28.2 C
Bengaluru
Wednesday, July 3, 2024

ಭರ್ಜರಿ ಮಳೆಯ ನಡುವೆ ಕರ್ನಾಟಕದ ಎಲ್ಲಾ ಡ್ಯಾಂಗಳ ಇಂದಿನ ನೀರಿನ ಸಂಗ್ರಹದ ಮಾಹಿತಿ.

ಬೆಂಗಳೂರು ಜುಲೈ 08:ರಾಜ್ಯದಲ್ಲಿ ಕಳೆದ ವಾರದಿಂದ ಎಡಬಿಡದೆ ಸುರಿಯುತ್ತಿರುವ ಭರ್ಜರಿ ಮಳೆಯ ನಡುವೆ ಕರ್ನಾಟಕದ ಎಲ್ಲಾ ಡ್ಯಾಂಗಳ ಇಂದಿನ ನೀರಿನ ಸಂಗ್ರಹ ಹಾಗೂ ಒಳ ಹರಿವು ಹಾಗೂ ಹೊರ ಹರಿವು ಎಷ್ಟಿದೆ ಎಂಬುದರ ಬಗ್ಗೆ ಒಂದು ಕಿರು ನೋಟ as Per 08-July-2023:-

1) ಕೆಆರ್ಎಸ್ ​ ಜಲಾಶಯ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 10 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ​ ಜಲಾಶಯದಲ್ಲಿ 36.72 ಟಿಎಂಸಿ ನೀರು ಸಂಗ್ರಹವಾಗಿತ್ತು. ಇದೀಗ ಒಳಹರಿವು ಹೆಚ್ಚಳವಾಗಿದ್ದು, ಕೆಆರ್‌ಎಸ್ ​ ಜಲಾಶಯಕ್ಕೆ 1444 ಕ್ಯುಸೆಕ್ ನೀರು ಹರಿದು ಬರುತ್ತಿದೆ.

2) ಕಬಿನಿ ಜಲಾಶಯ: ಕಾವೇರಿ ಕೊಳ್ಳದ ಮತ್ತೊಂದು ಪ್ರಮುಖ ಜಲಾಶಯ ಕಬಿನಿ, ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಕೇವಲ 6 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಕಬಿನಿ ಜಲಾಶಯದಲ್ಲಿ ಡಬಲ್ ಅಂದರೆ 13.74 ನೀರು ಸಂಗ್ರಹವಾಗಿತ್ತು. ಬರದ ಆತಂಕದ ನಡುವೆ ಈಗ ಕಬಿನಿ ಡ್ಯಾಂಗೆ 10,781 ಕ್ಯುಸೆಕ್ ನೀರು ಹರಿದು ಬರುತ್ತಿದೆ.

3) ಹೇಮಾವತಿ ಜಲಾಶಯ: ಕಾವೇರಿ ನದಿಯ ಉಪನದಿ ಹೇಮಾವತಿಗೆ ಕಟ್ಟಿರುವ ಡ್ಯಾಂ ಹೇಮಾವತಿ ಜಲಾಶಯ. 37.10 ಟಿಎಂಸಿ ಒಟ್ಟು ಸಾಮರ್ಥ್ಯದ ಹೇಮಾವತಿ ಡ್ಯಾಂ ಕಳೆದ 4-5 ವರ್ಷದಿಂದ ತುಂಬಿ ತುಳುಕಿತ್ತು. ಆದರೆ ಈ ಬಾರಿ ಮಳೆ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಹೇಮಾವತಿ ಜಲಾಶಯ ಕೂಡ ಬರಿದಾಗುತ್ತಿದೆ. ಈಗ 13.80 ಟಿಎಂಸಿ ಮಾತ್ರ ಬಾಕಿ ಇದ್ದು, 659 ಕ್ಯುಸೆಕ್ ಒಳಹರಿವು ಇದೆ.

4) ತುಂಗಭದ್ರಾ ಜಲಾಶಯ: ಬಯಲು ಸೀಮೆ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯ ಬರಿದಾಗುತ್ತಿದೆ. ಗರಿಷ್ಠ 105.79 ಟಿಎಂಸಿ ಸಾಮರ್ಥ್ ಇರುವ ತುಂಗಭದ್ರಾ ಡ್ಯಾಂನಲ್ಲೀಗ ಕೇವಲ 3 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಬರೋಬ್ಬರಿ 53 ಟಿಎಂಸಿ ನೀರು ಸಂಗ್ರಹವಿತ್ತು. ತುಂಗಭದ್ರಾ ಜಲಾಶಯದ ಒಳಹರಿವು ಕೇವಲ 193 ಕ್ಯುಸೆಕ್ ಆಗಿದೆ.

5) ಆಲಮಟ್ಟಿ ಜಲಾಶಯ: ಉತ್ತರ ಕರ್ನಾಟಕದ ಪ್ರಮುಖ ಜಲಾಶಯದಲ್ಲಿ ಒಂದಾಗಿರುವ ಆಲಮಟ್ಟಿ ಕೂಡ ಮಳೆಯಿಲ್ಲದೆ ಬರಿದಾಗುತ್ತಿದೆ. ಇಲ್ಲಿಗೆ ಮಹಾರಾಷ್ಟ್ರದಿಂದಲೇ ನೀರು ಬರಬೇಕಿದೆ. ಆದ್ರೆ ಮಹಾರಾಷ್ಟ್ರ ನೀರು ಬಿಟ್ಟಿಲ್ಲ ಹೀಗಾಗಿ ಆಲಮಟ್ಟಿ ಜಲಾಶಯದ ಒಟ್ಟು ಸಾಮರ್ಥ್ಯ 123 ಟಿಎಂಸಿ ಇದ್ದರೂ ಈಗ 19 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಇದೇ ಸಮಯಕ್ಕೆ 53 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಇತ್ತು. ಆಲಮಟ್ಟಿ ಒಳ ಹರಿವು 00 ಕ್ಯುಸೆಕ್ ಆಗಿದೆ.

6) ಲಿಂಗನಮಕ್ಕಿ ಜಲಾಶಯ: ಕರ್ನಾಟಕದ ದೊಡ್ಡ ಡ್ಯಾಂ ಎನಿಸಿಕೊಂಡ ಲಿಂಗನಮಕ್ಕಿಗೆ ಭರ್ಜರಿಯಾಗಿ ನೀರು ಹರಿದು ಬರುತ್ತಿದೆ. ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು ಜಲಾಶಯಕ್ಕೆ ಹೊಸ ಕಳೆ ನೀಡಿದೆ. ಲಿಂಗನಮಕ್ಕಿ ಡ್ಯಾಂ ಒಟ್ಟು ಸಾಮರ್ಥ್ಯ 151 ಟಿಎಂಸಿ ಆಗಿದ್ದು, ಈಗ 14 ಟಿಎಂಸಿ ನೀರು ಇದೆ. ಆದರೆ ಒಳಹರಿವು ಮಾತ್ರ 15 ಸಾವಿರ ಕ್ಯುಸೆಕ್ ಮೀರಿಸಿದ್ದು, ಕೆಲವೇ ದಿನದಲ್ಲಿ ಡ್ಯಾಂ ತುಂಬುವ ನಿರೀಕ್ಷೆ ಇದೆ.

7) ಭದ್ರಾ ಜಲಾಶಯ: ಭದ್ರಾ ಡ್ಯಾಂನಲ್ಲಿ 71 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಕೇವಲ 25.54 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಭದ್ರಾ ಜಲಾಶಯದಲ್ಲಿ ಡಬಲ್ ಅಂದರೆ 43.44 ನೀರು ಸಂಗ್ರಹವಾಗಿತ್ತು. ಭದ್ರಾ ಡ್ಯಾಂಗೆ 6,479 ಕ್ಯುಸೆಕ್ ನೀರು ಹರಿದು ಬರುತ್ತಿದೆ.

8) ಘಟಪ್ರಭಾ ಜಲಾಶಯ: ಈ ಡ್ಯಾಂನಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 04 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಘಟಪ್ರಭಾ ​ಜಲಾಶಯದಲ್ಲಿ 6.90 ಟಿಎಂಸಿ ನೀರು ಸಂಗ್ರಹವಾಗಿತ್ತು. ಘಟಪ್ರಭಾ ಡ್ಯಾಂಗೆ 366 ಕ್ಯುಸೆಕ್ ನೀರು ಹರಿದು ಬರುತ್ತಿದೆ.

9) ಸೂಫಾ ಜಲಾಶಯ: ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು ಸೂಫಾ ಡ್ಯಾಂ ತುಂಬುವ ನಿರೀಕ್ಷೆ ಇದೆ. ಸೂಫಾ ಡ್ಯಾಂ ಒಟ್ಟು ಸಾಮರ್ಥ್ಯ 145 ಟಿಎಂಸಿ ಆಗಿದ್ದು, ಈಗ 29.89 ಟಿಎಂಸಿ ನೀರು ಇದೆ. ಆದರೆ ಒಳಹರಿವು 2285 ಕ್ಯುಸೆಕ್ ಮೀರಿಸಿದ್ದು, ಕೆಲವೇ ದಿನದಲ್ಲಿ ಡ್ಯಾಂ ತುಂಬುವ ನಿರೀಕ್ಷೆ ಇದೆ.

10) ವರಾಹಿ ಜಲಾಶಯ: ಜಲಾಶಯದ ಗರಿಷ್ಠ ಸಾಮರ್ಥ್ಯ 31.10 ಟಿಎಂಸಿ. ಆದರೆ ಈಗ ಜಲಾಶಯದಲ್ಲಿ 3.06 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ, ವರಾಹಿ ​ ಜಲಾಶಯದಲ್ಲಿ 4.84 ಟಿಎಂಸಿ ನೀರು ಸಂಗ್ರಹವಾಗಿತ್ತು. ವರಾಹಿ​ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದೆ.

11) ಮಲಪ್ರಭಾ ಜಲಾಶಯ: ಡ್ಯಾಂನಲ್ಲಿ 37.73 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 6.89 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಂದರ್ಭಕ್ಕೆ ಮಲಪ್ರಭಾ ​ಜಲಾಶಯದಲ್ಲಿ 11.85 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗ ಮಲಪ್ರಭಾ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದೆ.

12) ಹಾರಂಗಿ ಜಲಾಶಯ: ಜಲಾಶಯ ಬರಿದಾಗುತ್ತಿದ್ದು, ಹಾರಂಗಿ ಗರಿಷ್ಠ 8.50 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗ ಕೇವಲ 3 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಬರೋಬ್ಬರಿ 7 ಟಿಎಂಸಿ ನೀರು ಸಂಗ್ರಹವಿತ್ತು. ಹಾರಂಗಿ ಜಲಾಶಯದ ಒಳಹರಿವು 1557 ಕ್ಯುಸೆಕ್ ಆಗಿದೆ.

Related News

spot_img

Revenue Alerts

spot_img

News

spot_img