23.2 C
Bengaluru
Thursday, January 23, 2025

ಆಧಾರ್‌ ಕಾರ್ಡ್‌ ವಿಳಾಸ ಬದಲಿಸುವುದು ಇನ್ನು ಸುಲಭ

ಬೆಂಗಳೂರು, ಜ. 05 : ಇನ್ಮುಂದೆ ಆಧಾರ್ ಕಾರ್ಡ್ (Adhaar card)ನಲ್ಲಿ ವಿಳಾಸ ಬದಲಾಯಿಸುವುದು ಬಹಳ ಸುಲಭ. ವಿಳಾಸ ಬದಲಾಯಿಸಲು ಯಾವುದೇ ದಾಖಲೆಗಳ ಅಗತ್ಯವಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೊಸ ನಿಯಮದ ಪ್ರಕಾರ ಅಧಿಕೃತ ದಾಖಲೆಗಳನ್ನು ಬಳಸದೆಯೇ ಜನರು ಈಗ ತಮ್ಮ ಆಧಾರ್ ಕಾರ್ಡ್‌ಗಳಲ್ಲಿನ ವಿಳಾಸವನ್ನು ಬದಲಾಯಿಸಬಹುದು. ಹೊಸ ನಿಯಮಗಳ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆಧಾರ್ ಪೋರ್ಟಲ್‌ನಲ್ಲಿ ತಮ್ಮ ವಿಳಾಸವನ್ನು ಬದಲಾಯಿಸಬಹುದು. ಆಧಾರ್‌ನಲ್ಲಿನ ಆನ್‌ಲೈನ್ ವಿಳಾಸ ನವೀಕರಣವು ತಮ್ಮ ಸ್ವಂತ ಹೆಸರಿನಲ್ಲಿ ಪೋಷಕ ದಾಖಲೆಗಳನ್ನು ಹೊಂದಿರದ ಮಕ್ಕಳು, ಸಂಗಾತಿಗಳು, ಪೋಷಕರು ಮುಂತಾದ ನಿವಾಸಿಗಳ ಸಂಬಂಧಿಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಮನೆಯ ವಿಳಾಸವನ್ನು ಬದಲಿಸಲು ಇಷ್ಟು ದಿನ ಅಗತ್ಯ ದಾಖಲೆಗಳನ್ನು ಒದಗಿಸಲು ಹರಸಾಹಸ ಪಡಬೇಖಿತ್ತು. ಮನೆಯ ಮುಖ್ಯ ಸದಸ್ಯರ ಹೆಸರಲ್ಲಿ ವಿಳಾಸದ ದಾಖಲೆಗಳು ಬೇಕಾಗುತ್ತಿತ್ತು. ಆದರೆ ಈಗ ಅದರ ಅಗತ್ಯವಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿದೆ. ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಾಯಿಸಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರಂತೆ, ವಿಳಾಸವನ್ನು ಬದಲಾಯಿಸಲು ಇಚ್ಛಿಸುವವರು ಕುಟುಂಬದ ಮುಖ್ಯಸ್ಥರ ಜೊತೆಗಿನ ಸಂಬಂಧದ ಬಗ್ಗೆ ದಾಖಲೆ ಸಿದ್ಧಪಡಿಸಿಕೊಳ್ಳಿ.

ಯಾವ ದಾಖಲೆಯೂ ಇಲ್ಲದಿದ್ದರೂ, ಕುಟುಂಬ ಮುಖ್ಯಸ್ಥರಿಂದ ಒಂದು ಪತ್ರವನ್ನು ಪಡೆದರೆ ಸಾಕು. ಇದನ್ನು ಯುಐಡಿಎಐ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿ. ಕುಟುಂಬ ಮುಖ್ಯಸ್ಥರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದಕ್ಕೆ ನೀವು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಒಮ್ಮೆ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ತುಂಬಿಸಿದರೆ, ಮುಗಿಯಿತು. ತಿಂಗಳೊಳಗೆ ಅಪ್ ಡೇಟೆಡ್ ಕಾರ್ಡ್ ಬರುತ್ತದೆ.

18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ನಿವಾಸಿ ಈ ಸೌಲಭ್ಯವನ್ನು ಪಡೆಯಲು, ಜನರಿಗೆ ಕೇವಲ ಎರಡು ದಾಖಲೆಗಳು ಬೇಕಾಗುತ್ತವೆ. ಅರ್ಜಿದಾರರು ಮತ್ತು ಕುಟುಂಬದ ಮುಖ್ಯಸ್ಥರ ನಡುವಿನ ಸಂಬಂಧದ ಪುರಾವೆಯೊಂದಿಗೆ ಡಾಕ್ಯುಮೆಂಟ್ ಪಡೆಯಬೇಖು. ಹಾಗೆಯೇ ಮನೆಯ ಮುಖ್ಯಸ್ಥರ ಮೊಬೈಲ್‌ ಗೆ OTP ಬರುವುದನ್ನು ಪಡೆಯಬೇಕು. ದಾಖಲೆಯು ಪಡಿತರ ಚೀಟಿ, ಮದುವೆ ಪ್ರಮಾಣಪತ್ರ, ಪಾಸ್‌ಪೋರ್ಟ್ ಇತ್ಯಾದಿಗಳ ರೂಪದಲ್ಲಿರಬಹುದು. ಅರ್ಜಿದಾರರ ಮತ್ತು ಮನೆಯ ಮುಖ್ಯಸ್ಥರ ಹೆಸರನ್ನು ನಮೂದಿಸಬಹುದು. ಡಾಕ್ಯುಮೆಂಟ್‌ ಅನ್ನು ಸಲ್ಲಿಸಲು UIDAI ವೆಬ್‌ ಸೈಟ್‌ ನಲ್ಲೂ ಸುಲಭವಾಗಿ ವಿಳಾಸ ಬದಲಿಸಬಹುದು.

ವಿಳಾಸವನ್ನು ನವೀಕರಿಸುವ ಮೊದಲ ಹಂತವೆಂದರೆ ‘ಮೈ ಆಧಾರ್’ ಪೋರ್ಟಲ್‌ಗೆ ಲಾಗ್ ಇನ್ ಮಾಡಿ ಮತ್ತು ಹೊಸ ಆಯ್ಕೆಯನ್ನು ಆರಿಸುವುದು. ಅದರ ನಂತರ, ಮನೆಯ ಮುಖ್ಯಸ್ಥರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಮೌಲ್ಯೀಕರಿಸಬೇಕು. ಪ್ರಕ್ರಿಯೆಯ ಮುಂದಿನ ಹಂತವು ಸಂಬಂಧದ ದಾಖಲೆಯ ಪುರಾವೆಯನ್ನು ಪೋಸ್ಟ್ ಮಾಡುವುದು ಮತ್ತು ಸೇವೆಗಾಗಿ ರೂ 50 ಪಾವತಿಸುವುದು. ವಿಳಾಸ ನವೀಕರಣದ ಕುರಿತು ಮನೆಯ ಮುಖ್ಯಸ್ಥರಿಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಅಧಿಸೂಚನೆಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಮೈ ಆಧಾರ್ ಪೋರ್ಟಲ್‌ನಲ್ಲಿ ವಿನಂತಿಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

Related News

spot_img

Revenue Alerts

spot_img

News

spot_img