ಬೆಂಗಳೂರು;BPL ಕಾರ್ಡ್ ದಾರರಿಗೆ ತಿದ್ದುಪಡಿ ನೀಡಿದ ಬಳಿಕ ಇದೀಗ ರಾಜ್ಯಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಸಿದ್ಧತೆ ನಡೆಸಿದೆ. ವಯೋವೃದ್ಧರು ತಮ್ಮ ವ್ಯಾಪ್ತಿಯಲ್ಲಿ ಪಡಿತರ ಪಡೆಯಲು ಹರಸಾಹಸ ಪಡುತ್ತಿರುವದನ್ನು ಗಮನಿಸಿ 90 ವರ್ಷ ದಾಟಿದವರ ಮನೆ ಬಾಗಿಲಿಗೆ ಆಹಾರ ಧಾನ್ಯ(Food grain) ಪೂರೈಸಲು ಈ ಯೋಜನೆ ಹಾಕಿಕೊಂಡಿದೆ. ಇವರಿಗಾಗಿಯೇ ‘ಅನ್ನ ಸುವಿಧ ಆಪ್ ಅಭಿವೃದ್ಧಿಪಡಿಸಿದ್ದು,ನವೆಂಬರ್‌ನಲ್ಲಿ ಅಧಿಕೃತವಾಗಿ ಈ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಇದೆ.ರಾಜ್ಯದಲ್ಲಿ ಈ ರೀತಿ ನ್ಯಾಯಬೆಲೆ ಅಂಗಡಿಗೆ ಹೋಗಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿರುವ 7 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಪ್ರಯೋಗಾತ್ಮಕವಾಗಿ 700 ಫಲಾನುಭವಿಗಳಿಗೆ(beneficiaries) ಮನೆ ಬಾಗಿಲಿಗೆ ಪಡಿತರ(Ration) ಪೂರೈಕೆ ಮಾಡಲಾಗಿದೆ. ಯೋಜನೆಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ನವೆಂಬರ್ ನಿಂದ ಅಧಿಕೃತವಾಗಿ ಯೋಜನೆ ಜಾರಿಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.ಅನ್ನಸುವಿಧ ಆ್ಯಪ್‌ನಲ್ಲಿ(Suvidhaapp) ಫಲಾನುಭವಿ ಕೊಟ್ಟಿರುವ ಮನೆಯ ವಿಳಾಸಕ್ಕೆ ಜಿಪಿಎಸ್(GPS) ಮೂಲಕ ಮಾರ್ಗ ಸೂಚಿಸಲಾಗುತ್ತದೆ. ಹೀಗಾಗಿ ಸುಲಭವಾಗಿ ಪಡಿತರ ವಿತರಣೆ ಅನುಕೂಲವಾಗಲಿದೆ.
ರೇಷನ್ ವಿತರಣೆ ನಂತರ ಫಲಾನುಭವಿಯ ರೇಷನ್ ಕಾರ್ಡ್ ಸಂಖ್ಯೆ, ಯಾವಾಗ ರೇಷನ್ ವಿತರಣೆಯಾಗಿದೆ, ಎಷ್ಟು ಗಂಟೆ, ಯಾವಾಗ ಯಾರು ಪರಿಶೀಲಿಸಿದ್ದಾರೆ ಮುಂತಾದ ಮಾಹಿತಿಯು ಇಲಾಖೆಗೆ ಲಭ್ಯವಾಗಲಿದೆ.ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 90 ವರ್ಷ ಮೇಲ್ಪಟ್ಟ ಮತ್ತು ಕಾರ್ಡ್‌ನಲ್ಲಿ ಒಬ್ಬರೇ ಸದಸ್ಯರಿದ್ದು ಅಂಗಡಿಗೆ ಬಂದು ಪಡಿತರ ಪಡೆಯಲು ಸಾಧ್ಯವಿಲ್ಲದವರು ಇದ್ದಾರೆ ಎಂಬ ವಿವರ ‘ಅನ್ನ ಸುವಿಧ’ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಅಂತಹವರಿಗೆ ನ್ಯಾಯಬೆಲೆ ಅಂಗಡಿ(Fair Price Shop) ಮಾಲಿಕರು ಬಿಪಿಎಲ್(BPL) ಫಲಾನುಭವಿಯಾದ ಆಸಹಾಯಕರಿಗೆ ಇಲ್ಲವೇ ವೃದ್ಧರಿಗೆ ಪಡಿತರವನ್ನು ಪ್ಯಾಕ್ ಮಾಡಿ ಕೊಡಬೇಕು. ಅಲ್ಲದೇ ತಾವು ಪಡಿತರ ಹಂಚಿಕೆ ಮಾಡಿರುವ ಬಗ್ಗೆ ಫೋಟೋ ತೆಗೆದು ಮಾಹಿತಿ ಸಮೇತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು.