21.1 C
Bengaluru
Monday, July 8, 2024

ವೇದಿಕ್ ವಾಸ್ತು ಪ್ರಕಾರ ಪಶ್ಚಿಮ ದಿಕ್ಕಿನ ನಿವೇಶನದಲ್ಲಿ ಯಾವ ಭಾಗದಲ್ಲಿ ಮಹಾದ್ವಾರ ಇಡಬೇಕು?

ವೇದಿಕ್ ವಾಸ್ತುವಿನಲ್ಲಿ ನಿವೇಶನ, ಮನೆ ವಾಸ್ತುವಿಗೆ ಇರುವಷ್ಟೇ ಮಹತ್ವ ಮುಖ್ಯದ್ವಾರಕ್ಕೂ ಇದೆ. ಯಾವ ದಿಕ್ಕಿನಲ್ಲಿ ಯಾವ ಸಮ ಭಾಗದಲ್ಲಿ ಮಹಾದ್ವಾರ ಇಟ್ಟರೆ ಒಳ್ಳೆಯದು ಎಂಬುದರ ಬಗ್ಗೆ ವೇದಿಕ್ ವಾಸ್ತು ಶಾಸ್ತ್ರ ಅತಿ ಸ್ಪಷ್ಟವಾಗಿ ತಿಳಿಸುತ್ತದೆ. ಪೂರ್ವ, ಉತ್ತರ, ದಕ್ಷಿಣ ದಿಕ್ಕಿನ ಯಾವ ಸಮಭಾಗದಲ್ಲಿ ಮಹಾದ್ವಾರ ಇಟ್ಟರೆ ಒಳ್ಳೆಯದು ಎಂಬುದರ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ಇದೀಗ ಪಶ್ಚಿಮ ದಿಕ್ಕಿನ ಯಾವ ಭಾಗದಲ್ಲಿ ಮಹಾದ್ವಾರ ಇಟ್ಟರೆ ಒಳ್ಳೆಯದಾಗುತ್ತದೆ, ಯಾವ ಭಾಗದಲ್ಲಿ ಇಟ್ಟರೆ ಕೆಡಕು ಆಗುತ್ತದೆ ಎಂಬುದರ ಬಗ್ಗೆ ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ಇಲ್ಲಿ ತ್ರಿಡಿ ಚಿತ್ರಪಟ ಮೂಲಕ ಸಮಗ್ರವಾಗಿ ಜನರಿಗೆ ತಿಳಿಸಿಕೊಟ್ಟಿದ್ದಾರೆ.

ಪಶ್ಚಿಮ ದಿಕ್ಕು ಅಂದರೆ ಬಹುತೇಕರು ನಿವೇಶನ ಖರೀದಿಗೆ ಹಿಂದೇಟು ಹಾಕುತ್ತಾರೆ. ಪಶ್ಚಿಮ ದಿಕ್ಕು ಸೂರ್ಯ ಮುಳುಗುವ ದಿಕ್ಕು. ಹೀಗಾಗಿ ಬಹುತೇಕರು ಸೂರ್ಯ ಮುಳುಗುವ ಕಡೆ ಮುಖ್ಯ ಬಾಗಿಲು ಇಡಲು ಹಿಂದೇಟು ಹಾಕುತ್ತಾರೆ. ಆ ದಿಕ್ಕಿನ ಕಡೆ ತಲೆ ಹಾಕಿ ಮಲಗೋದು ಬೇಡ ಅಂತಲೇ ಮತನಾಡುತ್ತಾರೆ. ವಾಸ್ತವದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಸರಿಯಾದ ಭಾಗದಲ್ಲಿ ಮಹಾದ್ವಾರ ಇಟ್ಟರೆ ಒಳಿತಾಗುತ್ತದೆ. ಸ್ವಲ್ಪ ಯಾಮಾರಿದರೂ ಮಹಾ ಪ್ರಮಾದಗಳಿಗೂ ನಾಂದಿ ಹಾಡಬಹುದು.

ಪಶ್ಚಿಮ ದಿಕ್ಕಿನ ನಿವೇಶನ ಸಮಭಾಗ ಮಾಡುವುದು ಹೇಗೆ:
ಪಶ್ಚಿಮ ದಿಕ್ಕಿನ ನಿವೇಶನದಲ್ಲಿ ವಾಯುವ್ಯ ದಿಕ್ಕಿನಿಂದ ನೈರುತ್ಯ ದಿಕ್ಕಿನವರೆಗೆ ಎಂಟು ಸಮಭಾಗ ಮಾಡಿ ಒಂದು ಎರಡು, ಮೂರು ಎಂದು ಎಂಟು ಸಮಭಾಗ ಗುರುತು ಹಾಕಿಕೊಳ್ಳಬೇಕು. ವಾಯುವ್ಯ ದಿಕ್ಕಿನಿಂದ ಮೊದಲ ಸಮ ಭಾಗ ಗುರುತು ಮಾಡಬೇಕು. ಆನಂತರ ಕ್ರಮವಾಗಿ ಸಮ ಭಾಗಗಳಿಗೆ ಸಂಖ್ಯೆ ನೀಡಬೇಕು.

ಪಶ್ಚಿಮ ದಿಕ್ಕಿನ ಒಂದನೇ ಸಮಭಾಗದಲ್ಲಿ ಮಹದ್ವಾರ ಇದ್ದರೆ:
ಪಶ್ಚಿಮ ದಿಕ್ಕಿನ ಮನೆ ಅಥವಾ ನಿವೇಶನಕ್ಕೆ ಮೊದಲ ಸಮ ಭಾಗದಲ್ಲಿ ಮಹಾದ್ವಾರ ಇಡುವುದು ಅತಿ ಅಪಾಯಕಾರಿ. ಈ ಮಹಾದ್ವಾರವು ಮನೆ ಮಾಲೀಕನ ಹಣಕಾಸಿನ ಸ್ಥಿತಿಯನ್ನು ಜೀವತಾವಧಿ ವರೆಗೂ ಅಡ್ಡಪರಿಣಾಮ ಬೀರುತ್ತದೆ. ಅಂದರೆ ಜೀವನ ಪರ್ಯಂತ ಆರ್ಥಿಕ ಸ್ಥಿತಿ ಉತ್ತಮವಾಗಿರುವುದಿಲ್ಲ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.

ಪಶ್ಚಿಮ ಎರಡನೇ ಸಮಭಾಗದಲ್ಲಿ ಇಟ್ಟರೆ:
ಪಶ್ಚಿಮ ದಿಕ್ಕಿನ ಎರಡನೇ ಸಮ ಭಾಗದಲ್ಲಿ ಮಹಾದ್ವಾರ ಇಟ್ಟರೆ ವೃತ್ತಿ ಜೀವನದ ಮೇಲೆ ಅಸ್ತಿರತೆ ಉಂಟಾಗುತ್ತದೆ. ಈ ಮನೆಯಲ್ಲಿ ವಾಸ ಮಾಡುವರಿಗೆ ಜೀವನದ ಅಂಶಗಳ ಮೇಲೆ ಯೋಚನೆ ಮಾಡುವ ಚಿಂತನೆಗಳು ಸಫಲ ಆಗುವುದಿಲ್ಲ. ದೃಷ್ಟಿ ಸ್ಪಷ್ಟತೆ ಸಹ ಹೊಂದಿರುವುದಿಲ್ಲ. ಇಷ್ಟವಾದವರನ್ನು ಮತ್ತು ಸಮೀಪದ ಸಂಬಂಧಿಗಳನ್ನು ನಂಬಲ್ಲ. ಅಸುರಕ್ಷತೆ ಭಾವನೆ ಹೊಂದಿರುತ್ತಾರೆ ಎಂದು ವೇದಿಕ್ ವಾಸ್ತು ಶಾಸ್ತ್ರ ತಜ್ಞ ನಯನ್ ಕುಮಾರ್ ಸಲಹೆ ನೀಡಿದ್ದಾರೆ.

ಪಶ್ಚಿಮದ ಮೂರನೇ ಸಮ ಭಾಗ: ಪಶ್ಚಿಮ ದಿಕ್ಕಿನ ಮೂರನೇ ಸಮ ಭಾಗದಲ್ಲಿ ಮಹಾದ್ವಾರ ಇಟ್ಟರೆ ಮನೆ ಮಾಲೀಕರು ಅದ್ಬುತ ಬೆಳವಣಿಗೆ ಕಾಣುತ್ತಾರೆ. ನಂಬಲಾಗದ ಮತ್ತು ಆಪೇಕ್ಷಣೀಯವಾಗಿ ಸಂವೃದ್ಧಿ ಹೊಂದುತ್ತಾರೆ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ. ಅದ್ಭುತ ಬೆಳವಣಿಗೆ, ನಂಬಲಾಗದ ಮತ್ತು ಆಪೇಕ್ಷಣೀಯ ಸಂವೃದ್ಧೀಯ ದ್ವಾರ ಅಗುತ್ತದೆ.

ಪಶ್ಚಿಮ ನಾಲ್ಕನೇ ಸಮಭಾಗ: ಯಾವುದೇ ನಿರ್ದಿಷ್ಟ ಪ್ರಯೋಜನೆಗಳನ್ನು ಅಥವಾ ಹಾನಿ ನೀಡದು. ಸಾಮಾನ್ಯವಾಗಿ ಉತ್ತಮ ಜೀವನ ಕಲ್ಪಿಸುತ್ತದೆ. ಒಳ್ಳೆಯ ಪ್ರವೇಶ ದ್ವಾರ.

ಪಶ್ಚಿಮ ಐದನೇ ಸಮಭಾಗ: ಈ ಪ್ರವೇಶವು ಒಂದು ಪರಿಪೂರ್ಣಿತ ಅವಧಿ ಮಹದಾಸೆ ಉಂಟು ಮಾಡುತ್ತದೆ. ಲಾಭ ದಾಯಕ ಎಂದು ಸಾಬೀತು ಪಡಿಸುವ ಲಾಭ, ಹೆಚ್ಚಳ ಮಾಡುವ ದ್ವಾರ.

ಪಶ್ಚಿಮ ಆರನೇ ಸಮಭಾಗ: ಈ ಪ್ರವೇಶವು ಜನರ ಮಾನಸಿಕ ಖಿನ್ನತೆಗೆ ಒಳಗಗುತ್ತಾರೆ.

ಪಶ್ಚಿಮ ಏಳನೇ ಸಮಭಾಗ: ಸಾಮಾನ್ಯ ಸಂತೋಷ ಉಂಟು ಮಾಡುತ್ತದೆ. ಕೆಲವು ನಿವಾಸಿಗಳು ಮಧ್ಯಪಾನ , ದುರ್ವಸನಕ್ಕೆ ಮೊರೆ ಹೊಉಗತ್ತಾರೆ.

ಪಶ್ಚಿಮ ಎಂಟನೇ ಸಮಭಾಗ: ಮನೋಧರ್ಮದ ಮೇಲೆ ಪರಿಣಾಮ ಬೀರುತ್ತದೆ. ತಮ್ಮ ಸ್ವಯಂ ಪ್ರಯೋಜನಗಳಿಗೆ ಅನ್ಯಾಯದ ಮತ್ತು ಕಾನೂನು ಬಾಹಿರ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುವುದಿಲ್ಲ. ವಂಚಕರು ಮಾಡ್ತಾರೆ. ಮೋಸ ಮಾಡೋಕೆ ಬೇಜಾರು ಮಾಡಲ್ಲ. ಒಳ್ಳೆಯದು ಅಲ್ಲ ಈ ದ್ವಾರ.

Related News

spot_img

Revenue Alerts

spot_img

News

spot_img