28.2 C
Bengaluru
Wednesday, July 3, 2024

ಮ್ಯುಟೇಷನ್ ಮಾಹಿತಿಗಳ ಸ್ವಯಂಚಾಲಿತ ಪರಿಷ್ಕರಣೆ;ಏ.1 ರಿಂದ ಆಧಾರ್ ಜೋಡಣೆ ಕಡ್ಡಾಯ!

#Automatic #revision #mutation information #Aadhaar #linking mandatory #April 1
ಬೆಂಗಳೂರು;ಸರ್ಕಾರದ ಮತ್ತೊಂದು ಯೋಜನೆ ಪಡೆಯಲು ಆಧಾ‌ರ್(Aadhar) ಕಡ್ಡಾಯವೆಂದು ಹೇಳುತ್ತಿರುವ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಗಳನ್ನು ಕಬಳಿಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಇನ್ಮುಂದೆ ಆಸ್ತಿ ನೋಂದಣಿಗೂ ಆಧಾ‌ರ್ ಗುರುತು ಬಳಸಿಕೊಳ್ಳಲಾಗುತ್ತದೆ. ‘ನನ್ನ ಭೂಮಿ, ನನ್ನ ಗುರುತು’ ಶೀರ್ಷಿಕೆಯಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ(Subregister office) ಆಸ್ತಿ ನೋಂದಣಿ ವೇಳೆ ಆಧಾ‌ರ್ ಪಡೆಯಲಾಗುತ್ತದೆ. ಆದರೆ, ಇದನ್ನು ಕಡ್ಡಾಯ ಮಾಡುತ್ತಿಲ್ಲ ಎಂದಿದ್ದಾರೆ.ಮುಂಬರುವ ಏ.1 ರಿಂದ ‘ನನ್ನ ಆಸ್ತಿ’ ಯೋಜನೆಯಡಿ ‘ನನ್ನ ಭೂಮಿ-ನನ್ನ ಗುರುತು’ ಎಂಬ ಧೈಯದೊಂದಿಗೆ, ಪಹಣಿ ಜೊತೆಗೆ ರೈತರು ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಲಿದೆ. ಈ ಸಂಬಂಧ ಮಹತ್ವದ ಕಾರ್ಯ ಆರಂಭಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಜ್ಯದ ಕೆಲವೆಡೆ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ನಿನ್ನೆಯಿಂದ ಇದು ರಾಜ್ಯಾದ್ಯಂತ ವಿಸ್ತರಣೆಯಾಗಿದೆ. ಆಸ್ತಿಗಳ ನೋಂದಣಿ ಸಮಯದಲ್ಲಿಯೂ ಆಧಾ‌ರ್ ಕಡ್ಡಾಯವಾಗಿ ಕೇಳಲಾಗುತ್ತದೆ ಎಂದು ಹೇಳಿದ್ದಾರೆ.ಆಯಾ ಪಹಣಿ ಮೇಲೆ ಬ್ಯಾಂಕ್‌ಗಳು, ನ್ಯಾಯಾಲಯಗಳು ಹೀಗೆ ವಿವಿಧ ಮೂಲಗಳಿಂದ ನೀಡುವ ಮಾಹಿತಿಯನ್ನು ನೇರವಾಗಿ ಪಡೆದು ಅದನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಇದಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆದಾಡುವ ಅಗತ್ಯವನ್ನು ತಪ್ಪಿಸಲಾಗುತ್ತಿದೆ. ಇದರಿಂದ ರೈತರ ಸಮಯ, ಅಧಿಕಾರಿಗಳ ಸಮಯ ಪೋಲಾಗುವುದು ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿದರು.ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಈಗಾಗಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. 15 ಲಕ್ಷ ಪಹಣಿದಾರರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಲು ಕೋರಲಾಗಿದ್ದು, ಏಪ್ರಿಲ್ 1ರಿಂದ ಅಧಿಕೃತವಾಗಿ ನನ್ನ ಆಸ್ತಿ ಹೆಸರಲ್ಲಿ ನನ್ನ ಭೂಮಿ ನನ್ನ ಗುರುತು ಎಂಬ ಉದ್ದೇಶದೊಂದಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಗುವುದು.

Related News

spot_img

Revenue Alerts

spot_img

News

spot_img