23.9 C
Bengaluru
Sunday, December 22, 2024

ಕರ್ನಾಟಕಕ್ಕೆ ಮತ್ತೊಮ್ಮೆ ಬಿಗ್ ಶಾಕ್;ತಮಿಳುನಾಡಿಗೆ ಪ್ರತಿನಿತ್ಯ 2600 ಕ್ಯೂಸೆಕ್ ನೀರು ಹರಿಸುವಂತೆ CWRC’ ಸೂಚನೆ

ನವದೆಹಲಿ : ಇಂದು ದೆಹಲಿಯಲ್ಲಿ ನಡೆದ ಸಭೆ ಬಳಿಕ ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಕರ್ನಾಟಕಕ್ಕೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ. ಈ ಮೂಲಕ ರಾಜ್ಯಕ್ಕೆ CWRC ಮತ್ತೊಮ್ಮೆ ಶಾಕ್ ನೀಡಿದೆ. ಈ ತೀರ್ಪು ರಾಜ್ಯದ ರೈತರನ್ನು ಭಾರೀ ಸಂಕಷ್ಟಕ್ಕೆ ದೂಡಿದೆ. ಕರ್ನಾಟಕದಿಂದ ಕಾವೇರಿ ನೀರಾವರಿ ನಿಗಮದ M.D.ಮಹೇಶ್ ಪಾಲ್ಗೊಂಡಿದ್ದರು.CWRC ಸಭೆಯಲ್ಲಿ ರಾಜ್ಯದಿಂದ ಎಸಿಎಸ್ ರಾಕೇಶ್ ಸಿಂಗ್ ಭಾಗಿ ಆಗಿದ್ದರು.ಅ.31 ರವರೆಗೆ ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ CWMA ಸೂಚನೆ ನೀಡಿದ್ದು, CWRA ಆದೇಶ ಎತ್ತಿಹಿಡಿದಿತ್ತು. ಇದೀಗ ಮತ್ತೆ ಮುಂದಿನ 15 ದಿನ ತಮಿಳುನಾಡಿಗೆ ಮತ್ತೆ 2600 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ CWRC ಕರ್ನಾಟಕಕ್ಕೆ ಸೂಚನೆ ನೀಡಿದೆ.ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಕರ್ನಾಟಕದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಈಗಲೂ ಕಾವೇರಿ ಜಲಾನಯನ ಪ್ರದೇಶಗಳಾದ ಮೈಸೂರು, ಮಂಡ್ಯ ಮತ್ತಿತರ ಕಡೆಗಳಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ, ಧರಣಿ ನಡೆಸುತ್ತಿವೆ

Related News

spot_img

Revenue Alerts

spot_img

News

spot_img