20.2 C
Bengaluru
Thursday, December 19, 2024

Aditya L1 Mission: ಇಸ್ರೋಗಿಂದು ʻಆದಿತ್ಯʼನ ಅಗ್ನಿ ಪರೀಕ್ಷೆ

#Aditya L1 Mission# Fire test of #Aditya # Isro

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ದ ʻAditya- L1ʼ ತನ್ನ L1 ಪಾಯಿಂಟ್ ಅನ್ನು ಜನವರಿ 6, 2024 ರಂದು ಅಂದ್ರೆ, ಇಂದು ಸಂಜೆ 4 ಗಂಟೆಗೆ ತಲುಪಲಿದೆ.ಸೂರ್ಯನ ಕೌತುಕ ಭೇದಿಸಲು ಹೊರಟಿರುವ ಆದಿತ್ಯ L-1(Aditya L-1) ಸೂರ್ಯ ನೌಕೆಯನ್ನು ಇಂದು ಸಂಜೆ 4 ಗಂಟೆಯ ವೇಳೆಗೆ ಲ್ಯಾಂಗ್ರೇಜ್ ಪಾಯಿಂಟ್‌ನಲ್ಲಿ (Langrage Point) ಇಸ್ರೋ(Isro) ಕೂರಿಸಲಿದೆ. ಇದು ಆದಿತ್ಯ ನೌಕೆಯ ಅಂತಿಮ ನಿಲ್ದಾಣವಾಗಿದ್ದು, ಅಲ್ಲಿಂದಲೇ ಅದು ಸೂರ್ಯನನ್ನು ಅಧ್ಯಯನ ಮಾಡಲಿದೆ. 4 ತಿಂಗಳ ಹಿಂದೆ ಉಡಾವಣೆ ಮಾಡಲಾಗಿರುವ ಈ ನೌಕೆ, ಈಗಾಗಲೇ 15 ಲಕ್ಷ ಕಿಮೀ ಸಂಚರಿಸಿದ್ದು, ಇಂದು ನಿಲ್ದಾಣದಲ್ಲಿ ಕೂರಿಸದಿದ್ದರೆ ಅದು ಸೂರ್ಯನತ್ತ ಸಂಚರಿಸಿ ಭಸ್ಮವಾಗುವ ಅಪಾಯವಿದೆ.ಎಲ್‌1 ಪಾಯಿಂಟ್‌ ಎಂಬುದು ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರಷ್ಟು ದೂರವಾಗಿದೆ. ಇಲ್ಲಿಂದ ಯಾವುದೇ ಅಡೆತಡೆಯಿಲ್ಲದೆ, ಹಗಲು ರಾತ್ರಿಗಳಿಲ್ಲದೆ, ಗ್ರಹಣಗಳೂ ಇಲ್ಲದೆ ಆದಿತ್ಯ ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಬಹುದಾಗಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಎಲ್‌1 ಅಧ್ಯಯನ ನಡೆಸಲಿದೆ.ಸೂರ್ಯನ ಹೊರಗಿನ ಪದರವಾದ ಸೌರ ಕರೋನಾವನ್ನು ಅಧ್ಯಯನ ಮಾಡುವುದು ಮತ್ತು ಸೂರ್ಯ-ಭೂಮಿಯ ಸಂಬಂಧದ ವಿವಿಧ ಅಂಶಗಳನ್ನು ತನಿಖೆ ಮಾಡುವುದು ಆದಿತ್ಯ ಎಲ್ 1 ಮಿಷನ್ ಪ್ರಮುಖ ಉದ್ದೇಶವಾಗಿದೆ.ಈ ಮಿಷನ್(Mission) ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಏಳು ವಿಭಿನ್ನ ಪೇಲೋಡ್‌ಗಳನ್ನು(payloads) ಹೊಂದಿದೆ.ಲಾಗ್ರಾಂಜಿಯನ್ ಪಾಯಿಂಟ್-1 ಎಂದು ಕರೆಯಲ್ಪಡುವ ಅದರ ಅಂತಿಮ ದೃಷ್ಟಿಕೋನದಿಂದ, 1,475 ಕಿಲೋಗ್ರಾಂಗಳಷ್ಟು ಆದಿತ್ಯ-ಎಲ್1 ಉಪಗ್ರಹವು ನಮ್ಮ ಸೌರವ್ಯೂಹದ ನಕ್ಷತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ, ಅದು ಒಂದು ನಿಗೂಢವಾಗಿ ಉಳಿದಿದೆ.

Related News

spot_img

Revenue Alerts

spot_img

News

spot_img