23.9 C
Bengaluru
Sunday, December 22, 2024

ಜ.18ರಿಂದ 28ರವರೆಗೆ Bangalore Flower show: ವಿಶ್ವ ಗುರು ಬಸವಣ್ಣ ಅನಾವರಣ

ಬೆಂಗಳೂರು: ಗಣರಾಜ್ಯೋತ್ಸವದ(Republicday) ಅಂಗವಾಗಿ ಜ.18ರಿಂದ 28ರವರೆಗೆ ಲಾಲ್‌ಬಾಗ್‌(Lalbagh)ನಲ್ಲಿ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ 215ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯ ಈ ಬಾರಿಯ ಪರಿಕಲ್ಪನೆಯಾಗಿದ್ದು, ನೂರಾರು ಮಾದರಿಯ 10 ಲಕ್ಷ ಹೂಗಳ ಬಳಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.ಈ ಬಾರಿ ಸುಮಾರು 68 ವಿಧದ 32 ಲಕ್ಷ ಹೂಗಳನ್ನು ಬಳಸಿ ಅನುಭವ ಮಂಟಪ, ಐಕ್ಯ ಮಂಟಪ ಇತ್ಯಾದಿಗಳನ್ನು ನಿರ್ಮಿಸಲಾಗುತ್ತಿದೆ. ಜ.18ರಂದು ಸಂಜೆ 6 ಗಂಟೆಗೆ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನ(Flowershow)ವನ್ನು ಉದ್ಘಾಟಿಸಲಿದ್ದು, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾ‌ರ್, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿರುವರು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ತಿಳಿಸಿದರು,ಗಣರಾಜ್ಯೋತ್ಸವದ ಅಂಗವಾಗಿ ಐತಿಹಾಸಿಕ ಲಾಲ್ ಬಾಗ್‌ ಗಾಜಿನಮನೆಯಲ್ಲಿ ಜನವರಿ 18ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನ ಈ ಭಾರಿಯ ವಿಶೇಷವಾಗಿದೆ. 215ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಇದಾಗಿದೆ.

ಫಲಪುಷ್ಪ ಪ್ರದರ್ಶನವು 10 ದಿನಗಳ ಕಾಲ ನಡೆಯಲಿದ್ದು, ಮಧ್ಯದಲ್ಲಿ ಹೂಗಳನ್ನು ಬದಲಾಯಿಸಲಾಗುತ್ತದೆ. ಪೋಡೋಕಾರ್ಪಸ್, ಸೈಪ್ರಸ್, ಸಾಂಗ್ ಆಫ್ ಇಂಡಿಯಾ, ಆಸ್‌ಪರಾಗಸ್ ಸೇರಿದಂತೆ ನಾನಾ ರೀತಿಯ ಹೂಗಳನ್ನು ಬಳಸಲಾಗುತ್ತದೆ.ಗಾಜಿನಮನೆಯ ಒಳಾಂಗಣದ ಹಿಂಬದಿಯ ಆವರಣದಲ್ಲಿ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ, ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ಸೂಕ್ತ ಪೀಠದ ಮೇಲಿರಿಸಿ ಹೂಗಳಿಂದ ಅಲಂಕರಿಸಲಾಗುತ್ತಿದೆ. ಒಳಾಂಗಣದಲ್ಲಿ 8 ಅಡಿ ಅಗಲ ಮತ್ತು 7 ಅಡಿ ಉದ್ದದ ಪ್ರದೇಶದಲ್ಲಿ ವಚನ ಸಾಹಿತ್ಯಕ್ಕೆ ಪೂರಕವಾದ ವಚನಗಳಿರುವ ಪ್ರಾಚೀನ ಓಲೆಗರಿ ಹಸ್ತಪ್ರತಿಗಳನ್ನು ಮತ್ತು ಅವುಗಳ ಸಂರಕ್ಷಣಾ ವಿಧಾನ ಹಾಗೂ ಮಹತ್ವದ ಕುರಿತು ವಿಶೇಷ ಪ್ರದರ್ಶನ ಇರಲಿದೆ.ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ. ರಜಾ ದಿನಗಳಲ್ಲಿ 100 ರೂ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 30 ರೂ. ಪ್ರವೇಶ ಶುಲ್ಕವಿದೆ. ಕಳೆದ ಬಾರಿ 10 ಲಕ್ಷದಷ್ಟು ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದರು. ಈ ಬಾರಿ 10 ಕ್ಕೂ ಹೆಚ್ಚು ಜನರು ಬರುವ ಸಾಧ್ಯತೆ ಇದೆ. 400ಕ್ಕೂ ಹೆಚ್ಚು ಟ್ರಾಫಿಕ್ ಪೋಲಿಸರು, 200 ಕ್ಕು ಹೆಚ್ಚು ತೋಟಾಗಾರಿಕೆ ಸಿಬ್ಬಂದಿಗಳು ಭದ್ರತೆಗೆ ಇರುತ್ತಾರೆ.ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯಮಂಟಪದ ಪುಷ್ಪ ಮಾದರಿ ಮತ್ತು ಬಸವಣ್ಣನವರ ಬದುಕಿನ ಪ್ರಮುಖ ಘಟ್ಟಗಳನ್ನು ಸೂಚಿಸುವ ಕಲಾಕೃತಿಗಳ ಪ್ರದರ್ಶನವೂ ಇರಲಿದೆ.

Related News

spot_img

Revenue Alerts

spot_img

News

spot_img