ಮುಂಬೈ: ಬಾಲಿವುಡ್ ಎಂದರೆ ಗ್ಲಾಮರ್. ಅಲ್ಲಿನ ಬೆಳೆದ ಜನ ಎನು ಮಾಡಿದರೂ ಸುದ್ದಿಯಾಗುತ್ತಾರೆ. ಸಿನಿಮಾ ಮಾಡಿದರೂ ಸುದ್ದಿ, ಮದುವೆಯಾದರೂ ಸುದ್ದಿ, ಮನೆ ಖರಿದಿಸಿದರೂ ಸುದ್ದಿ, ಮಕ್ಕಳಾದೂ ಸುದ್ದಿ. ಈಗ ಅದೇ ರೀತಿ ಬಾಲಿವುಡ್ ನಟಿ, ನಿರ್ಪಾಪಕ ಬೋನಿ ಕಪೂರ್ ಮಗಳು ಜಾಹ್ನವಿ ಕಪೂರ್ ಸುದ್ದಿಯಾಗಿದ್ದಾರೆ.
ನಟಿ ಜಾಹ್ನವಿ ಕಪೂರ್, ಆಕೆಯ ಸಹೋದರಿ ಖುಷಿ ಮತ್ತು ತಂದೆ ಬೋನಿ ಕಪೂರ್ ಜೊತೆ ಸೇರಿ ಮುಂಬೈನ ಬಾಂದ್ರಾದಲ್ಲಿ 65 ಕೋಟಿ ಬೆಲೆ ಬಾಳುವ ಬಂಗಲೆ ಖರೀದಿಸಿದ್ದಾರೆ.
ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಪಾಲಿ ಹಿಲ್‌ನ ಯೂನಿಯನ್ ಪಾರ್ಕ್ ರಸ್ತೆಯಲ್ಲಿರುವ ಕುಬೆಲಿಸ್ಕ್ ಬಿಲ್ಡಿಂಗ್‌ನ ಮೊದಲ ಮತ್ತು ಎರಡನೇ ಮಹಡಿಯಲ್ಲಿ 8,669 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದಾರೆ. ಅಪಾರ್ಟ್ಮೆಂಟ್ ಜೊತೆಗೆ, ಆಸ್ತಿಯು ಸುತ್ತಲೂ ತೆರೆದ ಉದ್ಯಾನ ಪ್ರದೇಶವನ್ನು ಮತ್ತು ಮೊದಲನೆಯ ವಿಶೇಷ ಈಜುಕೊಳವನ್ನು ಒಳಗೊಂಡಿದೆ.
ಬಿಲ್ಟ್-ಅಪ್ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ ಸುಮಾರು 75,000 ರೂ.ಗಳನ್ನು ಪಾವತಿಸಿದ್ದಾರೆ. ಕಾರ್ಪೆಟ್ ಏರಿಯಾದಲ್ಲಿ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್‌ನ ಬೆಲೆ ಪ್ರತಿ ಚ.ಅಡಿಗೆ 1.01 ಲಕ್ಷ ರೂ. ವರೆಗೆ ಇದೆ.
ಒಪ್ಪಂದದ ಪ್ರಕಾರ, ಈ ಮನೆಯ ಖರೀದಿದಾರರು ಐದು ಕಾರ್ ಪಾರ್ಕಿಂಗ್ ಸ್ಲಾಟ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಖರೀದಿದಾರರು ಒಪ್ಪಂದದ ನೋಂದಣಿಗಾಗಿ 3.90 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ.
ಜಾನ್ವಿ ಕಪೂರ್ ಕಳೆದ ಜುಲೈನಲ್ಲಿ ಮುಂಬೈನ ಬೆಲೆಬಾಳುವ ಜುಹ್‌ನಲ್ಲಿ ಐಷಾರಾಮಿ ಟ್ರಿಪ್ಲೆಕ್ಸ್ ಅಪಾರ್ಟ್‌ಮೆಂಟ್‌ವೊಂದನ್ನು ಮಾರಾಟ ಮಾಡಿದ್ದರು. ನಟ ರಾಜ್‌ಕುಮಾರ್ ರಾವ್ ಅವರಿಗೆ ಮಾರಾಟ ಮಾಡಿದ್ದ ಈ ಅಪಾರ್ಟ್‌ಮೆಂಟ್ ಬೆಲೆ ಸುಮಾರು 44 ಕೋಟಿ ರೂ. ಆಗಿತ್ತು. ಜೆವಿಪಿಡಿ ಯೋಜನೆಯಡಿ ಜಾಹ್ನವಿ ಈ ಅಪಾರ್ಟ್‌ಮೆಂಟ್ ಪಡೆದಿದ್ದರು.
ಮುಂಬೈ, ದೇಶದ ಅತಿದೊಡ್ಡ ಮತ್ತು ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿದೆ. ಮಹಾರಾಷ್ಟ್ರ ಸರ್ಕಾರ 2020ರಲ್ಲಿ ಜಾರಿ ಮಾಡಿದ ಹೊಸ ಸ್ಟ್ಯಾಂಪ್ ಡ್ಯೂಟಿ ನಿಯಮಗಳ ನಂತರ ಇತ್ತೀಚೆಗೆ ಆಸ್ತಿ ವಹಿವಾಟುಗಳೊಂದಿಗೆ ಹೊಸ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಗಮನಾರ್ಹ ಆದರೆ ಸೀಮಿತ ಅವಧಿಯ ಸ್ಟ್ಯಾಂಪ್ ಡ್ಯೂಟಿ ಕಡಿತದ ವಿಂಡೋ ಮಾರ್ಚ್ ನಲ್ಲಿ ಕೊನೆಗೊಂಡಿತು.