20.5 C
Bengaluru
Tuesday, July 9, 2024

ರಾಜ್ಯ ಕ್ಕೆ ಬರ ಪರಿಹಾರ ಶೀಘ್ರವೇ ಮಂಜೂರು ಮಾಡಲು ಕೇಂದ್ರಕ್ಕೆ ಮನವಿ: ಸಿಎಂ ಸಿದ್ದರಾಮಯ್ಯ

ಹೊಸದಿಲ್ಲಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಭವನದ ಪುನರ್‌ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ್ದು, ಮುಂದಿನ ವರ್ಷ ಜೂನ್‌ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬರ ಪರಿಹಾರಕ್ಕೆ ಅಮಿತ್ ಶಾ ಬೇಟಿ ಮಾಡಿದ ಸಿಎಂ ಸಿದ್ದರಾಯ್ಯ …

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯ ಕ್ಕೆ 18,177.44 ಕೋಟಿ ರೂಪಾಯಿಗಳ ಬರ ಪರಿಹಾರವನ್ನು ಶೀ ಘ್ರವಾಗಿ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ. ಸಿ.ಎಂ ಸಿದ್ದರಾಮಯ್ಯ ಅವರು ಅಮಿತ್ ಶಾ ಬಳಿ ಕರ್ನಾಟಕಕ್ಕೆ ಬರ ಪರಿಹಾರವನ್ನು ಅನುಮೋದಿಸಲು ಉನ್ನ ತ ಮಟ್ಟ ದ ಸಮಿತಿಯ ಕೇಂದ್ರ ಸಭೆಯನ್ನು ಶೀಘ್ರವಾಗಿ ಕರೆಯಬೇಕು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಣ್ಣ ಮತ್ತು ಅತಿ ಸಣ್ಣ ರೈತರ ಹೆಚ್ಚು ಬೆಳೆ ನಾಶ..!

ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕರ್ನಾಟಕದ ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳಲ್ಲಿ ಬರಗಾಲದ ಕಾರಣ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚು ಬೆಳೆ ನಾಶವಾಗಿದೆ. 48.19 ಲಕ್ಷ ಹೆಕ್ಟೇ ರ್ ಕೃಷಿ ಭೂಮಿಯಲ್ಲಿ ಬಿತ್ತಿದ ಬೆಳೆಯೂ ಸಹ ಹಾನಿಯಾಗಿದೆ. ೩ ತಿಂಗಳ ಹಿಂದೆಯೇ ರಾಜ್ಯ ಸರ್ಕಾರ 18,177.44 ಕೋಟಿ ಬರ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ರಾಜ್ಯಕ್ಕೆ ಬರ ಪರಿಹಾರ ಮಂಜೂರು ಮಾಡುವಾಗ 2015-16ರ ಅಂಕಿಅಂಶಗಳ ಬದಲಿಗೆ ಇತ್ತೀ ಚಿನ ರೈತರ ಜನಸಂಖ್ಯೆಯ ಅಂಕಿಅಂಶಗಳನ್ನು ಪರಿಗಣಿಸುವಂತೆ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಮೂಲಕ ಕೇಂದ್ರ ಕ್ಕೆ ಮನವಿ ಮಾಡಿದ್ದಾರೆ.

ಯೋಜನೆಯ ವೆಚ್ಚ ಈಗ 120 ಕೋಟಿ ರೂ. ಗೆ ಏರಿಕೆ..!

ಪುನರ್ನಿರ್ಮಾಣ ಕಾರ್ಯವು 2020 ರಲ್ಲಿ ಪ್ರಾರಂಭವಾಯಿತು ಮತ್ತು ಅಂದಾಜು 80-85 ಕೋಟಿ ರೂ. ಯೋಜನೆಯು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು ಆದರೆ COVID- 19 (ಕೋವಿಡ್) ಸಾಂಕ್ರಾಮಿಕ ಮತ್ತು ದೆಹಲಿ ಸರ್ಕಾರದ ಮಾಲಿನ್ಯ ನಿರ್ಬಂಧಗಳಿಂದಾಗಿ ಕೆಲಸ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಯೋಜನೆಯ ವೆಚ್ಚ ಈಗ 120 ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ತಿಳಿಸಿವೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img