಮಧ್ಯಮ ಗಾತ್ರದ ವಿಮಾನ ನಿಲ್ದಾಣಗಳಲ್ಲಿ 9 ನೇ ಸ್ಥಾನದಲ್ಲಿದೆ.

Related News

spot_img

Revenue Alerts

spot_img

News

spot_img