28.2 C
Bengaluru
Wednesday, July 3, 2024

ಪಂಚ ಸದಸ್ಯ ಪೀಠದಿಂದ ಮಹತ್ವದ ತೀರ್ಪು… ನೋಟು ಅಮಾನ್ಯೀಕರಣ ಎತ್ತಿಹಿಡಿದ ಸುಪ್ರೀಂ ಕೋರ್ಟ್.

ಹೊಸದಿಲ್ಲಿ: ಕೇಂದ್ರ ಸರಕಾರ 2016ರಲ್ಲಿ 500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ಪ್ರಕಟಿಸಲಿದೆ.

ನೋಟು ಅಪನಗದೀಕರಣ ನಡೆದು ಸುಮಾರು 6 ವರ್ಷಗಳು ಕಳೆದಿದೆ. 2016ರಲ್ಲಿ ಕೇಂದ್ರ ಸರ್ಕಾರವು ದಿಡೀರ್ ಆಗಿ 1000 ರೂಪಾಯಿ ಹಾಗೂ 500 ರೂಪಾಯಿಯ ನೋಟನ್ನು ಬ್ಯಾನ್ ಮಾಡಿದೆ. ಈ ಅಪನಗದೀಕರಣ ಸಂಬಂಧಿಸಿದ ಎರಡು ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಜನವರಿ 2, 2023ರಂದು ನೀಡಿದ್ದು ನೋಟು ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಕೇಂದ್ರ ಸರ್ಕಾರವು ನೋಟನ್ನು ಅಪನಗದೀಕರಣ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿಯ್ನನು ಸಲ್ಲಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ತೀರ್ಪನ್ನು ನ್ಯಾಯಾಂಗದ ಚಳಿಗಾಲದ ರಜೆ ಅವಧಿ ಮುಗಿದ ಮೊದಲ ದಿನವೇ ಪ್ರಕಟ ಮಾಡಿದೆ.

4-1 ಬಹುಮತದ ಆಧಾರದಲ್ಲಿ ಸುಪ್ರೀಂ ಕೋರ್ಟ್ 2016ರ ಅಪನಗದೀಕರಣವ ಅನುಮೋದನೆ ಮಾಡಿದೆ. ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿಆರ್ ಗವಾಯ್, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ಈ ತೀರ್ಪನ್ನು ನೀಡಿದೆ. ಐವರ ಪೈಕಿ ನ್ಯಾಯಮೂರ್ತಿ ಬಿವಿ ನಾಗರತ್ನ ಈ ತೀರ್ಪಿಗೆ ವಿರೋಧವಾಗಿದ್ದಾರೆ.

ಈ ನೋಟು ಅಪನಗದೀಕರಣದ ವಿರುದ್ಧವಾಗಿ ಸುಮಾರು 58 ಅರ್ಜಿಗಳು ಸಲ್ಲಿಸಲಾಗಿದೆ. ಈ ಅರ್ಜಿಗಳಲ್ಲಿ ಹೆಚ್ಚಿನವುಗಳು ಅಪನಗದೀಕರಣದ ಸಿಂಧುತ್ವವನ್ನು ಪ್ರಶ್ನೆ ಮಾಡಿರುವ ಅರ್ಜಿಗಳಾಗಿದೆ. ಇನ್ನು ಕೆಲವು ನೋಟು ಬದಲಾವಣೆ ದಿನವನ್ನು ವಿಸ್ತರಣೆ ಮಾಡುವುದಕ್ಕೆ ಸಂಬಂಧಿಸಿದೆ.

ನೋಟು ಬದಲಾವಣೆ ದಿನ ವಿಸ್ತರಣೆ ಮಾಡಲಾಗದು

1000 ರೂಪಾಯಿ ಹಾಗೂ 500 ರೂಪಾಯಿಯ ನೋಟನ್ನು ಬ್ಯಾನ್ ಮಾಡಿದ ಬಳಿಕ ನೋಟು ಬದಲಾವಣೆ ಮಾಡಿಕೊಳ್ಳಲು ಸುಮಾರು 52 ದಿನಗಳ ಗಡುವನ್ನು ನೀಡಲಾಗಿತ್ತು. ಈ ದಿನವನ್ನು ಮತ್ತೆ ವಿಸ್ತರಣೆ ಮಾಡಲಾಗದು ಎಂದು ಕೂಡಾ ಸುಪ್ರೀಂ ಕೋರ್ಟ್ ತಿಳಿಸಿದೆ. ಹಾಗೆಯೇ 1978ರಲ್ಲಿಯೂ ನೋಟು ಅಪನಗದೀಕರಣ ಮಾಡಲಾಗಿದೆ. ಆ ಸಂದರ್ಭದಲ್ಲಿ ನೋಟು ಬದಲಾವಣೆ ಮಾಡಲು 3 ದಿನಗಳ ಅವಧಿ ನೀಡಲಾಗಿತ್ತು. ಬಳಿಕ ಗಡುವನ್ನು 5 ದಿನಕ್ಕೆ ವಿಸ್ತರಣೆ ಮಾಡಲಾಗಿತ್ತು ಎಂದು ವಿವರಿಸಿದೆ.

Related News

spot_img

Revenue Alerts

spot_img

News

spot_img