#Appointment #three #new judges #supremecourt
ನವದೆಹಲಿ;ಸುಪ್ರೀಂಗೆ ಮೂವರು ಹೊಸ ಜಡ್ಜ್ ನೇಮಕ ಸುಪ್ರೀಂ ಕೋರ್ಟ್‌ಗೆ(Supremecourt) ಮೂವರು ಹೊಸ ನ್ಯಾಯಮೂರ್ತಿಗಳು(Justices) ನೇಮಕವಾಗಲಿದ್ದಾರೆ ಎಂದು ಕೋರ್ಟ್(Supremecourt) ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು(Recomndation) ಮಾಡಿದೆ.ದೆಹಲಿ, ರಾಜಸ್ಥಾನ ಮತ್ತು ಗುವಾಹಟಿ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ, ಅಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಸಂದೀಪ್ ಮೆಹ್ತಾ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸ್ಸು ಮಾಡಲಾಗಿದೆ.ನ್ಯಾ. ಶರ್ಮಾ ಅವರು ಮಧ್ಯಪ್ರದೇಶವರಾಗಿದ್ದು, ನ್ಯಾಯಮೂರ್ತಿಗಳಾದ ಮಸಿಹ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹಾಗೂ ನ್ಯಾ. ಮೆಹ್ತಾ ಅವರು ರಾಜಸ್ಥಾನ ಹೈಕೋರ್ಟ್‌ನವರಾಗಿದ್ದಾರೆ. 34 ನ್ಯಾಯಮೂರ್ತಿಗಳ ಹುದ್ದೆ ಹೊಂದಿರುವ ಸರ್ವೋಚ್ಚ ನ್ಯಾಯಾಲಯದಲ್ಲಿ ಸದ್ಯ 31 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಕ್ರಿಸ್ಮಸ್ ವೇಳೆಗೆ ನಿವೃತ್ತರಾಗಲಿದ್ದಾರೆ.ಇವರ ನೇಮಕಕ್ಕೆ ಕೇಂದ್ರ ಒಪ್ಪಿಗೆ ನೀಡಿದರೆ ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಲಿದೆ.