21.1 C
Bengaluru
Thursday, December 19, 2024

ಬಿಡಿಎ ಒತ್ತುವರಿ ಮಾಡಿಕೊಂಡಿದ್ದ 5.5 ಎಕರೆ ಜಾಗವನ್ನು ತೆರವುಗೊಳಿಸಿದ ಅರಣ್ಯ ಇಲಾಖೆ

ಬೆಂಗಳೂರು, ಆ. 23 : ಬಿಡಿಎನಲ್ಲಿ ಆಗಾಗ ಕಾನೂನು ಉಲ್ಲಂಘಿಸಿ ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗುತ್ತಲೇ ಇರುತ್ತದೆ. ಅದರಲ್ಲೂ ಅರಣ್ಯ ಪ್ರದೇಶಗಳು ಒತ್ತುವರಿಯಾದಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಲೇಔಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಿಡಿಎ ಸಾಕಷ್ಟು ಬಾರಿ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವುದು ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಬಿಡಿಎ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಸಂಬಂಧ ತೆರವು ಕಾರ್ಯಾಚರಣೆ ನಡೆದಿದೆ.

ಬಡಮನವರ್ತೆ ಕಾವಲ್‌ನಲ್ಲಿ ಬಿಡಿಎ 5 ಎಕರೆ 20 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿತ್ತು. ಈ ಭುಮಿಯನ್ನು ಈಗ ಅರಣ್ಯ ಪ್ರದೇಶ ವಶಪಡಿಸಿಕೊಂಡಿದ್ದು, ಈ ಬಗ್ಗೆ ಡಿಎಚ್‌ ವರದಿ ಮಾಡಿದೆ. ಟಾ ಜಮೀನು ಉಲ್ಲೇಖವಾಗಿಲ್ಲ. ಲಿಂಗಧೀರನಹಳ್ಳಿಯ ಬಿಬಿಎಂಪಿ ಕಸ ವಿಂಗಡಣೆ ಘಟಕದ ಬಳಿ ಇರುವ ಅರಣ್ಯ ಭೂಮಿ ಬಿಎಂ ಕಾವಲ್ ಸರ್ವೆ ನಂಬರ್ 92ರಲ್ಲಿನ 5 ಎಕರೆ 20 ಗುಂಟೆ ಅನ್ನು ಬನಶಂಕರಿ 6ನೇ ಹಂತ ಎಂದು ಮರುನಾಮಕರಣ ಮಾಡಲಾಗಿದೆ. ಈ ಸ್ಥಳವನ್ನು ಹಲವು ವ್ಯಕ್ತಿಗಳಿಗೆ ಹಂಚಿಕೆಯನ್ನೂ ಮಾಡಲಾಗಿದೆ.

ಈ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಬುನಾದಿಗಳನ್ನು ಹಾಕಿದ್ದು, ಕೆಲವು ಕಡೆ ಬೆಟ್ಟವನ್ನು ಕಡಿಯಲಾಗಿದೆ. ಇದರಿಂದ ಪರಿಸರ, ವನ್ಯ ಜೀವಿಗಳು ಹಾಗೂ ಸ್ಥಳೀಯ ವಾಸಿಗಳಿಗೂ ತೊಂದರೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಅತಿಕ್ರಮಣ ಮಾಡಿಕೊಂಡಿದ್ದ ಸ್ಥಳವನ್ನು ತೆಗೆದು ಹಾಕಲಾಗಿದೆ. ಅಕ್ರಮ ಒತ್ತುವರಿಯು ಅರಣ್ಯವನ್ನು ನಾಶಪಡಿಸಿದ್ದಲ್ಲದೆ, ಭೂ ಬಳಕೆಯಲ್ಲಿ ನಾಟಕೀಯ ಬದಲಾವಣೆಗಳನ್ನು ಉಂಟು ಮಾಡಿದೆ ಎಂದು ಕ್ಷೇತ್ರ ಅಧಿಕಾರಿಯೊಬ್ಬರು ಹೇಳಿದರು.

ಅತಿಕ್ರಮಣಗೊಂಡ ಪ್ರದೇಶದಲ್ಲಿ ಬೆಟ್ಟದ ಒಂದು ಭಾಗವನ್ನು ಕಡಿದು ಹಲವಾರು ನಿವೇಶನಗಳನ್ನು ನಿರ್ಮಿಸಲಾಗಿದೆ. ಈ ಕೆಲವು ಕ್ರಮಗಳು ಪರಿಸರ ಮತ್ತು ವನ್ಯಜೀವಿಗಳ ಮೇಲೆ ಮಾತ್ರವಲ್ಲದೆ ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಜನರ ಮೇಲೂ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಹೇಳಿದರು.

ನಿಜಕ್ಕೂ ಅರಣ್ಯ ಇಲಾಖೆ ಒತ್ತುವರಿ ವಿಚಾರವನ್ನು ಬಿಡಿಎ ಬಳಿ ಎತ್ತಿತ್ತು. ಇದಕ್ಕೆ ಉತ್ತರಿಸಿದ ಬಿಡಿಎ ಆಯುಕ್ತ ಕುಮಾರ್ ನಾಯ್ಕ್ ಅವರು, ಲೇಔಟ್ ರೂಪಿಸಲು ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ವಿವರ ನೀಡಿ, 1,157 ನಿವೇಶನ ಮಾರಾಟ ಹಾಗೂ ಎರಡು ಸಿಎ ನಿವೇಶನ ಹಂಚಿಕೆಗೆ ಒಪ್ಪಿಕೊಂಡಿದ್ದಾರೆ.

2003-04 ರ ಅವಧಿಯಲ್ಲಿ ಬಿಡಿಎ ಒಟ್ಟು 2006 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಈಗ ಈ ನಿವೇಶನಗಳ ಮಾಲಿಕರು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆಗ ಅರಣ್ಯ ಇಲಾಖೆ ಅನುಮತಿ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಇನ್ನು ಅರಣ್ಯ ಇಲಾಖೆ ಈ ಪ್ರದೇಶದಲ್ಲಿರುವ ಬಹಳಷ್ಟು ಭೂಮಿ ಅರಣ್ಯಕ್ಕೆ ಸೇರಿದ್ದು ಎಂದು 2009 ರಲ್ಲಿ ಹೇಳಿದೆ. ಇದರಿಂದ ಬಿಡಿಎಗೆ 849 ನಿವೇಶನಗಳು ಕೈ ತಪ್ಪಿದೆ. ಇದರಿಂದ ನಷ್ಟವನ್ನು ಎದುರಿಸಿದೆ. ಇನ್ನು ಬಿಡಿಎ ಮೂಲಕ ನಿವೇಶನಗಳನ್ನು ಪಡೆದ ಮಾಲೀಕರು ಎರಡು ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಗೋಡೆ ನಿರ್ಮಾಣ ಮಾಡಿರುವ 100ಮೀಟರ್ ವರೆಗೂ ಬಫರ್ ಝೋನ್ ಎಂದು ನಿವೇಶನ ನಿರ್ಮಾಣಕ್ಕೆ ಅನುಮತಿಯನ್ನು ನೀಡಿಲ್ಲ. ಇದರಿಂದ ಮತ್ತೆ ಬಿಡಿಎಗೆ ಮತ್ತಷ್ಟು ನಿವೇಶನಗಳ ನಷ್ಟವುಂಟಾಗಿದೆ. ಒಟ್ಟಾರೆಯಾಗಿ, 1,157 ನಿವೇಶನಗಳು ತೊಂದರೆಗೆ ಈಡಾಗಿವೆ ಎಂದು ಬಿಡಿಎ ಅಧಿಕಾರಿ ಹೇಳಿದ್ದಾರೆ. ಇದಲ್ಲದೇ, ಬಿಡಿಎ ಅಧಿಕಾರಿಗಳು 30 ಮೀಟರ್ ಬಫರ್ ಝೋನ್ ಎಂದು ಗುರುತಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು, ಸದ್ಯ ಬಿಡಿಎ ಹಂಚಿದ ನಿವೇಶನಗಳಲ್ಲಿ ಮನೆ ಕಟ್ಟಲಾಗದೇ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.

Related News

spot_img

Revenue Alerts

spot_img

News

spot_img