25 C
Bengaluru
Saturday, February 8, 2025

ಮನೆ ನಿರ್ಮಿಸಿದಾಗ ಪ್ಲಾಸ್ಟರಿಂಗ್ ಮಾಡಿಸುವುದಾದರೆ ಜಿಪ್ಸಂ ಅಥವಾ ಸಿಮೆಂಟ್ ಎರಡರಲ್ಲಿ ಯಾವುದು ಉತ್ತಮ..?

ಬೆಂಗಳೂರು, ಫೆ. 11 : ಜಿಪ್ಸಂ ಬಂದು ವೈಟ್ ಪೌಡರ್ ಮಾದರಿ ಬರುತ್ತದೆ. ಇದನ್ನು ನೀರಿನಲ್ಲಿ ಮಿಕ್ಸ್ ಮಾಡಿ ಮನೆಗೆ ಪ್ಲಾಸ್ಟರಿಂಗ್ ಮಾಡಲಾಗುತ್ತದೆ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ತಿಳಿಯೋಣ ಬನ್ನಿ. ಪ್ಲಾಸ್ಟರಿಂಗ್ ಎರಡು ರೀತಿ ಇದೆ. ಸಿಮೆಂಟ್ ಪ್ಲಾಸ್ಟರಿಂಗ್ ಹಾಗೂ ಜಿಪ್ಸಂ ಪ್ಲಾಸ್ಟರಿಂಗ್ ಇದೆ. ಸಿಮೆಂಟ್ ಪ್ಲಾಸ್ಟರಿಂಗ್ ಮಾಡಬೇಕಾದರೆ, ಕಟ್ಟಿರುವ ಗೋಡೆಗಳನ್ನು ರಫ್ ಮಾಡಬೇಕು. ಆದರೆ ಜಿಪ್ಸಂಗೆ ಇದೆಲ್ಲಾ ಬೇಡ. ಗೋಡೆ ಅನ್ ಈವನ್ ಆಗಿದ್ದರೂ ಜಿಪ್ಸಂ ಪ್ಲಾಸ್ಟರಿಂಗ್ ಅನ್ನು ಮಾಡುವುದು ಬಳಹ ಸುಲಭ.

ಇನ್ನು ಪ್ಲಾಸ್ಟರಿಂಗ್ ಮಾಡಲು ಸಿಮೆಂಟ್ ಬೇಕು. ಸರಿಯಾದ ನೀರಿನಲ್ಲಿ ಮಿಕ್ಸ್ ಮಾಡಬೇಕು. ಆದರೆ, ಜಿಪ್ಸಂಗೆ ಹಾಗೆಲ್ಲಾ ಏನಿಲ್ಲ. ಇನ್ನು ಸಿಮೆಂಟ್ ಪ್ಲಾಸ್ಟರಿಂಗ್ ಅನ್ನು ಮಾಡುವುದಾದರೆ, ನಿಮಗೆ ಬಹಳ ಸಮಯ ಹಿಡಿಯುತ್ತದೆ. ಲೆವೆಲ್ ಸಮನಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಅರ್ಧದಿಂದ ಒಂದು ಇಂಚಿನವರೆಗೂ ಪ್ಲಾಸ್ಟರಿಂಗ್ ಮಾಡಬೇಕಾಗುತ್ತದೆ. ಜಿಪ್ಸಂ ಕಡಿಮೆ ಖರ್ಚಿನಲ್ಲಿ ಮುಗಿಸಬಹುದು. 6ರಿಂದ 13 ಇಂಚು ಇದ್ದರೆ ಸಾಕು. ಇನ್ನು ಸಿಮೆಂಟ್ ಪ್ಲಾಸ್ಟರಿಂಗ್ ಒಂದು ಗೋಡೆಗೆ ಮಾಡುವ ಸಮಯದಲ್ಲಿ ಇಡೀ ರೂಮ್ ಅನ್ನು ಜಿಪ್ಸಂ ಬಳಸಿ ಪ್ಲಾಸ್ಟರಿಂಗ್ ಮಾಡಬಹುದು. ಇನ್ನು ಪ್ಲಾಸ್ಟರಿಂಗ್ ಮಾಡಿದ ಮೇಲೆ ಸಿಮೆಂಟ್ ಪ್ಲಾಸ್ಟರಿಂಗ್ಗೆ ಕ್ಯೂರಿಂಗ್ ಮಾಡಲೇಬೇಕು. ಅದು ಕೂಡ 15 ದಿನ ಸಮಯ ತೆಗೆದುಕೊಳ್ಲುತ್ತದೆ. ಆದರೆ ಜಿಪ್ಸಂ ಪ್ಲಾಸ್ಟರಿಂಗ್ ಮಾಡಲು ಹೆಚ್ಚು ಸಮಯ ಸಿಗುವುದಿಲ್ಲ. ಕ್ಯೂರಿಂಗ್ ಬೇಕಾಗುವುದೇ ಇಲ್ಲ. ಕೇವಲ 24 ಗಂಟೆಯಲ್ಲಿ ಸೆಟ್ ಆಗಿ ಬಿಡುತ್ತದೆ.

ಇನ್ನು ಪೇಂಟಿಂಗ್ ಮಾಡಬೇಕೆಂದರೆ, ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದರೆ, ಕಡಿಮೆ ಎಂದರೂ 28 ದಿನ ಆಗಲೇ ಬೇಕು. ಅದನ್ನ ಕ್ಲೀನಿಂಗ್ ಮಾಡಬೇಕು. ಆಮೇಲೆ ಪೇಂಟಿಂಗ್ ಮಾಡಬೇಕು ಅದೂ ಕೂಡ ವಾಲ್ ಪುಟ್ಟಿ ಮಾಡಬೇಕು. ಆದರೆ ಜಿಪ್ಸಂ ಪ್ಲಾಸ್ಟರಿಂಗ್ ಮಾಡಿದರೆ, ಒಂದು ದಿನ ಬಿಟ್ಟು ತಕ್ಷಣವೇ ಪೇಂಟಿಂಗ್ ಮಾಡಬಹುದು. ಇನ್ನು ಸಿಮೆಂಟ್ ಕ್ಯೂರಿಂಗ್ ಸರಿಯಾಗಿ ಮಾಡಿಲ್ಲವಾದರೆ ಏರ್ ಲೈನ್ ಕ್ರ್ಯಾಕ್ ಬೀಳುತ್ತದೆ. ಆದರೆ, ಜಿಪ್ಸಂ ನಲ್ಲಿ ಯಾವುದೇ ಡ್ಯಾಮೇಜ್ ಆಗುವುದಿಲ್ಲ.

ಇನ್ನು ಜಿಪ್ಸಂ ಹಾಗೂ ಸಿಮೆಂಟ್ ಪ್ಲಾಸ್ಟರಿಂಗ್ ಬಹಳಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಎರಡೂ ಕೂಡ ಒಂದೇ ರೀತಿಯಾಗಿರುತ್ತದೆ. 25 ಕೆಜಿಯ ಒಂದು ಬ್ಯಾಗ್ ಸಿಮೆಂಟ್ 400 ರೂಪಾಯಿಗಿಂತ ಹೆಚ್ಚು, ಆದರೆ ಜಿಪ್ಸಂ ಕೇವಲ 350 ರೂಪಾಯಿ. ಇನ್ನು ಸಿಮೆಂಟ್ ಪ್ಲಾಸ್ಟರಿಂಗ್ ಅನ್ನು ಮಾಡಬೇಕೆಂದರೆ,ಸಮಯ ಹೆಚ್ಚು ಬೇಕು, ಲೇಬರ್ ಗಳು ಹೆಚ್ಚು ಬೇಕು. ಆದರೆ, ಜಿಪ್ಸಂ ಪ್ಲಾಸ್ಟರಿಂಗ್ ಮಾಡಿಸುವುದರಿಂದ ಇದೆಲ್ಲವೂ ಕಡಿಮೆ ಆಗುತ್ತದೆ.

ಹಾಗಾಗಿ ಉತ್ತರಕ್ಕೆ ತಲೆ ಇಟ್ಟು ಮಲಗಬಾರದು. ಹಾಗೇನಾದರೂ ಮಾಡಿದರೆ, ಅದು ಮೃತ್ಯುವಿಗೆ ಆಹ್ವಾನ ಇಟ್ಟಂತೆ. ಇನ್ನು ಉತ್ತರದಲ್ಲಿ ತಲೆ ಇಟ್ಟು ಮಲಗಿದರೆ, ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವೈಜ್ಞಾನಿಕವಾಗಿಯೂ ಹೇಳಲಾಗಿದೆ. ಭೂಮಿಯ ಸುತ್ತಲೂ ಮ್ಯಾಗ್ನೆಟಿಕ್ ಎನರ್ಜಿ ಉತ್ತರದಿಂದ ದಕ್ಷಿಣಕ್ಕೆ ಹೋಗಿ ತಲುಪುತ್ತದೆ ಎಂದು ಹೇಳಲಾಗಿದೆ. ಇದು ಆರೋಗ್ಯ ಸಮಸ್ಯೆ ಅನ್ನು ಉಂಟು ಮಾಡುತ್ತದೆ. ಹಾಗಾಗಿಯೇ ಭಾರತೀಯರು ಆದಷ್ಟು ದಕ್ಷಿಣದಲ್ಲಿ ತಲೆ ಇಟ್ಟು ಮಲಗುವುದು ಸೂಕ್ತ.

Related News

spot_img

Revenue Alerts

spot_img

News

spot_img