#An order # Commissioner # Official #Registration # Stamps Department #regarding # validity # Aadhaar.
ಬೆಂಗಳೂರು;ಕರ್ನಾಟಕ ಹೈಕೋರ್ಟ್(Highcourt) ನೋಂದಣಿಗೆ ಬರುವ ವ್ಯಕ್ತಿಗಳ ಆಧಾರ್(Aadhar) ಅನ್ನು ಪರಿಶೀಲಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ(Department of Stamps) ಆಯುಕ್ತರಿಗೆ ನಿರ್ದೇಶನ ನೀಡಿದೆ.ಆಧಾರ್ ಕಾರ್ಡ್‌ನ ರೂಪದಲ್ಲಿ ಗುರುತನ್ನು ಒದಗಿಸಿದಾಗ ಅಥವಾ ನೋಂದಣಿ ಪ್ರಾಧಿಕಾರದ ಮುಂದೆ ಹಾಜರುಪಡಿಸಿದಾಗ, ಈ ನೋಂದಣಿ ಪ್ರಾಧಿಕಾರವು ದೃಢೀಕರಣವನ್ನು ಅನಾಮದೇಯ ವ್ಯಕ್ತಿ ಮಾರಾಟ ಮಾಡಿದ್ದಾರೆ ಎನ್ನುವ ಆಧಾರದ ಮೇಲೆ ನನ್ನ ಭೂಮಿಯ ಋಣಭಾರ ಪತ್ರದಲ್ಲಿ(Debenture) ನೋಂದಾಯಿಸಿರುವ ಹೆಸರು ತೆಗೆಯಬೇಕೆಂದು ಕೋರಿದ ಮನವಿಯನ್ನು ಸಬ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ ಎಂದು ಆಕ್ಷೇಪಿಸಿ ರಾಜೇಶ್ ತಿಮ್ಮಣ್ಣ ಉಮ್ರಾಣಿ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ,ಆಧಾರ್ ಕಾಯಿದೆ- 2016ರ ಅನ್ವಯ ಇನ್ಸ್ ಪೆಕ್ಟರ್ ಜನರಲ್ ಆಫ್ ರಿಜಿಸ್ಪ್ರೇಷನ್ ಯುಐಎಡಿಐ(UIADI) ಜತೆ ನೋಂದಾಯಿಸಿಕೊಳ್ಳಬೇಕು.
ಆಧಾರ್ ಕಾಯ್ದೆ 2016 ರ(Aadhaar Act) ಅಡಿಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ (UIDAI) ನೋಂದಾಯಿಸಿಕೊಳ್ಳಬೇಕು ಮತ್ತು ನೋಂದಣಿ ಪ್ರಾಧಿಕಾರದ ಮುಂದೆ ಆಧಾರ್ ಕಾರ್ಡ್‌ನ ರೂಪದಲ್ಲಿ ಗುರುತನ್ನು ಸಲ್ಲಿಸಿದಾಗಲೆಲ್ಲಾ, ಪ್ರಾಧಿಕಾರವು ಆಧಾರ್ ಕಾರ್ಡ್‌ನ ಸತ್ಯಾಸತ್ಯತೆ ಮತ್ತು ವ್ಯಕ್ತಿಯ ಗುರುತನ್ನು ಪರಿಶೀಲಿಸಬೇಕು ಮತ್ತು ಅದರ ನಂತರವೇ ದಾಖಲೆಯ ನೋಂದಣಿಯೊಂದಿಗೆ ಮುಂದುವರಿಯಬೇಕು.ಆಧಾರ್ ಕಾಯ್ದೆಯಡಿಯಲ್ಲಿ, ಯಾವುದೇ ಸೇವಾ ಪೂರೈಕೆದಾರರು ಯುಐಡಿಎಐನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಆಧಾರ್ ಕಾರ್ಡ್‌ದಾರರ ಫೋನ್ ಸಂಖ್ಯೆಯ ಮೇಲೆ ರಚಿಸಲಾದ ಒಟಿಪಿ(OTP) ಆಧಾರದ ಮೇಲೆ ಗುರುತನ್ನು ಪರಿಶೀಲಿಸಲು ಮಂಜೂರಾತಿ ಪಡೆಯಬಹುದು, ಪರಿಶೀಲನೆ ನಂತರವೇ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ಹೈಕೋರ್ಟ್ ತಿಳಿಸಿದ್ದು, ನೋಂದಣಿಗೆ ಮೊದಲು ಆಧಾರ್ ಅಧಿಕೃತತೆ ಪರಿಶೀಲಿಸಬೇಕೆಂದು ನಿರ್ದೇಶನ(Order) ನೀಡಿದೆ.