28.2 C
Bengaluru
Wednesday, July 3, 2024

ಅಪಾರ್ಟ್‌ಮೆಂಟ್ ನಿರ್ವಹಣೆ: ಸಹಕಾರ ಸಂಘ ಅಥವಾ ಕಂಪೆನಿ ಸ್ಥಾನಪನೆಗೆ ನಿಯಮಗಳೇನು?

ನಗರೀಕರಣದ ಪ್ರಭಾವ ಆರಂಭವಾಗಿ ಬಹಳ ದಿನಗಳೇ ಆಗಿವೆ. ಒಂದು ದೊಡ್ಡ ನಗರವಿದ್ದರೆ ಆ ಜಿಲ್ಲೆಯ, ರಾಜ್ಯದ ಸುತ್ತಮುತ್ತಲಿನ ಜನರು ನಗರಕ್ಕೆ ಬಂದು ನೆಲೆಗೊಳ್ಳುತ್ತಾರೆ. ಇದಕ್ಕೆ ಉದ್ಯೋಗ, ಶಿಕ್ಷಣ, ಆರೋಗ್ಯ ಹೀಗೆ ನಾನಾ ಕಾರಣಗಳು ಇರಬಹುದು. ಆದರೆ, ನಗರಗಳು ಮಾತ್ರ ಬರುವ ಜನರನ್ನು ಪ್ರತಿನಿತ್ಯ ಸೆಳೆದುಕೊಳ್ಳುತ್ತಲೇ ಇರುತ್ತದೆ. ಹೀಗೆ ನಗರಕ್ಕೆ ಬಂದವರು ಎಲ್ಲಾದರೂ ಒಂದು ಕಡೆ ನೆಲೆಗೊಳ್ಳಲೇಬೇಕು. ಕೆಲವರಿಗೆ ಸಣ್ಣ ಸಣ್ಣ ಮನೆಗಳಾದರೆ, ಕೆಲವರಿಗೆ ಬೃಹತ್ ಬಂಗಲೆಗಳು. ಅವರವರ ಕಾಸಿಗೆ ತಕ್ಕಂತೆ ಸೂರೊಂದು ಇದ್ದೇ ಇರುತ್ತದೆ. ಅದೇ ರೀತಿ ನಗರೀಕರಣದ ಪ್ರಭಾವ ಹೆಚ್ಚಾದಂತೆ ಕಡಿಮೆ ಸಾಂದ್ರತೆಯಲ್ಲಿಯೇ ಹೆಚ್ಚಿನ ಜನರನ್ನು ವಾಸಿಸುವಂತೆ ಮಾಡಿರುವುದು ಅಪಾರ್ಟ್‌ಮೆಂಟ್‌ಗಳು.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತತ್ತಲೇ ಇರುತ್ತವೆ. ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ, ಮಾರಾಟ, ಬಾಡಿಗೆ ಆದಾಯ ಗಣನೀಯವಾದದ್ದು. ಸುರಕ್ಷತೆ, ಭದ್ರತೆ ಮತ್ತು ಸೌಕರ್ಯಗಳ ದೃಷ್ಟಿಯಿಂದ ಬಹುತೇಕ ಜನರು ತಮ್ಮ ವಾಸಕ್ಕಾಗಿ ಅಪಾರ್ಟ್‌ಮೆಂಟ್‌ಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ಹೀಗೆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ತಮ್ಮ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಪಡೆಯುವುದಕ್ಕಾಗಿ ಸಂಘಗಳನ್ನು ಮಾಡಿಕೊಳ್ಳುತ್ತಾರೆ. ಅಂತಹ ಸಂಘಗಳು ಯಾವ ರೀತಿ ನೋಂದಣಿ ಮಾಡಿಸಬೇಕು, ಅದಕ್ಕೆ ಇರುವ ಕಾನೂನು ಮಾನ್ಯತೆ ಏನು ಎಂದು ಸರ್ಕಾರ ಇಲ್ಲಿ ವಿವರಿಸಿದೆ.

ನೋಂದಣಿ ಮಾಡಿಸವುದು ಹೇಗೆ?:
ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‌ಷಿಪ್ ಆಕ್ಟ್ 1972ರಡಿ ಡೀಡ್ ಆಫ್ ಡಿಕ್ಲರೇಷನ್‌ನೊಂದಿಗೆ ಉಪವಿಧಿಯತ್ತನ್ನು ಲಗತ್ತಿಸಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಆಕ್ಟ್ 1908ರ ಪ್ರಕಾರ ನೋಂದಾಯಿಸಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲು ಅವಕಾಶವಿದೆ.

ಈ ರೀತಿ ಕೇವಲ ಡೀಡ್ ಆಫ್ ಡಿಕ್ಲರೇಷನ್ ನೋಂದಣಿಯಾದಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‌ಷಿಪ್ ಆಕ್ಟ್ 1972ರಡಿ ಅಸೋಸಿಯೇಷನ್ ನೋಂದಣಿ ಆಗಿರುವ ಬಗ್ಗೆ ಗೊಂದಲ ಇರುವುದರಿಂದ ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಸ್ಪಷ್ಟೀಕರಣ ನೀಡುವಂತೆ ಕೋರಲಾಗಿತ್ತು. ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‌ಷಿಪ್ ಆಕ್ಟ್ 1972ರಡಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಡೀಡ್ ಆಫ್ ಡಿಕ್ಲರೇಷನ್ ಹಾಗೂ ಉಪವಿಧಿಗಳ ಕಾನೂನು ಮಾನ್ಯತೆ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುಂತೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕಾಮನ್ ಏರಿಯಾ ಮತ್ತು ಕಾಮನ್ ಫೆಸಿಲಿಟಿಗಳ ನಿರ್ವಹಣೆಗಾಗಿ ಕೋ-ಆಪರೇಟಿವ್ ಸೊಸೈಟಿ ಅಥವಾ ಅಸೋಸಿಯೇಷನ್ ನೋಂದಾಯಿಸಬೇಕಾಗುತ್ತದೆ. ಆದರೆ, ಸೊಸೈಟಿ ಅಥವಾ ಅಸೋಸಿಯೇಷನ್ ಯಾವ ಕಾಯ್ದೆಯಡಿ ನೋಂದಾಯಿಸಬೇಕು ಎಂದು ರೆರಾ ಕಾಯ್ದೆಯಲ್ಲಿ ತಿಳಿಸಿಲ್ಲ. ರೆರಾ ನಿಯಮ 2017ರ ನಿಯಮ 2(1)(ಸಿ) ರಲ್ಲಿ ಕೋ-ಆಪರೇಟಿವ್ ಸೊಸೈಟಿಯ ಬಗ್ಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಎಂದು ವ್ಯಾಖ್ಯಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕಾಮನ್ ಏರಿಯಾ ಮತ್ತು ಕಾಮನ್ ಫೆಸಿಲಿಟಿಗಳ ನಿರ್ವಹಣೆಗೆ ಕೋ-ಆಪರೇಟಿವ್ ಸೊಸೈಟಿಗಳನ್ನು ನಿರ್ಮಾಣ ಮಾಡಬೇಕಿರುತ್ತದೆ.

Karnataka ownership Flats (Regulation of the promotion of construction, sale and transfer) act 1972 ಅನುಸರಿಸಬೇಕಾಗುತ್ತದೆ. ಈ ಅವಕಾಶದಂತೆ ಅಪಾರ್ಟ್‌ಮೆಂಟ್‌ಗಳಲ್ಲಿ ಕಾಮನ್ ಏರಿಯಾದ ನಿರ್ವಹಣೆಗಾಗಿ ಕೋ-ಆಪರೇಟಿವ್ ಸೊಸೈಟಿಯನ್ನು ನೋಂದಣಿ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಸಹಕಾರ ಸಂಘಗಳನ್ನು ನೋಂದಣಿ ಮಾಡಲು ಸಂಘವೇ ಉಪವಿಧಿಗಳನ್ನರಚಿಸಿ ಕಾರ್ಯವ್ಯಾಪ್ತಿ ನಿಬಂಧಕರಿಗೆ ಸಲ್ಲಿಸಿದಲ್ಲಿ ಕಾರ್ಯವ್ಯಾಪ್ತಿ ನಿಬಂಧಕರು ಕಾಯ್ದೆ ಮತ್ತು ನಿಯಮಗಳ ಅನುಸಾರ ಪರಿಶೀಲಿಸಿ ನೋಂದಾಯಿಸಲು ಅವಕಾಶ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Related News

spot_img

Revenue Alerts

spot_img

News

spot_img