ದೆಹಲಿ: ಭಾರತೀಯ ರೈಲ್ವೆ ಜನಸಾಮಾನ್ಯ ರಿಗಾಗಿ ಅಮೃತ ಭಾರತ್ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸುತ್ತಿದ್ದು, ಇದೇ 30ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿ ದ್ದಾರೆ.ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತೆಯೇ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಸ್ಟೀಪರ್ ಮತ್ತು ಮೀಸಲು ಟಿಕೆಟ್ ರಹಿತ ಜನರಲ್ ಬೋಗಿ ವ್ಯವಸ್ಥೆಯೂ ಇರಲಿದೆ. ಇದರಲ್ಲಿ 22 ಬೋಗಿಗಳು ಇರಲಿದ್ದು, 8 ಜನರಲ್ ಸೆಕೆಂಡ್ ಕ್ಲಾಸ್, 12 ಸೆಕೆಂಡ್ ಕ್ಲಾಸ್ 3 ಟಯರ್ ಸ್ವೀಪರ್ ಮತ್ತು ಎರಡು ಗಾರ್ಡ್ ಕಂಪಾರ್ಟ್‌ಮೆಂಟ್ ಗಳಿರಲಿವೆ. ರಾಮನ ಜನ್ಮಸ್ಥಳ ಅಯೋಧ್ಯೆ(Ayoddye) ಮತ್ತು ಸೀತೆಯ ಜನ್ಮಸ್ಥಳ ಸೀತಾಮಢಿಯನ್ನು ಸಂಪರ್ಕಿಸುವ ರಾಷ್ಟ್ರದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಡಿ.30ರಂದು ಚಾಲನೆ ನೀಡಲಿದ್ದಾರೆ.ಈ ರೈಲು ತನ್ನ ಮೊದಲ ಪ್ರಯಾಣದಲ್ಲಿ ಅಯೋಧ್ಯೆಯಿಂದ ಸೀತಾಮಢಿಯ ಮೂಲಕ ದರ್ಭಾಂಗಕ್ಕೆ ತೆರಳಲಿದೆ. ಮರುದಿನದಿಂದ ಆ ರೈಲು ದೆಹಲಿಯಿಂದ ಅಯೋಧ್ಯೆ-ಸೀತಾಮಢಿಯ ಮೂಲಕ ದರ್ಭಾಂಗಕ್ಕೆ ಸಂಚಾರ ನಡೆಸುತ್ತದೆ. ಇದೇ ವೇಳೆ ಪ್ರಧಾನಿ ಅಯೋಧ್ಯೆಯಲ್ಲಿ ವಂದೇ ಭಾರತ್(vandebharat) ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಚಾಲನೆ ನೀಡುವ ನಿರೀಕ್ಷೆಯಿದೆ.ಅಮೃತ್ ಭಾರತ್ ಎಕ್ಸ್‌ಪ್ರೆಸ್(Amrut bharat express) ನಾನ್-ಎಸಿ(N0n AC), ಪುಶ್-ಪುಲ್ ರೈಲಾಗಿದೆ. ಅಂದರೆ ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್ಗಳಿರುತ್ತವೆ. ಇದು ಕಡಿಮೆ ಸಮಯದಲ್ಲಿ ರೈಲು ವೇಗವನ್ನು ಹೆಚ್ಚಿಸುವುದರೊಂದಿಗೆ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಈ ರೈಲು 22 ಕೋಚ್‌ಗಳನ್ನು ಹೊಂದಿರುತ್ತದೆ. 12 ಸ್ಲೀಪರ್ ಕೋಚ್, 8 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು ಮತ್ತು ಎರಡು ಗಾರ್ಡ್ ಕಂಪಾರ್ಟ್‌ಮೆಂಟ್‌ಗಳು ಇರುತ್ತವೆ.ಸಿಸಿಟಿವಿ ಕ್ಯಾಮೆರಾಗಳು(CCTV camara) ಬಯೋ ವ್ಯಾಕ್ಯೂಮ್ ಶೌಚಾಲಯಗಳನ್ನು ಇದು ಹೊಂದಿರುತ್ತದೆ. ಇನ್ನು ಸೆನ್ಸರ್ ಆಧಾರಿತ ನೀರಿನ ಟ್ಯಾಪ್‌ಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಎಲೆಕ್ಟ್ರಿಕ್ ಔಟ್‌ಲೆಟ್‌ಗಳು, ಎಲ್‌ಇಡಿ ದೀಪಗಳು ಮತ್ತು ಆಧುನಿಕವಾಗಿ ವಿನ್ಯಾಸಗೊಳಿಸಲಾದ ಫ್ಯಾನ್‌ಗಳು ಮತ್ತು ಸ್ವಿಚ್‌ಗಳನ್ನು ಸಹ ಹೊಂದಿವೆ.