#Bagar Hukum #cultivated #legalized #Revenueminister #Krishnabyeregowda
ಬೆಂಗಳೂರು: ಕಳೆದ 15 ವರ್ಷಗಳಿಂದ ಬಗರ್ ಹುಕುಂ ಜಾಗದಲ್ಲಿ ಸಾಗುವಳಿ ಮಾಡಿಕೊಂಡ ರೈತರಿಗೆ ಜಮೀನು ಮಂಜೂರು ಮಾಡಲು ಸರ್ಕಾರ ತೀರ್ಮಾನಿಸಿದೆ.15 ವರ್ಷ ಕೃಷಿ ಮಾಡಿದ ಬಗರ್ ಹುಕುಂ ಭೂಮಿಯನ್ನು ಶೀಘ್ರ ಸಕ್ರಮ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬಗರ್‌ಹುಕುಂ(Bagarhukum) ಜಮೀನು ಸಕ್ರಮಕ್ಕೆ ಫಾರಂ 57ರಲ್ಲಿ ಸಲ್ಲಿಸಿದ ಅರ್ಜಿಗಳಲ್ಲಿ ದುರುಪಯೋಗ ಆಗಿರುವ ಸಾಧ್ಯತೆಗಳಿವೆ. ಕೆಲವರು 5-10 ಅರ್ಜಿ ಹಾಕಿರುವ ಮಾಹಿತಿ ಇದೆ. 15 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಆ್ಯಪ್(App) ಮೂಲಕ ಪತ್ತೆ ಮಾಡಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುವುದು. ಆದಷ್ಟು ಬೇಗ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.ಲಕ್ಷಾಂತರ ರೈತರು ಬಗರ್ ಹುಕುಂ ಜಮೀನು ಸಕ್ರಮಕ್ಕೆ ಕಾಯುತ್ತಿದ್ದು, ಸರ್ಕಾರಿ ಭೂಮಿ ಕೂಡ ಭಾರೀ ಪ್ರಮಾಣದಲ್ಲಿ ಒತ್ತುವರಿಯಾಗುತ್ತಿದೆ. ಇರುವ ಭೂಮಿಯನ್ನು ಉಳಿಸಿಕೊಂಡು ಅರ್ಹ ಬಡ ರೈತರಿಗೆ ಹಕ್ಕು ನೀಡಲು ಬಗರ್ ಹುಕುಂ ಸಕ್ರಮಕ್ಕೆ ಕೆಲವು ಕಠಿಣ ನಿಯಮಗಳನ್ನು ತರಲಾಗುತ್ತಿದೆ,ಬಗರ್ ಹುಕುಂ ಸಮಿತಿಯ ಮುಂದೆ ಇರುವ ಅರ್ಜಿಗಳನ್ನು ಆರು ತಿಂಗಳ ಅವಧಿಯಲ್ಲಿ ತೀರ್ಮಾನ(Disposal) ಮಾಡಲು ಸರ್ಕಾರ ನಿರ್ಧರಿಸಿದೆ,ಬಗರ್ ಹುಕುಂ ಸಮಿತಿಯ ಮುಂದೆ ಇರುವ ಅರ್ಜಿಗಳನ್ನು ಆರು ತಿಂಗಳ ಅವಧಿಯಲ್ಲಿ ತೀರ್ಮಾನ ಮಾಡಲು ಸರ್ಕಾರ ನಿರ್ಧರಿಸಿದೆ. ಬಗರ್ ಹುಕುಂ ಸಮಿತಿಗಳ ರಚನೆಗೆ ಕಾರ್ಯ ವಿಧಾನ ಆರಂಭಿಸಲಾಗಿದ್ದು, ಈಗಾಗಲೇ 50 ತಾಲೂಕುಗಳಲ್ಲಿ ಸಮಿತಿ ರಚನೆ ಕಾರ್ಯ ವಿಧಾನ ಅಂತಿಮಗೊಂಡಿದೆ.