22.9 C
Bengaluru
Friday, July 5, 2024

ಬಿಬಿಎಂಪಿ 8 ವಲಯಗಳಿಗೆ ಪ್ರತ್ಯೇಕ ವಲಯ ಆಯುಕ್ತರ ನಿಯೋಜನೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯಗಳಿಗೆ ಸರ್ಕಾರವು ಸಾರ್ವಜನಿಕ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಯ ಉದ್ದೇಶದಿಂದ ಹಿರಿಯ ಐ.ಎ.ಎಸ್ ಅಧಿಕಾರಿಗಳನ್ನು ಪ್ರತ್ಯೆಕವಾಗಿ ನಿಯೋಜಿಸಿದೆ.ಎಲ್ಲಾ ವಲಯ ಆಯುಕ್ತರುಗಳು ತಮ್ಮ ವಲಯ ವ್ಯಾಪ್ತಿಯ ಸಂಪೂರ್ಣ ಅಧಿಕಾರ ನಿರ್ವಹಣೆ, ಸರ್ಕಾರದ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲಿದ್ದು, ಸಾರ್ವಜನಿಕರು ಸಂಬಂಧಿಸಿದ ವಲಯ ಆಯುಕ್ತರ ಕಛೇರಿಗಳಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಮುಂದುವರಿದು, ಆಯಾ ವಲಯ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ವಲಯ ಆಯುಕ್ತರ ಮಟ್ಟದಲ್ಲಿಯೇ ನಿವಾರಿಸಿಕೊಳ್ಳಬಹುದಾಗಿದೆ. ಇದರಿಂದ ಆಯಾ ವಲಯ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಕಛೇರಿ ಕೆಲಸ ಕಾರ್ಯಗಳನ್ನು ಹಾಗೂ ಸೇವೆಗಳನ್ನು ಒದಗಿಸಲಾಗುವುದು.ಈ ಕೆಳಕಾಣಿಸಿದ ವಲಯ ಆಯುಕ್ತರ ಹೆಸರು, ದೂರವಾಣಿ ಸಂಖ್ಯೆ ಹಾಗೂ ಕಛೇರಿಗಳ ವಿಳಾಸದ ವಿವರವನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲು ಕೋರಿದೆ.

1. ಪೂರ್ವ ವಲಯ:

ಶ್ರೀಮತಿ ಸ್ನೇಹಲ್. ಆರ್, ಭಾ.ಆ.ಸೇ.,
ಮೊ.ಸಂ: 8277335816
ವಿಳಾಸ: ರೆಸಿಡೆನ್ಸಿ ರಸ್ತೆ, ಮೇಯೋಹಾಲ್, ಬೆಂಗಳೂರು – 560001.

2. ಪಶ್ಚಿಮ ವಲಯ:

ಡಾ. ಆರ್. ಎಲ್. ದೀಪಕ್, ಐ.ಆರ್.ಎಸ್.,
ಮೊ.ಸಂ: 94484 50954
ವಿಳಾಸ: ಸಂಪಿಗೆ ರಸ್ತೆ(ಮಂತ್ರಿ ಮಾಲ್ ಎದುರು), ಭಾಷ್ಯಂ ಉದ್ಯಾನ ಪಕ್ಕ, ಮಲ್ಲೇಶ್ವರ, ಬೆಂಗಳೂರು – 560020

3. ದಕ್ಷಿಣ ವಲಯ:

ಶ್ರೀಮತಿ ಆರ್. ವಿನೋಥ್ ಪ್ರಿಯಾ, ಭಾ.ಆ.ಸೇ.,
ಮೊ.ಸಂ: 9482575916
ವಿಳಾಸ: 9ನೇ ಅಡ್ಡ ರಸ್ತೆ, 2ನೇ ಬ್ಲಾಕ್, ಜಯ ನಗರ ಪೂರ್ವ, ಜಯನಗರ, ಬೆಂಗಳೂರು – 560011.

4. ಯಲಹಂಕ ವಲಯ:

ಶ್ರೀ ಕರೀ ಗೌಡ, ಭಾ.ಆ.ಸೇ.,
ಮೊ.ಸಂ: 7760504651
ವಿಳಾಸ: ಅಮೃತಹಳ್ಳಿ ಮುಖ್ಯ ರಸ್ತೆ, ಅಮೃತಹಳ್ಳಿ, ಬ್ಯಾಟರಾಯನಪುರ, ಬೆಂಗಳೂರು – 560092.

5. ಮಹದೇವಪುರ ವಲಯ:

ಶ್ರೀ ಇಬ್ರಾಹಿಂ ಮೈಗೂರು, ಭಾ.ಆ.ಸೇ.,
ಮೊ.ಸಂ: 9986716666
ವಿಳಾಸ: ವೈಟ್‌ಫೀಲ್ಡ್ ಮುಖ್ಯ ರಸ್ತೆ, ಫೀನಿಕ್ಸ್ ಮಾರ್ಕೆಟ್‌ಸಿಟಿ ಎದುರು, ಆರ್.ಹೆಚ್.ಬಿ ಕಾಲೋನಿ, ಮಹದೇವಪುರ, ಬೆಂಗಳೂರು – 560048.

6. ಬೊಮ್ಮನಹಳ್ಳಿ ವಲಯ:

ಶ್ರೀಮತಿ ಎಸ್. ರಮ್ಯಾ , ಭಾ.ಆ.ಸೇ.,
ಮೊ.ಸಂ: 9480683456
ವಿಳಾಸ: ಬಿಡಿಎ ಕಾಂಪ್ಲೆಕ್ಸ್, ಮೊದಲನೇ ಹೆಚ್.ಎಸ್.ಆರ್ ಲೇಔಟ್, ಬೆಂಗಳೂರು – 560102.

7. ರಾಜರಾಜೇಶ್ವರಿ ನಗರ ವಲಯ:

ಶ್ರೀ ವಿಕಾಸ್ ಕಿಶೋರ್ ಸುರೋಳ್ಕರ್, ಭಾ.ಆ.ಸೇ.,
ಮೊ.ಸಂ: 9480502491
ವಿಳಾಸ: ಐಡಿಯಲ್ ಹೋಮ್ಸ್, ಬಿ.ಹೆಚ್.ಇ.ಎಲ್ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು – 560098.

8. ದಾಸರಹಳ್ಳಿ ವಲಯ:

ಶ್ರೀಮತಿ ಪ್ರೀತಿ ಗೆಹ್ಲೋಟ್, ಭಾ.ಆ.ಸೇ.,
ಮೊ.ಸಂ: 94806 83000
ವಿಳಾಸ: ಹೆಸರಘಟ್ಟ ಮುಖ್ಯ ರಸ್ತೆ, ಎಂ.ಇ.ಐ ಬಡಾವಣೆ, ಬಗಲಗುಂಟೆ, ಬೆಂಗಳೂರು – 560073

ನೂತನ ವಲಯ ಆಯುಕ್ತರೊಂದಿಗೆ ಮಹತ್ವದ ಸಭೆ ನಡೆಸಿದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ‌ ಕೆ ಶಿವಕುಮಾರ್ ಅವರು ಸಾರ್ವಜನಿಕರ ದೂರುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸೂಚಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿ ನಾಥ್, ಕಂದಾಯ ವಿಭಾಗದ ವಿಶೇಷ ಆಯುಕ್ತ ಶ್ರೀ ಮುನೀಶ್ ಮೌದ್ಗಿಲ್ ಸಭೆಯಲ್ಲಿ ಉಪಸ್ಥಿತರಿದ್ದರು.

 

Related News

spot_img

Revenue Alerts

spot_img

News

spot_img