ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ. ತೆಲಂಗಾಣ, ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಿಜೋರಾಂ ಈ ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.
ಇಲ್ಲಿದೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರಮುಖ ದಿನಾಂಕಗಳು
1.ರಾಜಸ್ಥಾನ ವಿಧಾನಸಭಾ ಚುನಾವಣಾ ವೇಳಾಪಟ್ಟಿ
ಈ ಅಕ್ಟೋಬರ್ 30: ಅಧಿಸೂಚನೆ ಬಿಡುಗಡೆ * ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 6
ನಾಮಪತ್ರಗಳ ಪರಿಶೀಲನೆ: ನವೆಂಬರ್ 7
ನಾಮಪತ್ರಗಳ ಹಿಂಪಡೆಯುವಿಕೆ: ನವೆಂಬರ್ 9
ಚುನಾವಣಾ ದಿನಾಂಕ: ನವೆಂಬರ್ 23
ಫಲಿತಾಂಶ ದಿನಾಂಕ: ಡಿಸೆಂಬರ್ 3,
2. ಮಿಜೋರಾಂ: ಚುನಾವಣೆ ವೇಳಾಪಟ್ಟಿ
ಸ್ಥಾನಗಳ ಸಂಖ್ಯೆ – 40
ಹಂತಗಳ ಸಂಖ್ಯೆ – 1
ಅಧಿಸೂಚನೆ ಹೊರಡಿಸುವ ದಿನಾಂಕ – ಅಕ್ಟೋಬರ್ 13
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 20
ನಾಮಪತ್ರಗಳ ಪರಿಶೀಲನೆಗೆ ದಿನಾಂಕ – ಅಕ್ಟೋಬರ್ 21 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ – ಅಕ್ಟೋಬರ್23
ಮತದಾನದ ದಿನಾಂಕ – ನವೆಂಬರ್ 7
ಫಲಿತಾಂಶದ ದಿನಾಂಕ – ಡಿಸೆಂಬರ್ 3
3.ಮಧ್ಯಪ್ರದೇಶ: ಚುನಾವಣಾ ವೇಳಾಪಟ್ಟಿ
•ಸ್ಥಾನಗಳ ಸಂಖ್ಯೆ – 230
• ಹಂತಗಳ ಸಂಖ್ಯೆ – 1
• ಅಧಿಸೂಚನೆ ಹೊರಡಿಸುವ ದಿನಾಂಕ – ಅಕ್ಟೋಬರ್ 21 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 30
• ನಾಮಪತ್ರಗಳ ಪರಿಶೀಲನೆಗೆ ದಿನಾಂಕ ಅಕ್ಟೋಬರ್ 31
• ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ – ನವೆಂಬರ್ 2
• ಮತದಾನದ ದಿನಾಂಕ – ನವೆಂಬರ್ 17
• ಫಲಿತಾಂಶದ ದಿನಾಂಕ – ಡಿಸೆಂಬರ್ 3
4.ತೆಲಂಗಾಣ ಚುನಾವಣಾ ವೇಳಾಪಟ್ಟಿ
•ಅಧಿಸೂಚನೆ ಬಿಡುಗಡೆ: ನವೆಂಬರ್ 3
• ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 10
• ನಾಮಪತ್ರಗಳ ಪರಿಶೀಲನೆಯ ದಿನಾಂಕ ನವೆಂಬರ್ 13
• ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ನವೆಂಬರ್15
• ಮತದಾನ ದಿನಾಂಕ: ನವೆಂಬರ್ 30
•ಫಲಿತಾಂಶ ದಿನಾಂಕ: ಡಿಸೆಂಬರ್ 3
4.ಛತ್ತೀಸ್‌ಗಢದ ಚುನಾವಣಾ ವೇಳಾಪಟ್ಟಿ
ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮೊದಲ ಹಂತ: ಅ.13 ರಂದು ಅಧಿಸೂಚನೆ,
ಅ.20ಕ್ಕೆ ನಾಮಪತ್ರ ಸಲ್ಲಿಕೆ,
ಅ.21 ರಂದು ನಾಮಪತ್ರ ಪರಿಶೀಲನೆ,
ಅ.23 ರಂದು ಹಿಂಪಡೆಯುವಿಕೆ, ನ.7 ರಂದು ಮತದಾನ, ಡಿ.3 ರಂದು ಫಲಿತಾಂಶ.
ಎರಡನೇ ಹಂತ: ಅ.21 ರಂದು ಅಧಿಸೂಚನೆ,
ಅ.30 ರಂದು ನಾಮಪತ್ರ ಸಲ್ಲಿಕೆ,
ಅ.31 ರಂದು ನಾಮಪತ್ರ ಪರಿಶೀಲನೆ,
ನ.2 ರಂದು ಹಿಂಪಡೆಯುವಿಕೆ, ನ.17 ರಂದು ಮತದಾನ,
ಡಿ.3 ರಂದು ಫಲಿತಾಂಶ.