26.7 C
Bengaluru
Sunday, December 22, 2024

ಆಶ್ರಯ ಯೋಜನೆ ಅಡಿಯಲ್ಲಿ ಅರ್ಹ ನಿವೇಶನ ರಹಿತರಿಂದ ಅರ್ಜಿ ಆಹ್ವಾನ

ಬೆಂಗಳೂರು, ಜೂ. 27 : ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪ ಪುರಸಭೆಯಲ್ಲಿ ಈಗ ನಿವೇಶನವಿಲ್ಲದವರಿಗೆ ಅರ್ಜಿ ಆಹ್ವಾನಿಸಿದೆ. ವಸತಿ ಯೋಜನೆಯಡಿಯಲ್ಲಿ ಅರ್ಹರಿಗೆ ನಿವೇಶನ ನೀಡಲಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ವಿಕಲಚೇತನರು, ಮಾಜಿ ಸೈನಿಕರು ಸೇರಿದಂತೆ ಇತರರಿಗೆ ಗೋಪಿಶೆಟ್ಟಿಕೊಪ್ಪ ಪುರಸಭೆ ನಿವೇಶನ ನೀಡಲು ಅರ್ಜಿಯನ್ನು ಆಹ್ವಾನಿಸಿದೆ. ಇದು ಮನೆ ಇಲ್ಲದವರಿಗೆ ಮಾತ್ರವೇ ನಿವೇಶನವನ್ನು ವಿತರಣೆ ಮಾಡಲಿದೆ. ನಿವೇಶನ ರಹಿತರು ಅರ್ಜಿಯನ್ನು ತುಂಬಿ ಸಲ್ಲಿಸಿದರೆ, ಮನೆ ಪಡೆಯುವ ಭಾಗ್ಯ ನಿಮ್ಮದಾಗಲಿದೆ.

ಈ ವಸತಿ ಯೋಜನೆಗಾಗಿ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ಸ್ಥಳ ಮೀಸಲಿಟ್ಟಿದೆ. 19.23 ಎಕರೆ ವಿಸ್ತೀರ್ಣದ ಸ್ಥಳವನ್ನು ವಿತರಣೆ ಮಾಡಲಿದೆ. ಆಶ್ರಯ ವಸತಿ ವಿನ್ಯಾಸದಲ್ಲಿ ರಚನೆಯಾಗುವ ನಿವೇಶನಗಳಿಗೆ ಅನುಗುಣವಾಗಿ ಹಂಚಿಕೆ ಮಾಡಲಿದೆ. ಪರಿಶಿಷ್ಟ ಪಂಗಡದವರಿಗೆ ಶೇ.17.15, ಪರಿಶಿಷ್ಟ ಪಂಗಡ ಶೇ.6.95 ರಷ್ಟು ನಿವೇಶನ ಹಂಚಿಕೆ ಮಾಡಲಿದೆ. ಇಷ್ಟೇ ಅಲ್ಲದೇ, ಹಿಂದುಳಿದ ವರ್ಗಕ್ಕೆ ಶೇ.7.25, ಅಲ್ಪಸಂಖ್ಯಾತರಿಗೆ ಶೇ.9 ರಷ್ಟು ಹಂಕೆ ಮಾಡಲಿದೆ. ಇನ್ನು ವಿಕಲಚೇತನರಿಗೆ ಶೇ.5, ಮಾಜಿ ಸೈನಿಕರಿಗೆ ಶೇ.1 ರಂತೆ ನಿವೇಶನ ವಿತರಣೆ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 07 ಆಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ಎಂದು ತಿಳಿಯೋಣ ಬನ್ನಿ. ಅರ್ಜಿದಾರರು ಪುರಸಭೆ ಹಾಗೂ ಇತರೇ ಯಾವುದೇ ಪ್ರದೇಶದಲ್ಲಿ ಕುಟುಂಬದವರ ಬಳಿ ಆಗಲೀ, ಅರ್ಜಿದಾರರ ಹೆಸರಿನಲ್ಲಾಗಲೀ ಯಾವುದೇ ಆಸ್ತಿ ಇರುವಂತಿಲ್ಲ. ಈ ಬಗ್ಗೆ ಅರ್ಜಿಗೆ ನೋಟರಿ ಅಫಿಡೇವಿಟ್ ಲಗತ್ತಿಸಬೇಕು. ಗೋಪಿಶೆಟ್ಟಿಕೊಪ್ಪ ಪುರಸಭೆಯಲ್ಲಿ ಅರ್ಜಿಗಳು ಲಭ್ಯವಿದೆ. ಇದರೊಂದಿಗೆ ಆನ್ ಲೈನ್ ನಲ್ಲೂ ಅರ್ಜಿ ತುಂಬಬಹುದು. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ. ನಿಮ್ಮ ವಿವರಗಳನ್ನು ತುಂಬಿ, ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರವನ್ನು ಇದರಲ್ಲಿ ಸೇರಿಸಬೇಕು.

ಇನ್ನು ಮಹಿಳೆ, ವಿಧವೆ, ವಿಚ್ಛೇದಿತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಿಶೇಷವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಕುಟುಂಬದ ಪಡಿತರ ಚೀಟಿ ಹಾಗೂ ಎಲ್ಲಾ ಸದಸ್ಯರ ನಕಲು ಪ್ರತಿ, ಅರ್ಜಿದಾರರ ಅಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ ಅನ್ನು ಸೇರಿಸಬೇಕು. ಇದರೊಂದಿಗೆ ವಿಕಲಚೇತನರಾಗಿದ್ದವರು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರವನ್ನು ಹಾಗೂ ಮಾಜಿ ಸೈನಿಕರು, ಹಿರಿಯ ನಾಗರಿಕರಾಗಿದ್ದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಫಲಾನುಭವಿಯು ಸಾಮಾನ್ಯ, ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದರೆ, ಆರ್ಥಿಕವಾಗಿ ಹಿಂದುಳಿದವರಾಗಿದ್ದರೆ, ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಹೊಂದಿದ ಪ್ರಮಾಣ ಪತ್ರ ನೀಡಬೇಕು. ಆನ್ ಲೈನ್ ನಲ್ಲಿ ಅರ್ಜಿಯನ್ನು ಪಡೆಯಬಹುದು. ಅರ್ಜಿ http://www.shivamoggacitycorp.org ವೆಬ್ ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕುರುಗೋಡು ಪುರಸಭೆ ಕಾರ್ಯಾಲಯವನ್ನು ಸಂಪರ್ಕಿಸಬಹುದು. ಇಲ್ಲವೇ ದೂರವಾಣಿ ಸಂಖ್ಯೆ: 08182-220799 ಗೆ ಕರೆ ಮಾಡಬಹುದು.

Related News

spot_img

Revenue Alerts

spot_img

News

spot_img