ಬೆಂಗಳೂರು, ಜೂ. 28 :ರಾಜ್ಜ್ಯದಲ್ಲಿಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆಯಿಂದಾಗಿ ಅಕ್ಕಿ ಬದಲು ಹಣ ಪಾವತಿ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂದು ನಿರ್ಧರಿಸಲಾಗಿದೆ.5 ಕೆಜಿ ಅಕ್ಕಿ ಬದಲು ಹಣ ನೀಡಲು ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜುಲೈ 1 ರಿಂದಲೇ ಪಡಿತರ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರಂತೆ ಪಾವತಿಸಲು ನಿರ್ಧರಿಸಿದೆ.
ಅನ್ನಭಾಗ್ಯ ಬಿಡುಗಡೆಗೆ ದಿನಾಂಕ (ಜುಲೈ 1) ಬಂದಿರುವುದರಿಂದ ಮತ್ತು ನಾವು ಭರವಸೆ ನೀಡಿದ್ದರಿಂದ, ಅಕ್ಕಿ ಸರಬರಾಜು ಮಾಡುವವರೆಗೆ ಐದು ಕೆಜಿ ಅಕ್ಕಿಯ ಜೊತೆಗೆ, ಐದು ಕೆಜಿ ಅಕ್ಕಿಗೆ ಹಣವನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಪಡಿತರ ಚೀಟಿದಾರರಿಗೆ ಜುಲೈ.1ರಿಂದಲೇ ಐದು ಕೆಜಿ ಅಕ್ಕಿ ಹಾಗೂ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯಂತೆ 34 ರೂ ದರದಲ್ಲಿ ಹಣವನ್ನು ಖಾತೆಗೆ ನೇರವಾಗಿ ಹಾಕಲಾಗುತ್ತದೆ ಎಂದು ತಿಳಿಸಿದರು,ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ನೀಡುತ್ತೇವೆ ಎಂದು ಹೇಳಿದರು.ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೂ ಹಣ ನೀಡುತ್ತೇವೆ.ಪ್ರತಿ ಕುಟುಂಬದ ಸದಸ್ಯರಿಗೆ ತಲಾ 170 ರೂ ನಂತೆ ಹಣವನ್ನು ಐದು ಕೆಜಿ ಅಕ್ಕಿ ಬದಲಾಗಿ ನೀಡಲಾಗುತ್ತದೆ.