22 C
Bengaluru
Sunday, December 22, 2024

ಮನೆ ಕಟ್ಟುತ್ತಿದ್ದೀರಾ? ಮುಂದೆ ಸುಖವಾಗಿರಬೇಕಾದರೆ ನಿರ್ಮಾಣ ಈ ರೀತಿ ಇರಲಿ

ಜೀವನದಲ್ಲಿ ಮನೆ ಕಟ್ಟಬೇಕು ಎಂಬುದೇ ಎಷ್ಟೋ ಜನರ ಕನಸು. ಹೀಗೆ ಕಟ್ಟಿದ ಮನೆ ಸುಖ ಶಾಂತಿಯಿಂದ ಇರಬೇಕು, ಕುಟುಂಬದವರು ನೆಮ್ಮದಿಯಿಂದ ನೆಲೆಸಬೇಕು, ಸಂತಾನಗಳು ಸುಖವಾಗಿರಬೇಕು ಎಂಬುದನ್ನು ಎಲ್ಲರೂ ಬಯಸುತ್ತಾರೆ. ಹೀಗೆ ಮನೆ ನೆಮ್ಮದಿಯಾಗಿ ಇರಬೇಕಾದರೆ ಮನೆ ಕಟ್ಟುವ ಕೆಲಸದ ಪ್ರಾರಂಭಿಕ ಹಂತದಲ್ಲಿಯೇ ಕೆಲವು ನಿಯಮಗಳನ್ನು ಪಾಲಿಸಿದರೆ ಮುಂದೆ ಒದಗಬಹುದಾದ ಅನೇಕ ತೊಂದರೆಗಳನ್ನು ಕಡಿಮೆ ಮಾಡಬಹುದು.

ಮನೆ ಕಟ್ಟುವ ಸಂದರ್ಭದಲ್ಲಿ ನಿವೇಶನದ ಸಿದ್ಧತೆ ಹೇಗಿರಬೇಕು ಮತ್ತು ಮನೆ ಕಟ್ಟಡಕ್ಕೆ ಮಾಡಿಕೊಳ್ಳುವ ಸೌಕರ್ಯಗಳು ಹೇಗಿರಬೇಕು ಎಂಬುದನ್ನು ವಾಸ್ತುಶಾಸ್ತ್ರ ವಿವರಿಸುತ್ತದೆ. ಈ ಕೆಳಗೆ ವಿವರಿಸಿದ ನಿಯಮಗಳನ್ನು ಪಾಲಿಸಿ ಮನೆ ನಿರ್ಮಾಣ ಮಾಡಿದರೆ ಸುಖ ಸಮೃದ್ಧಿ ಸಿಗುತ್ತದೆ.

* ಮನೆ ನಿರ್ಮಿಸುವ ಸ್ಥಳ ಪೂರ್ವ, ಉತ್ತರಗಳಿಗೆ ಚಾಚಿರಬೇಕು.
* ಪೂರ್ವ, ಉತ್ತರ, ಈಶಾನ್ಯ ಬಿಟ್ಟು ಉಳಿದ ಮೂಲೆಗಳಲ್ಲಿ ಬೆಳೆಸಬಾರದು.
* ಮನೆ ಕಟ್ಟುವ ನಿವೇಶನದಲ್ಲಿ ಈಶಾನ್ಯದ ವಿನಃ ಬೇರೆಲ್ಲೂ ಗುಳಿಗಳು, ಹಳ್ಳಗಳು, ದಿಣ್ಣೆ ಇದ್ದರೆ ತೆಗೆದುಬಿಡಬೇಕು.
* ಪೂರ್ವ, ಉತ್ತರ, ಈಶಾನ್ಯಗಳು ಬೆಳೆಸಿ ಆವರಣ ಗೋಡೆ ನಿರ್ಮಿಸಬೇಕು. ಆವರಣವಿಲ್ಲದೆ ನಿರ್ಮಾಣ ಶುಭದಾಯಕವಲ್ಲ.
* ಈಶಾನ್ಯದಲ್ಲಿ ಬಾವಿ ಅಥವಾ ಬೋರ್ ಹಾಕಿಸಿ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು.
* ಬಾವಿ ಇಲ್ಲವೇ ಬೋರ್‌ವೆಲ್ ಹಾಕದೇ ಹೋದರೆ ಕನಿಷ್ಠ ಅಲ್ಲಿ ಆರು ಅಡಿಗಳ ಸಂಪು ತೆಗೆಯಬೇಕು
* ಸ್ಥಳದ ನೈರುತ್ಯ ಭಾಗದಲ್ಲಿ ಮನೆ ಕಟ್ಟಬೇಕು
* ಪೂರ್ವ ಉತ್ತರಗಳಲ್ಲಿ ದಕ್ಷಿಣ, ಪಶ್ಚಿಮಕ್ಕಿಂತಲೂ ಎರಡರಷ್ಟು ಇಲ್ಲವೇ ಹೆಚ್ಚು ಖಾಲಿ ಸ್ಥಳ ಇರುವಂತೆ ನೋಡಿಒಕೊಂಡು ಮನೆ ನಿರ್ಮಾಣ ಮಾಡಬೇಕು.
* ಈಶಾನ್ಯ ಭಾಗದಿಂದ ತಳಪಾಯ ಪ್ರಾರಂಭಿಸಬೇಕು
* ಈಶಾನ್ಯದಿಂದ ಪ್ರಾರಂಭಿಸಿ ತಳಪಾಯ ಪೂರ್ವ, ಉತ್ತರ, ದಕ್ಷಿಣ, ಪಶ್ಚಿಮದ ಕಡೆಯಿಂದ ಕೊನೆಯಲ್ಲಿ ನೈರುತ್ಯದಲ್ಲಿ ಮುಗಿಯಬೇಕು.
* ನಿರ್ಮಾಣ ನೈರುತ್ಯದಿಂದ ಪ್ರಾರಂಭವಾಗಿ ಕಟ್ಟಡದ ದಕ್ಷಿಣ, ಪಶ್ಚಿಮ ಕಡೆಯಿಂದ ಪೂರ್ವ ಉತ್ತರಗಳ ಕಡೆಗೆ ಸಾಗಿ ಈಶಾನ್ಯದಲ್ಲಿ ಕಟ್ಟಡ ಸ್ಥಗಿತಗೊಳ್ಳಬೇಕು.
* ಸಾಮಾನುಗಳನ್ನು ಇಡುವ ಅಟ್ಟಗಳು ದಕ್ಷಿಣ, ಪಶ್ಚಿಮದ ಗೋಡೆಗಳಿಗೆ ಮಾತ್ರ ಇರಬೇಕು.
* ಮನೆಯ ಮೇಲು ಚಾವಣಿ ನೈರುತ್ಯದಿಂದ ಈಶಾನ್ಯದ ಕಡೆಗೆ ವಾಟ ಇರುವಂತೆ ನೋಡಿಕೊಳ್ಳಬೇಕು
* ಮನೆಯ ಮುಂದೆ ಫ್ಲೋರಿಂಗ್ ಸಹ ಕೂಡ ಈಶಾನ್ಯ ದಿಕ್ಕಿಗೆ ವಾಟವಿರಬೇಕು.
* ಮನೆ ಕಟ್ಟಲು ಬಳಸುವ ಮರಳು, ಇಟ್ಟಿಗೆ, ಸಿಮೆಂಟ್, ಕಂಬಿ ಮುಂತಾದವು ಆಗ್ನೇಯ, ವಾಯುವ್ಯ ಭಾಗಗಳಲ್ಲಿ ಇಲ್ಲವೇ ಪಕ್ಕದ ಸ್ಥಳಗಳಲ್ಲಿ ಹಾಕಿಕೊಳ್ಳಬೇಕು.
* ಈಶಾನ್ಯ ಭಾಗದಲ್ಲಿ ಯಾವುದೇ ಕಾರಣಕ್ಕೂ ಹಾಕಬಾರದು.
* ಮನೆಯ ಮಾಳಿಗೆಯ ಎತ್ತರ ನೈರುತ್ಯದಲ್ಲಿ ಎತ್ತರಕ್ಕೂ ಆಗ್ನೇಯ ವಾಯುವ್ಯ ವಾಯು್ಯಕ್ಕಿಂತ ಎತ್ತವೂ ಆಗಿರಬೇಕು. ಈಶಾನ್ಯಕ್ಕಿಂತಲೂ ವಾಯುವ್ಯ ಎತ್ತರವಾಗಿ ಇರಬೇಕು.
* ದಕ್ಷಿಣ, ಪಶ್ಚಿಮ ಆವರಣ ಗೋಡೆಗಳು ಉತ್ತರ ಪೂರ್ವ ಪೂರ್ವ ದಿಕ್ಕಿನ ಆವರಣಕ್ಕಿಂತಲೂ ಎತ್ತರ ಇರಬೇಕು.
* ದಕ್ಷಿಣ ಪಶ್ಚಿಮ ಆವರಣ ಗೋಡೆಗಳು ಒಂದೇ ಎತ್ತರ ಇರಬೇಕು.
* ಪೂರ್ವ, ಉತ್ತರ ಆವರಣ ಗೋಡೆಗಳು ಒಂದೇ ಎತ್ತರ ಇರಬೇಕು.
* ಪೂರ್ವ, ಉತ್ತರ ಆವರಣ ಗೋಡೆಗಳು ಆರು ಅಡಿಗಳನ್ನು ಮೀರಿರಬಾರದು.
* ದಕ್ಷಿಣ, ಪಶ್ಚಿಮಕ್ಕೆ ಆವರಣ ಗೋಡೆಗಳು ಇಲ್ಲವೇ ಪೂರ್ವ, ಉತ್ತರದ ಆವರಣ ಗೋಡೆಗಳು ಕಟ್ಟಬಾರದು.

Related News

spot_img

Revenue Alerts

spot_img

News

spot_img