#Atal Setu, # country’s longest #sea bridge, # inaugurated today
ಮುಂಬೈ;ಭಾರತದ ಅತಿ ಉದ್ದದ ಸಮುದ್ರ ಸೇತುವೆ ನಾಳೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.ದೇಶದಲ್ಲೇ ಅತ್ಯಂತ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು(ಶುಕ್ರವಾರ )ಚಾಲನೆ ನೀಡಲಿದ್ದು, ನಗರದಲ್ಲಿ ಟ್ರಾಫಿಕ್ ಬವಣೆ ಯನ್ನು ಸಾಕಷ್ಟು ಕಡಿಮೆ ಮಾಡ 21.8 ಕಿ.ಮೀ. ಉದ್ದದ ಸೇತುವೆ ಯಾಗಿದ್ದು, ಮಹಾರಾಷ್ಟ್ರದಲ್ಲಿ ಮುಂಬೈ ಟ್ರಾನ್ಸ್ ಹಾರ್ಬ‌್ರ ಲಿಂಕ್ (MTHL) ಸೇತುವೆಯನ್ನು ನಾಳೆ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. 21.8 ಕಿಮೀ ಉದ್ದದ ಸಂಪೂರ್ಣ ಸೇತುವೆಯ ವಿಡಿಯೋ ವೈರಲ್ ಆಗುತ್ತಿದೆ. ದಿನಕ್ಕೆ ಸುಮಾರು 70,000 ವಾಹನಗಳು ಈ ಸೇತುವೆ ಮೇಲೆ ಸಂಚರಿಸಲಿವೆ. 1.5 ಗಂಟೆಗಳ ಪ್ರಯಾಣ ಕೇವಲ 20 ನಿಮಿಷಗಳಿಗೆ ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.ಈ ಸೇತುವೆಗೆ ಆಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಸೇವಾ ಅಟಲ್ ಸೇತು ಎಂದು ಹೆಸರಿಡಲಾಗಿದೆ. ಸೇತುವೆ ನಿರ್ಮಾಣಕ್ಕೆ 21,000 ಕೋಟಿ ರು. ವೆಚ್ಚವಾಗಿದೆ. ಇದರಲ್ಲಿ 15000 ಕೋಟಿ ರು. ಸಾಲ ಪಡೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ತಿಳಿಸಿದರು. ಸೇತುವೆಯಿಂದಾಗಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಸಮಯ, ಇಂಧನ ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.ಅಟಲ್ ಸೇತು ನಿರ್ಮಾಣಕ್ಕೆ 177,903 ಮೆಟ್ರಿಕ್ ಟನ್ ಉಕ್ಕು ಮತ್ತು 504,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.ಅಟಲ್ ಸೇತುವೆಯಲ್ಲಿ 4 ಚಕ್ರದ ವಾಹನಗಳ ವೇಗ ಮಿತಿ 100 ಕಿಲೋ ಮೀಟರ್. ಕಾರು, ಲಘು ವಾಹನಗಳು, ಮಿನಿ ಬಸ್ ಗಳು ಮತ್ತು ಎರಡು ಆಕ್ಸೆಲ್ ಬಸ್‌ಗಳ ವೇಗದ ಮಿತಿ ಗಂಟೆಗೆ 100 ಕಿ. ಮೀ. ಸೇತುವೆಯ ಆರಂಭ ಮತ್ತು ಸೇತುವೆಯ ಕೊನೆಯ ಭಾಗದಲ್ಲಿ ವೇಗದ 23 40 4.. ed # 완 ಮೇಲೆ ಸಂಚರಿಸಲು ಮೋಟಾರ್ ಬೈಕ್, ಆಟೋ ರಿಕ್ಷಾ ಮತ್ತು ಟ್ರ್ಯಾಕ್ಟರ್‌ಗಳಿಗೆ ಅನುಮತಿ ಇಲ್ಲ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ .ಸೇತುವೆಯನ್ನು ಬಳಸುವ ಪ್ರಯಾಣಿಕರು ಒಂದು-ಮುಖ ಪ್ರಯಾಣಕ್ಕಾಗಿ ಮಹಾರಾಷ್ಟ್ರ ಸರ್ಕಾರವು ವಿಧಿಸಿರುವ ಪ್ರತಿ ಕಾರಿಗೆ ರೂ 250 ಟೋಲ್ ಪಾವತಿಸಬೇಕಾಗುತ್ತದೆ.