32.2 C
Bengaluru
Monday, April 15, 2024

64 ದಿನಗಳ ಬಳಿಕ ಬಿಗ್ ಬಾಸ್ ಮನೆಯಿಮದ ಹೊರ ಬಿದ್ದ ಸ್ನೇಹಿತ್..!

ಭಾನುವಾರ ನಡೆದ ಕಿಚ್ಚನ ಪಂಚಾಯತಿಯಲ್ಲಿ 64 ದಿನಗಳು ಬಿಗ್ ಬಾಸ್ ಮನೆಯಲ್ಲಿದ್ದ ಸ್ನೇಹಿತ್ ಹೊರಬಿದ್ದಿದ್ದಾರೆ. ಬಹಳಷ್ಟು ತಾನೂ ಪ್ರಬಲ ಸ್ಪರ್ಧಿಯಾಗಿದ್ದೆ ಆದ್ರೆ ಮನೆಯಲ್ಲಿ ನಾನು ಜೊತೆಯಲ್ಲಿದ್ದವರಿಗಾಗಿ ಆಟ ಆಡಲು ಹೋಗಿ ಅದು ನನಗೆ ಬ್ಯಾಕ್ ಪೈರ್ ಆಯ್ತು ಎಂದಿದ್ದಾರೆ. ಹಾಗಾದ್ರೆ ಅದು ಎಲ್ಲಿ ಏನಾಯ್ತು ಎಂದು ನಾವು ಹೇಳ್ತಿವಿ ನೋಡಿ.

ವಿನಯ್, ನಮ್ರತಾ Ego ಸೇವ್ ಮಾಡೋದಿಕ್ಕೆ ಹೋಗಿ ಕೈ ಸುಟ್ಟುಕೊಂಡ ಸ್ನೇಹಿತ್.!

ಹೌದು ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರವೆ ಆಚೆ ಹೋಗಬೇಕಿದ್ದ ಸ್ನೇಹಿತ್ ನನ್ನ ಕಿಚ್ಚ ಸುದೀಪ್ ಸೇವ್ ಮಾಡಿದ್ರು. ಸ್ನೇಹಿತ್ ಅವರ ನಾಯಕತ್ವ ಪರೀಕ್ಷೆ ಮಾಡೋದಿಕ್ಕೆ ಮನೆಯೊಡೆಯನಾಗಿ ಸ್ನೇಹಿತ್ ನನ್ನ ಆಯ್ಕೆ ಮಾಡಲಾಗಿತ್ತು. ಈ ರೀತಿಯಾಗಿ ಬಿಗ್ ಬಾಸ್ ದೊಡ್ಡ ಆವಕಾಶ ಸ್ನೇಹಿತ್ ಗೆ ಕೊಟ್ಟರು ಸಹ ಚಮಚಾಗಿರಿ ಬಿಡದ ಸ್ನೇಹಿತ್ ತನ್ನ ಹಳೆಯ ಚಾಳಿಯನ್ನ ಮುಂದುವರೆಸಿದ್ರು. ಟಾಸ್ಕ್ ಸಮಯದಲ್ಲಿ ಹಲವಾರು ರೀತಿಯ ಅನಾಹುತಗಳಾದ್ರೂ ಸಹ ಮನೆಯ ಒಡೆಯನಾಗಿ ಸ್ನೇಹಿತ್ ಯಾವುದೇ ನಿರ್ಧಾರಗಳನ್ನ ತೆಗದುಕೊಳ್ಳದ ಕಾರಣ ಸಂಗೀತಾ, ಡ್ರೋನ್ ಪ್ರತಾಪ್ ಕಣ್ಣಿಗೆ ಗಾಯವಾಗಿತ್ತು. ಹೀಗಾಗಿ ಸ್ನೇಹಿತ್ ಎಲ್ಲಾ ಸಮಯದಲ್ಲೂ ಸಹ ವಿನಯ್ ಮತ್ತು ನಮ್ರತಾ ನಿರ್ದಾರಗಳನ್ನ ಬೆಂಬಲಿದ ಕಾರಣ ಸಾಕಷ್ಟು ವೋಟ್ಸ್ ವೀಕ್ಷಕರಿಂದ ಬಾರದೇ ಈವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಸ್ನೇಹಿತ್ ಹೇಳಿದ ಪ್ರಕಾರ ಟಾಪ್ ೫ ಆಟಗಾರರು ಯಾರು ಗೊತ್ತಾ..?

ಸ್ನೇಹಿತ್ ಪ್ರಕಾರ ಆ ಟಾಪ್ ಐದು ಜನ ಆಟಗಾರರಲ್ಲಿ ನಮ್ರತಾ, ಮೈಕಲ್, ವಿನಯ್, ಪ್ರತಾಪ್ ಹಾಗು ಸಂಗೀತಾ ಕಾರ್ತಿಕ್ ರಲ್ಲಿ ಒಬ್ಬರಿರಬಹುದು ನನಗೆ ವಿನಯ್ ಗೆಲ್ಲಬೇಕು ಅಂತ ಆಸೆ ಎಂದಿದ್ದಾನೆ ಸ್ನೇಹಿತ್ . ಆದ್ರೆ ಸ್ನೇಹಿತ್ ಅದ್ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿ ಹೇಳಿದ್ದಾನೆಂದು ಇನ್ನು ಬಹುತೇಕರಿಗೆ ಅರ್ವಾಗುತ್ತಿಲ್ಲ ಎನ್ನುತ್ತಿದ್ದಾರೆ.

ಬಿಗ್ ಬಾಸ್ ನಿಂದ ಹೊರಬಿದ್ದ ಕೂಡಲೇ ಕಾಮೆಂಟ್ ಬಾಕ್ಸ್ ಆಫ್ ಮಾಡಿದ ಸ್ನೇಹಿತ್..!

ಇನ್ನು ತನ್ನ ಹೀನಾಯ ಆಟ ಪ್ರದರ್ಶನ ಮಾಡಿರೋದ್ರಿಂದ ಹೊರಬಿದ್ದಿರುವ ಸ್ನೇಹಿತ್, ಟ್ರೋಲ್ ಪೇಜ್ ಗಳಿಗೆ ಹೆದರಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನ ಕಾಮೆಂಟ್ ಬಾಕ್ಸ್ ಆಫ್ ಮಾಡಿಕೊಂಡಿದ್ದಾರೆ. ಯಾಕೆಂದ್ರೆ ಸ್ನೇಹಿತ್ ನಿರ್ಧಾರಗಳು ಬಿಗ್ ಬಾಸ್ ನೋಡುಗರನ್ನು ಅಷ್ಟು ಘಾಸಿಗೊಳಿಸಿದ್ದವು. ಇನ್ನು ಕಿಚ್ಚ ಸುದೀಪ್ ಅಂತು ಈ ವಿಚಾರವಾಗಿ ಸ್ನೇಹಿತ್ ರನ್ನ ಮಿಕ್ಸಿಯಲ್ಲಿ ರುಬ್ಬಿದಂತೆ ರುಬ್ಬಿದ್ದುಂಟು ಇನ್ನು ಟ್ರೋಲ್ ಪೇಜ್ ಗಳಂತು ಸುಮ್ಮನೆ ಬಿಡುವ ಮಾತೇ ಇಲ್ಲ. ಹೀಗಾಗಿ ಸ್ನೇಹಿತ್ ಕಾಮೆಂಟ್ ಬಾಕ್ಸ್ ಮಾಡಿಕೊಂಡಿದ್ದಾರೆನ್ನಲಾಗಿದೆ.

ಚೈತನ್ಯ, ರೆವೆನ್ಯೂ ಫ್ಯಾಕ್ಟ್ ನ್ಯೂಸ್

Related News

spot_img

Revenue Alerts

spot_img

News

spot_img