ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿ ನವಿ ಮುಂಬೈನ ಸ್ಯಾಟಲೈಟ್ ಟೌನ್‌ಶಿಪ್‌ನಲ್ಲಿ ಕೈಗೆಟಕುವ ದರದಲ್ಲಿ 7,849 ವಸತಿಯ ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಗೊಂಡಿದೆ. ಇದು ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹಬ್ಬದಂದೇ ಯೋಜನೆ ಆರಂಭಕ್ಕೆ ಚಾಲನೆ ನೀಡಿದ್ದಾರೆ.
ಈ ವಸತಿ ಯೋಜನೆಯನ್ನು ನಗರಾಭಿವೃದ್ಧಿ ಪರಿಕಲ್ಪೆನೆಯಲ್ಲಿ ಆರಂಭಿಸಿದ್ದು, ಸಿಟಿ ಇಂಡಸ್ಟ್ರಿಯಲ್ ಡೆವಲಂಪ್‌ಮೆಂಟ್ ಕಾರ್ಪೋರೇಷನ್ ಆಫ್ ಮಹಾರಾಷ್ಟ್ರ ಲಿಮಿಟೆಡ್ (ಸಿಐಡಿಸಿಒ) ಈ ಯೋಜನೆಯನ್ನು ನವಿ ಮುಂಬೈನ ಉಲ್ವೆಯ ಬಮಂಡೊಂಗ್ರಿ, ಕರ್ಕೊಪರ್ ಈಸ್ಟ್ 2ಎ, ಕರ್ಕೊಪರ್ ಈಸ್ಟ್ 2ಬಿ ಹಾಗೂ ಕರ್ಕೊಪರ್ ಈಸ್ಟ್ ಪಿ3 ಆರಂಭಿಸಲಿದೆ. ಈ ವಸತಿ ಯೋಜನೆಯು ಮೂಲಭೂತ ಸೌಕರ್ಯಗಳಾದ ಶಾಲೆಗಳು, ಕಾಲೇಜುಗಳು ಹಾಗೂ ಆಸ್ಪತ್ರೆ ಸೌಕರ್ಯಗಳನ್ನೂ ಒಳಗೊಂಡಿವೆ.
ಈ ಹೊಸ ಅಪಾರ್ಟ್‌ಮೆಂಟ್ ಉದ್ದೇಶಿತ ಸ್ಥಳಗಳು ಬೇಲಾಪುರ ಹಾಗೂ ನೇರುಳ್ ಸಮೀಪದಲ್ಲಿದೆ. ಹಾಗೆಯೇ ಇಲ್ಲಿ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇರುವುದರಿಂದ ಈ ಸ್ಥಳಗಳು ಹೆಚ್ಚು ಬೇಡಿಕೆ ಹೊಂದಿವೆ.
ವಿವಿಧ ಆರ್ಥಿಕ ಸ್ತರದ ಜನರಿಗೆ ಅವರ ಕೈಗೆಟಕುವ ದರದಲ್ಲಿ ಸಿಐಡಿಸಿಒ ಮನೆಗಳನ್ನು ಒದಗಿಸಲಿವೆ. ಇಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇರುವುದರಿಂದ ಉಲ್ವೆ ನೋಡ್ ಪ್ರದೇಶವು ಭವಿಷ್ಯದಲ್ಲಿ ಹೆಚ್ಚು ಬೇಡಿಕೆಯನ್ನು ಪಡೆಯಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಸದ್ಯ ಮುಂಬೈನಲ್ಲಿ ಅಭಿವೃದ್ಧಿ ಹಂತದಲ್ಲಿರುವ ಉಲ್ವೆ ಪ್ರದೇಶದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯು ಉತ್ತಮವಾಗಿದೆ. ಹಾಗೆಯೇ ಬಮಂಡೊಂಗ್ರಿ– ಕರ್ಕೊಪರ್ ರೈಲ್ವೆ ಸಂಪರ್ಕವೂ ಇದೆ.